ಸುದ್ಧಿ

ಪಟ್ಟಣದಲ್ಲಿ ಶ್ರೀ ರಾಜ ಋಷಿ ಭಗೀರಥ ಮಹರ್ಷಿ ಜಯಂತಿ ಆಚರಣೆ. ತುರ್ವಿಹಾಳ..

ಪಟ್ಟಣದಲ್ಲಿ ಶ್ರೀ ರಾಜ ಋಷಿ ಭಗೀರಥ ಮಹರ್ಷಿ ಜಯಂತಿ ಆಚರಣೆ

ಪ್ರಜಾಶ್ರೀ ವಾರ್ತೆ

ತುರ್ವಿಹಾಳ :ಲೋಕ ಕಲ್ಯಾಣಕ್ಕೆ ಗಂಗೆಯನ್ನು ಧರೆಗೆ ತರಲು ನಿರಂತರ ಶ್ರಮವಹಿಸಿ ಯಶಸ್ಸು ಪಡೆದ ಮಹಾತ್ಮ ಮಹರ್ಷಿ ಭಗೀರಥರಾಗಿದ್ದಾರೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಬಾಪುಗೌಡ ದೇವರಮನಿ ಹೇಳಿದರು.
ಮಂಗಳವಾರ ಪಟ್ಟಣದ ಮಹರ್ಷಿ ಸಮುದಾಯ ಭವನದಲ್ಲಿ ನಡೆದ ಭಗೀರಥ ಮಹರ್ಷಿ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಗೀರಥ ಮಹರ್ಷಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಲಾಯಿತು. ನಂತರ ಪಾಲ್ಗೊಂಡ ಎಲ್ಲ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಸರ್ಕಾರಿ ನೌಕರಿ ಪಡೆದ ಯುವಕರಿಗೆ ಸನ್ಮಾನಿಸಲಾಯಿತು.

ಸಿರಾಜ್ ಪಾಷಾ ದಳಪತಿ, ನಿಂಗಪ್ಪ ಕಟ್ಟಿಮನಿ, ಸಿದ್ದೇಶ್ವರ ಗುರಿಕಾರ, ಮಾತನಾಡಿದರು.

ಈ ಸಂದರ್ಭದಲ್ಲಿ ಎಮ್.ಡಿ.ಉಮರ್ ಸಾಬ್,
ಶೇಷಗಿರರಾವ್ ಕುಲಕರ್ಣಿ,ಆರ್ ಶಿವನಗೌಡ,
ದೋಡ್ಡಪ್ಪ ಕಲ್ಗೂಡಿ, ಶರಣಪ್ಪ ಹೊಸಗೌಡ್ರು, ಅಬುತುರಾಬ್ ಖಾಜಿ, ಕರಿಯಪ್ಪ ವಿರುಪಾಪುರ, ದುರುಗೇಶ ವಕೀಲರು,ಬಾಲಪ್ಪ ಕುಂಟೋಜಿ, ತಿರುಪತೇಪ್ಪ ನಾಯಕ, ಲಿಂಗರಾಜ ಎಲೆಕೂಡ್ಲಿಗಿ, ಯಲ್ಲಪ್ಪ ಭೋವಿ,ಫಕೀರಪ್ಪ ಭಂಗಿ, ಮರಿಯಪ್ಪ ಶಿಕ್ಷಕರು, ಶರಣಬಸವ ಗಡೇದ, ಬಸವರಾಜ ಡಣಾಪುರ, ನಿಂಗಪ್ಪ ಗೋರೆಬಾಳ, ಭೀಮದಾಸ ದಾಸರ್, ಹಾಗೂ ಭಗೀರಥ ಸಮಾಜದ ಅಧ್ಯಕ್ಷರಾದ ವೆಂಕಪ್ಪ ರಾಮಣ್ಣ ಕಣ್ಣೂರ್, ಸಿದ್ದಪ್ಪ ಬಳಗಾನೂರ,ಶಿವಣ್ಣ ಗಡ್ಯಾಳ, ಅಡಿವಪ್ಪ ಉಪ್ಪಾರ್, ಚಿನ್ನಪ್ಪ ಕಾರಟಗಿ,ದೇವಪ್ಪ ಬಳಗಾನೂರ,ಚಿದಾನಂದಪ್ಪ,ಯಮನೂರ ಬಟಾರಿ, ವಿರುಪಣ್ಣ ಓಂ ಶಾಂತಿ,ಭೀಮಣ್ಣ ದೇಸಾಯಿ. ನಾಗರಾಜ್ ಗಡ್ಯಾಳ,ರಾಮಣ್ಣ ಮೂಲಿಮನಿ, ಉಪನ್ಯಾಸಕರಾದ, ಛತ್ರಪ್ಪ ಕುರಕುಂದಿ. ಹನುಮಂತ ಗಡ್ಡಿಹಾಳ,ಕರಿಯಪ್ಪ ಶಿಕ್ಷಕ ಇನ್ನಿತರರು ಇದ್ದರು.

ವರದಿಗಾರರು: ವಿಜಯ್ ಕುಮಾರ್ ಹಿರೇಮಠ ತುರುವಿಹಾಳ

Oplus_131072

Related Articles

Leave a Reply

Your email address will not be published. Required fields are marked *

Back to top button