ಸುದ್ಧಿ

*ತಿಗಳ ಮತ್ತು ವಹ್ನಿಕುಲ ಕ್ಷತ್ರಿಯ ಸಮುದಾಯ ಬೇರೆ,ಬೇರೆ: ರಾಜಕೀಯ ಬೇಳೆ ಬೇಯಿಸಿಕೊಳ್ಳುಲು ನೆ.ಲ.ನರೇಂದ್ರಬಾಬು, ಪಿ.ಆರ್.ರಮೇಶ್ ಹುನ್ನಾರ – ಗಿರೀಷ್ .

*ತಿಗಳ ಮತ್ತು ವಹ್ನಿಕುಲ ಕ್ಷತ್ರಿಯ ಸಮುದಾಯ ಬೇರೆ,ಬೇರೆ: ರಾಜಕೀಯ ಬೇಳೆ ಬೇಯಸಿಕೊಳ್ಳುಲು ನೆ.ಲ.ನರೇಂದ್ರಬಾಬು, ಪಿ.ಆರ್.ರಮೇಶ್ ಹುನ್ನಾರ – ಗಿರೀಷ್ .

ಇದೇ ಸಂದರ್ಭದಲ್ಲಿ ವರ್ತೂರು ಜೆ.ಕೆ.ಗಿರೀಶ್ ರವರು ಮಾತನಾಡಿ ತಿಗಳ ಮತ್ತು ವಹ್ನಿಕುಲ ಸಮುದಾಯ ಅಚಾರ, ವಿಚಾರಗಳು ಬೇರೆ ಈಗಾಗಲೇ 200ವರ್ಷಗಳ ಹಿಂದೆಯ ಬ್ರಿಟಿಷರ ಸರ್ಕಾರದ ಅವಧಿಯಲ್ಲಿ ದಾಖಲೆಗಳು ಇದೆ. ನಮ್ಮ ಜನಾಂಗದ ಸೇವೆಯ ಬಗ್ಗೆ ಸರ್ಕಾರಕ್ಕೈ ದಾಖಲೆಗಳನ್ನು ಒದಗಿಸಲಾಗಿದೆ ಎಂದರು.

ತಿಗಳ ಸಮುದಾಯ 3ಲಕ್ಷ ಜನಸಂಖ್ಯೆ ಇದೆ ವಹ್ನಿಕುಲ ಕ್ಷತ್ರಿಯ ಪಂಗಡ 30ಲಕ್ಷ ಜನಸಂಖ್ಯೆ ಇದ್ದಾರೆಂದರು.

  ತಿಗಳ ಮತ್ತು ವಹ್ನಿಕುಲ ಕ್ಷತ್ರಿಯ ಒಂದೇ ಜಾತಿ ಎಂದು ತಿಗಳ ಸಮುದಾಯದ ರಾಜಕೀಯ ಮುಖಂಡರಾದ ಮಾಜಿ ಶಾಸಕ ನೆ.ಲ.ನರೇಂದ್ರಬಾಬು, ಮಾಜಿ ಎಂ.ಎಲ್.ಸಿ.ಪಿ.ಆರ್.ರಮೇಶ್ ರವರು, ತಿಗಳ ಮಹಾಸಭಾದ ಅಧ್ಯಕ್ಷರಾದ ನಿವೃತ್ತ ಎಸಿಪಿ ಸುಬ್ಬಣ್ಣ ರಾಜಕೀಯ ಬೇಳೆ ಬೆಯಿಸಿಕೊಳ್ಳುತ್ತಿದ್ದಾರೆಂದು ಆರೋಪಿಸಿದರು.

   ಈಗಾಗಲೇ ಹಿಂದುಳಿದ ಆಯೋಗದಲ್ಲಿ ನ್ಯಾಯಾಲಯ ಕೇಸ್ ದಾಖಲಾಗಿದ್ದು ಸಮರ್ಪಕ ದಾಖಲೆ ತಿಗಳ ಸಮುದಾಯ ನೀಡದೇ ಇರುವುದು ಸೋಚನೀಯವೆಂದರು.

