ಸುದ್ಧಿ

ನಿರುದ್ಯೋಗಿ ಯುವಕ/ಯುವತಿಯರ ಬದುಕಿಗೆ ಬುತ್ತಿ ಕಟ್ಟಿ ಕೊಡುತ್ತಿರುವ ದಾವಣಗೇರೆ ನಗರದ ತರಬೇತಿ ಕೇಂದ್ರ.

ನಿರುದ್ಯೋಗಿ ಯುವಕ/ಯುವತಿಯರಿಗೆ ಬದುಕಿಗೆ ಬುತ್ತಿ ಕಟ್ಟಿ ಕೊಡುತ್ತಿರುವ ದಾವಣಗೇರೆ ನಗರದ ಶಾಖಾ ಕಾರ್ಯಾಲಯ.

ಶ್ರೀ ಟೆಕ್ನಾಲಜಿ ಹೈದರಾಬಾದ್ ತೆಲಂಗಾಣ ಈ ಮುಖ್ಯ ಕಾರ್ಯಾಲಯದ ಬ್ರಾಂಚ್ ಆಫೀಸ್ ( ಶಾಖಾ ಕಾರ್ಯಾಲಯ) ವಿದ್ಯಾನಗರ ದಾವಣಗೆರೆಯಲ್ಲಿ ಸುಮಾರು ವರ್ಷಗಳಿಂದ‌ ಜನಪ್ರೀಯ, ಜನೋಪಯೋಗಿ ಕಾರ್ಯ ಮಾಡುತ್ತಿದೆ. ತನ್ಮೂಲಕ ನಿರುದ್ಯೊಗಿ/ಯುವತಿಯರಿಗೆ ಬದುಕಿಗೆ ಬುತ್ತಿ ಕಟ್ಟಿಕೊಡುವ ಶ್ಲಾಘನೀಯ ಕೆಲಸ ಮಾಡುತ್ತಿದೆ. ಹಲವಾರು ನೂರು ನಿರುದ್ಯೋಗಿ ಯುವಕ ಯುವತಿಯರಿಗೆ ಹಲವಾರು ಥರಹದ ಯೋಜನೆಗಳನ್ನು ಈ ಶಾಖಾ ಕಾರ್ಯಾಲಯದಿಂದ ಹಮ್ಮಿಕೊಂಡು, ಕಾರ್ಯೋನ್ಮುಕರಾಗಿದೆ. ತರಬೇತಿಯ ವೇಳೆಯಲ್ಲಿ ಅಭ್ಯರ್ಥಿಗಳಿಗೆ ತರಬೇತಿ ಭತ್ಯೆ, ತರಬೇತಿ ನಂತರ ಸ್ವತಃ ಉದ್ಯೋಗ ಮಾಡಲು ಇಚ್ಚಿಸಿದರೆ ಅಂಥಹವರಿಗೆ ಬ್ಯಾಂಕ ಸಾಲದ ಸೌಲಭ್ಯದ ಅರಿವು ಮೂಡಿಸಿ ಅಂಥಹ ಆಕಾಂಕ್ಷಿಗಳಿಗೆ ಸಾಲ ಕೊಡಿಸಲೂ ಸಹ ಸಹಾಯ ಮಾಡುತ್ತಿದೆ. ಈಗಾಗಲೇ ತರಬೇತಿ ಸೌಲಭ್ಯ, ಸಾಲದ ಸೌಲಭ್ಯ ಪಡೆದು ಉದ್ಯೋಗ ಆರಂಭಿಸಿ ಜೀವನದಲ್ಲಿ ಯಶಸ್ವಿಯಾಗಿರುವ ಉದಾಹರಣೆಗಳನ್ನು ಶಾಖಾ ಕಾರ್ಯಾಲಯದ ಮ್ಯೆನೆಜಿಂಗನವರು ದಾಖಲೆಗಳೊಂದಿಗೆ ವಿವರಿಸುತ್ತಾರೆ.

ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯನ್ನು ಮೂರು ತಿಂಗಳಿನಿಂದ ಕಾರ್ಯಪ್ರವೃತ್ತರಾಗಿದ್ದಾರೆ. ಅದರಲ್ಲಿ ಕಾರ್ಪೆಂಟ್ರಿ, ಟೈಲರಿಂಗ್ ತರಬೇತಿ ಕೋರ್ಸ ಆರಂಭವಾಗಿ ಸದ್ಯ ಕೊನೆಯ ಹಂತದಲ್ಲಿದೆ. ಎನ್‌.ಎಸ್‌.ಡಿ.ಸಿ. ವತಿಯಿಂದ ಪಿ.ಎಂ. ವಿಶ್ವಕರ್ಮದ ಮಾನ್ಯತೆಯನ್ನು ಪಡೆದಿದ್ದು ಈ ಸಂಸ್ಥೆಯಲ್ಲಿ ತರಬೇತಿಗೆ ಬೇಕಾದಂತ ಎಲ್ಲಾ ಥರಹದ ಸಾಮಗ್ರಿಗಳೂ, ಸಲಕರಣೆಗಳು, ನುರಿತ ತರಬೇತುದಾರರು, ಶಿಕ್ಷಕರು ಹಾಗೂ ಪ್ರಬಲ ಕಾರ್ಯಪ್ರವೃತ ಮ್ಯಾನೇಜ್ಮೆಂಟ್ ಇರುತ್ತದೆ.

ಈಗಾಗಲೇ ತರಬೇತಿ ಹೊಂದಿರುವ ಕಾರ್ಪೆಂಟರ್ ಬ್ಯಾಚಿನವರಿಗೆ ಸರ್ಕಾರದಿಂದ ಸಿಕ್ಕುವ ಸೌಲಭ್ಯದ ವಿವರಗಳು ಅಭ್ಯರ್ಥಿಗಳಿಗೆ ಮಾಹಿತಿ ಮೊಬೈಲ್ ಮುಖಾಂತರ ಬಂದಿದೆ ಎಂದು ತಿಳಿಸಲು ಖುಷಿಯಾಗುತ್ತಿದೆ ಎನ್ನುತ್ತಾರೆ ಮ್ಯೆನೆಜಮೆಂಟಿನ ಅಧಿಕಾರಿಗಳು. ಹಾಗೂ ಟೈಲರಿಂಗ್ ತರಬೇತಿ ಮುಗಿಸಿದ ಫಲಾನುಭವಿಗಳಿಗೆ ಸರಕಾರದ ಸಂಭಂದಿಸಿದ ಇಲಾಖೆಯಿಂದ ನಾಲ್ಕು ಸಾವಿರ ಭತ್ಯೆ ಹಣವೂ ಕೂಡ ತರಬೇತಿ ಪಡೆದ ಅಭ್ಯರ್ಥಿಗಳ ಬ್ಯಾಂಕಿನ ಖಾತೆಗೆ ಜಮಾ ಆಗಿರುತ್ತದೆ.

ಪಿ.ಎಂ. ವಿಶ್ವಕರ್ಮ ಯೋಜನೆಯ ಐದು ದಿನದ ತರಬೇತಿಯಾಗಿದ್ದು 4000 ಭತ್ಯಯನ್ನು ಅಭ್ಯರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಆಗಿರುತ್ತದೆ. ಸಲಕರಣೆಗಳನ್ನು ಉಪಯೋಗಿಸ್ಕೊಂಡು ಪ್ರಾಜೆಕ್ಟ್ ಕೂಡ ಈ ಸಂಸ್ಥೆಯಿಂದ‌ ಮಾಡಿದ್ದಾರೆ. ಹಾಗೂ ಬಯೋಮೆಟ್ರಿಕ್ 85% ಮೇಲೆ ಇರುತ್ತದೆ ಎಂದು ಈ ಮುಖಾಂತರ ತಿಳಿಸುತ್ತೇವೆ ಎಂಬ ದಾಖಲೆ ತೋರಿಸುತ್ತಾರೆ. ಈ ನಾಲ್ಕು ಸಾವಿರ ಭತ್ತೆಯೊಂದಿಗೆ 15,000 ಹಣ, ಸಂಬಂಧಿಸಿದ ಇಲಾಖೆ ನೀಡುತ್ತದೆ ಎಂದು ಹೇಳುತ್ತಾರೆ ಹಾಗೂ ಒಂದು ಲಕ್ಷ ಲೋನ್ ವರೆಗೆ ಎಂ. ಎಸ್. ಎಮ್. ಇ. ಇಲಾಖೆಯಿಂದ ಸಾಲದ ಸೌಲಭ್ಯ ನೀಡಲಾಗುತ್ತದೆ.

