ಸುದ್ಧಿ
ದಿ//ಶ್ರೀ ನರೇಶ ಕುಮಾರ ಸೇವಾ ಸಂಸ್ಥೆ (ರಿ) ಸುರಪುರ ವತಿಯಿಂದ ಹಸುವಿನ ಅಂತ್ಯಸಂಸ್ಕಾರ.
ದಿ//ಶ್ರೀ ನರೇಶ ಕುಮಾರ ಸೇವಾ ಸಂಸ್ಥೆ (ರಿ) ಸುರಪುರ ವತಿಯಿಂದ ಹಸುವಿನ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
04-09-24 ರಂದು ಸುರಪುರ ನಗರದ ಬಸ್ ನಿಲ್ದಾಣದಲ್ಲಿ ಹಸುವೊಂದು ಸಾವನ್ನೊಪ್ಪಿದ ವಿಷಯ ಸಂಸ್ಥೆಗೆ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿ ನಗರಸಭೆ ಸಿಬ್ಬಂದಿಗಳ ಸಹಕಾರದೊಂದಿಗೆ ಹಸುವನ್ನು ತೆಗೆದುಕೊಂಡು ಹೋಗಿ ಹಿಂದೂ ಸಂಪ್ರದಾಯದಂತೆ ಹಸುವಿನ ಅಂತ್ಯಸಂಸ್ಕಾರದ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ
ಅಧ್ಯಕ್ಷ ನಾಗರಾಜ ನಾಯಕ , ಸಂಸ್ಥೆಯ ಕಾರ್ಯದರ್ಶಿ ಹಾಗೂ ಸಾಮಾಜಿಕ ಕಾರ್ಯಕರ್ತ ಸಚಿನ ಕುಮಾರ ನಾಯಕ , ಗುರುನಾಥ ರೆಡ್ಡಿ, ಸಚಿನ ಹಳ್ಳದಮನಿ , ದರ್ಶನ , ಮುತ್ತಪ್ಪ , ಬಸವರಾಜ , ಗೋಪಾಲ ನಾಯಕ ಹಾಗೂ ಇನ್ನಿತರರು ಇದ್ದರು. ಯಾದಗಿರಿ ಜಿಲ್ಲಾ ವರದಿಗಾರರು ಗುಂಡಪ್ಪನವರು



