ಸುದ್ಧಿ

ದಾವಣಗೆರೆ ಜಿಲ್ಲಾ ಬೀದಿ‌ ಬದಿಯ, ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯೆಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ( ನೋಂ). ಪ್ರತಿಭಟನೆ.

ಇದೇ ಫೆಬ್ರವರಿ ೨೬. ೨೦೨೪ ಸೋಮವಾರದಂದು ದಾವಣಗೇರೆ ನಗರ ಮತ್ತು ಸುತ್ತಮುತ್ತಲಿನ ದಾವಣಗೆರೆ ಜಿಲ್ಲಾ ಬೀದಿ‌ ಬದಿಯ, ಸ್ಥಿರ ಮತ್ತು ಸಂಚಾರಿ ಚಿಲ್ಲರೆ ವ್ಯೆಪಾರಸ್ಥರ ಕ್ಷೇಮಾಭಿವೃದ್ಧಿ ಸಂಘ ( ನೋಂ) ದಾವಣಗೇರೆ ನಗರದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ಹಮ್ಮಿಕೊಂಡಿದ್ದಾರೆ.

ಈ ಸಮಾವೇಶದಲ್ಲಿ ವ್ಯಾಪಾರಿಗಳ ಸಮಸ್ಯೆಗಳ ಪರಿಹಾರಕ್ಕಾಗಿ, ಹಲವಾರು ಸೌಲಭ್ಯ ದೊರಕಿಸಿಕೊಡಲು ತಮ್ಮ ಬೇಡಿಕೆಗಳನ್ನು ಈಡೇರಿಸಲು ಸರಕಾರಕ್ಕೆ ಒತ್ತಾಯಿಸಿ ದಾವಣಗೆರೆ ಜಿಲ್ಲಾಡಳಿತದ ಮೂಲಕ ಸರಕಾರಕ್ಕೆ ಮನವಿ ಅರ್ಪಿಸಲು ಎಲ್ಲಾ ವ್ಯಾಪಾರಿಗಳು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.

ದಾವಣಗೆರೆ ನಗರ ಹಾಗೂ ಜಿಲ್ಲೆ ಎಲ್ಲಾ ತಾಲ್ಲೂಕು ಪಟ್ಟಣ, ಹೊಬಳಿಯಲ್ಲಿ ವ್ಯಾಪಾರ ನಡೆಯಿಸುತ್ತಿರುವ ಎಲ್ಲಾ ಚಿಕ್ಕಪುಟ್ಟ, ಬೀದಿ ಬದಿಯ, ಕಿರುಕುಳ ವ್ಯಾಪಾರಿಗಳು ಈ ಪ್ರತಿಭಟನಾ ಹೋರಾಟದಲ್ಲಿ ಪಾಲ್ಗೊಂಡು ನಮ್ಮ ಶಕ್ತಿ ತೋರಿಸಬೇಕು‌ ಮತ್ತು ನಮ್ಮ ಬೇಡಿಕೆ ಈಡೆರಿಕೆಗಾಗಿ ಒತ್ತಾಯಿಸಲು ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ಬಂದು ಸೇರಬೇಕೆಂದು ದಾವಣಗೆರೆಯ ಬೀದಿ ಬದಿ ವ್ಯಾಪಾರ ಸಂಘದ ಅಧ್ಯಕ್ಷರು ವಿನಂತಿಸಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button