ನೂತನ ಅಧ್ಯಕ್ಷ – ಉಪಾಧ್ಯಕ್ಷರ ಪಟ್ಟಣ ಪಂಚಾಯಿತಿಯ ಪದಗ್ರಹಣ ಕಾರ್ಯಕ್ರಮ.ತುರವಿಹಾಳ
ನೂತನ ಅಧ್ಯಕ್ಷ – ಉಪಾಧ್ಯಕ್ಷರ ಪಟ್ಟಣ ಪಂಚಾಯಿತಿಯ ಪದಗ್ರಹಣ ಕಾರ್ಯಕ್ರಮ
ನೂತನ ಅಧ್ಯಕ್ಷ – ಉಪಾಧ್ಯಕ್ಷರು ಪಟ್ಟಣದ ಸರ್ವೋತ್ತೋಮುಖ ಅಭಿವೃದ್ಧಿ ಶ್ರಮಿಸಬೇಕು : ಶಾಸಕ ತುರ್ವಿಹಾಳ…
ಪ್ರಜಾಶ್ರೀ ಸುದ್ದಿ
ವಿಜಯ್ ಕುಮಾರ್ ಹಿರೇಮಠ
ತುರ್ವಿಹಾಳ :ಆಗಸ್ಟ್ 31 ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರು ಅವಿರೋಧವಾಗಿ ಆಯ್ಕೆಗೊಂಡು ಸೋಮವಾರ ಪದಗ್ರಹಣ ಕಾರ್ಯಕ್ರಮ ಪಟ್ಟಣ ಪಂಚಾಯಿತಿಯಲ್ಲಿ ನಡೆಯಿತು,ಹಿರಿಯ ಸದಸ್ಯರಾದ ಕೆ,ಶಾಮಿದಸಾಬ ಚೌದ್ರಿ ಅಧ್ಯಕ್ಷರಾಗಿ ಗಂಗಮ್ಮ ಭೋವಿ ಉಪಾಧ್ಯಕ್ಷರಾಗಿ ಪದಗ್ರಹಣ ಮಾಡಿದರು.ಮುಖ್ಯಾಧಿಕಾರಿ ಸಾಬಣ್ಣ ಕಟ್ಟೆಕಾರ್ ನೂತನ ಅಧ್ಯಕ್ಷ – ಉಪಾಧ್ಯಕ್ಷರಿಗೆ ಸ್ವಾಗತಿಸಿದರು.
ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸ್ಥಾನಕ್ಕೆ ಪದಗ್ರಹಣ ಸ್ವೀಕರಿಸಿ ಮಾತನಾಡಿದ ಕೆ. ಶಾಮಿದ್ ಸಾಬ್ ಚೌದ್ರಿ ಅವರು 14 ವಾರ್ಡಿನ ಜನರಿಗೆ ತೊಂದರೆಯಾಗದಂತೆ ಸಕಾಲಕ್ಕೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಚರಂಡಿ ವ್ಯವಸ್ಥೆ, ಕಸ ವಿಲೇವಾರಿ, ಇತರೆ ಸೌಕರ್ಯ ಕಲ್ಪಿಸುತ್ತೆನೆಂದು ಎಂದು ಹೇಳಿದರು.
ನಂತರ ನೂತನ ಪಟ್ಟಣ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನಿಸಿ ಶುಭ ಹಾರೈಸಿದ ಶಾಸಕ ಆರ್ ಬಸನಗೌಡ ತುರ್ವಿಹಾಳ ಅವರು ಮಾತನಾಡಿ
ಮುಂದಿನ ದಿನಗಳಲ್ಲಿ ಪಟ್ಟಣ ಅಭಿವೃದ್ಧಿ ಕಾರ್ಯಗಳಿಗೆ ಶ್ರಮಿಸುವಂತೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲನಗೌಡ ದೇವರಮನಿ,ಫಾರೂಕ್ ಸಾಬ್ ಖಾಜಿ,ಉಮರ ಸಾಬ್, ಮೌಲಪ್ಪಯ್ಯ ಗುತ್ತೇದಾರ್,ದೋಡ್ಡಪ್ಪ ಕಲ್ಗೂಡಿ, ಕರಿಲಿಂಗಪ್ಪ ಹಳ್ಳಿ, ಆರ್,ಶಿವನಗೌಡ,ಬಾಪುಗೌಡ ದೇವರಮನಿ,ಸಿರಾಜ್ ಪಾಷಾ ದಳಪತಿ,ಬಜೇಪ್ಪ ಕೂಂಟೊಜಿ, ಅಭಿಶೇಖ್ ಗೌಡ ಮಾಲಿ ಪಾಟೀಲ್,
ಯಲ್ಲಪ್ಪ ಭೋವಿ, ಸೋಮನಾಥ ಮಾಟೂರು,ಶಾಮೀದ ಅಲಿ ಮಾಹತೇಂಶ ಸಜ್ಜನ,ವೇಂಕಟೆಶ ಅಲಾಭಾವಿ,
ಅರವಿಂದ ರೇಡ್ಡಿ, ಸೇರಿದಂತೆ ಅನೇಕ ಗಣ್ಯರು ಪಟ್ಟಣ ಪಂಚಾಯಿತಿ ಸದಸ್ಯರು ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಪ.ಪಂ ಸಿಬ್ಬಂದಿಗಳು ಹಾಜರಿದ್ದರು.