ಈ ಸಂಸ್ಥೆಯು ಕೇವಲ ತರಬೇತಿ ಹಾಗೂ ಸರ್ಟಿಫಿಕೇಟ್ ಕೊಡಲು ಮಾತ್ರ ಸೀಮಿತವಾಗಿರುತ್ತದೆ. ಈ ಹಿಂದೆ ತರಬೇತಿಗಾಗಿ ಸೇರಿಕೊಂಡ ಫಲಾನುಭವಿಗಳು ಒಳ್ಳೋ ಳ್ಳೆಯ ಮಾಹಿತಿಯನ್ನು ಪಡೆದುಕೊಂಡು, ತರಬೇತಿ ಪಡೆದು ಜೀವನದಲ್ಲಿ ಸಂತೋಷವಾಗಿದ್ದಾರೆ.

ಅಭ್ಯರ್ಥಿಗಳಿಗೆ ತರಬೇತಿ, ಸರಕಾರದ ಸಬ್ಸಿಡಿ, ಎಮ್.ಎಸ್.ಎಮ್.ಇ. ಸಾಲದ ಸೌಲಭ್ಯ ಪಡೆದ ಈ ಸಂಸ್ಥೆಯ ಹಲವಾರು ಫಲಾನುಭವಿಗಳು ಸ್ವಂತತ್ರ ಉದ್ಯೋಗ ಆರಂಭಿಸಿ ಜೀವನದಲ್ಲಿ ಶ್ರಮವಹಿಸಿ, ಸಂತೋಷದಿಂದ ದುಡಿಮೆ‌ ಮಾಡುತ್ತಿದ್ದಾರೆಂದು ತಿಳಿಸಲು ತುಂಬಾ ಖುಷಿಯಾಗುತ್ತಿದೆ ಎನ್ನುತ್ತಾರೆ ಸಂಸ್ಥೆಯವರು. ಒಟ್ಟಿನಲ್ಲಿ ಈ ಸಂಸ್ಥೆಯು ನಿರುದ್ಯೋಗ ನಿರ್ಮೂಲನೆಗಾಗಿ ಸರಕಾರದ ಸಹಕಾರದೊಂದಿಗೆ ಹಲವಾರು ತರಬೇತಿ ಮಾಹಿತಿ ಕೊಟ್ಟು ನಿರುದ್ಯೋಗಿಗಳ ಬಾಳಿನಲ್ಲಿ ಬೆಳಕು ತಂದು ಪ್ರಾಂತಸ್ಮರಣೀಯ ಕಾರ್ಯ ಮಾಡುತ್ತಿರುವುದು ದಾವಣಗೇರೆ ನಗರದ ಜನರಲ್ಲಿ‌ ಕುತೂಹಲ ಮತ್ತು ಖುಷಿ ತಂದಿದ್ದಂತೂ‌ ನಿಜ. ಪ್ರಜಾಶ್ರೀ ಆನ್ಲೈನ್ ಕನ್ನಡ ಇಂಗ್ಲೀಷ ನ್ಯೂಜ ಪತ್ರಿಕೆ ಬೆಂಗಳೂರು. 9731113141

Related Articles

Leave a Reply

Your email address will not be published. Required fields are marked *

Back to top button