ಜಿಲ್ಲಾಧಿಕಾರಿಗಳಾದ ಕೆ.ಎ.ದಯಾನಂದ್ ರವರಿಗೆ ವಹ್ನಿಕುಲ ಸಮುದಾಯ ದಾಖಲೆ ನೀಡಿ ಪ್ರತ್ಯೇಕವಾಗಿ ನಮ್ಮ ಸಮುದಾಯ ನೋಡಬೇಕು ಎಂದು ಆದೇಶ ನೀಡಬೇಕು ಎಂದರು ರಾಜಕೀಯ ಮುಖಂಡರುಗಳ ಜೊತೆಯಲ್ಲಿ ಷಾಮೀಲಾಗಿ, ತಿಗಳ ಜಾತಿಗೂ ವಹ್ನಿಕುಲ ಕ್ಷತ್ರಿಯ ಜಾತಿಯ ಪ್ರತ್ಯೇಕತೆಯ ಜಾತಿಕಡತಕ್ಕೆ ಸಹಿ ಹಾಕುತ್ತಿಲ್ಲ ಅವರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಘದ ಅದ್ಯಕ್ಷ ಗೀರೀಷ್ ಆಗ್ರಹಿಸಿದರು.

ವಹ್ನಿಕುಲ ಕ್ಷತ್ರಿಯ ಶೈಕ್ಷಣಿಕ ಅಭಿವೃದ್ದಿಗಾಗಿ ಸರ್ಕಾರ 85ಕೋಟಿ ಅನುದಾನ ನೀಡಿದೆ ಇದರಲ್ಲಿ ಭ್ರಷ್ಟಚಾರ ಎಸೆಗಿದ್ದಾರೆ ಇದರ ಕುರಿತು ಲೋಕಾಯುಕ್ತದಲ್ಲಿ ತನಿಖೆ ಮಾಡಿ ನ್ಯಾಯ ಒದಗಿಸಬೇಕೆಂದು ಸರ್ಕಾರವನ್ನು ಡಿಮಾಂಡ್ ಮಾಡಿದರು.

ಕರಗ ಶಕೋತ್ಸವ ಮತ್ತು ದ್ರೌಪದಿ ಅಮ್ಮನವರ ಪೂಜೆ ವಹ್ನಿಕುಲ ಕ್ಷತ್ರಿಯ ಪಂಗಡದವರು ಅಚರಣೆ ಮಾಡಿಕೊಂಡು ಬರುತ್ತಿದ್ದು, ತಿಗಳ ಸಮುದಾಯ ಅಚರಣೆ ಮಾಡುತ್ತಿದೆ ಎಂದು ತಪ್ಪು ಮಾಹಿತಿ ಮಾಧ್ಯಮಗಳಲ್ಲಿ ಪ್ರಕಟನೆಯಾಗುತ್ತಿದೆ.ವಿಚಾರ ವ್ಯಕ್ತಪಡಿಸಿದರು.

ವಹ್ನಿಕುಲ ಕ್ಷತ್ರಿಯ ಸಮುದಾಯದವರ ನ್ಯಾಯ ಒದಗಿಸಬೇಕು ಎಂದು ವಿನಂತಿ ಮಾಡಿತ್ತೇವೆ ಎಂದು ಹೇಳಿದರು. ಅಧ್ಯಕ್ಷರಾದ ವರ್ತೂರು ಜೆ.ಕೆ.ಗಿರೀಶ್, ಉಪಾಧ್ಯಕ್ಷರಾದ ವೇಣು, ಗೌರವಾಧ್ಯಕ್ಷರಾದ ಪಾರ್ಥಸಾರಥಿರವರು ಭಾಗವಹಿಸಿದ್ದರು. ವರದಿ.ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button