ಶ್ರದ್ಧಾ ಭಕ್ತಿಯಿಂದ ಮಹರ್ಷಿ ಭಗೀರಥ ಜಯಂತಿಯ ಆಚರಣೆ.
ಶ್ರದ್ಧಾ ಭಕ್ತಿಯಿಂದ ಮಹರ್ಷಿ ಭಗೀರಥ ಜಯಂತಿಯ ಆಚರಣೆ
ಛಲ ಇದ್ದರೆ ಭಗವಂತನು ಸಹ ಭೂಮಿಗೆ ತರಬಹುದು
ಕನಕಗಿರಿ ಪಟ್ಟಣದಲ್ಲಿ ಶ್ರೀಭಗೀರಥ ಜಯಂತಿ ಅಂಗವಾಗಿ ಸಮಾಜದ ಗುರು ಹಿರಿಯರ ನೇತೃತ್ವದಲ್ಲಿ ಮಹರ್ಷಿ ಭಗೀರಥ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮತ್ತು ಸಿಹಿ ದಿನಸುಗಳನ್ನು ಹಂಚುವ ಮೂಲಕ ಆಚರಿಸಲಾಯಿತು.
ಇವೆಳೆ ಮಾತನಾಡಿದ ಶರಣಪ್ಪ ಬತ್ತದ್ ಭಗೀರಥ ಮಹರ್ಷಿಯು ಕಠಿಣ ತಪಸ್ಸಿನ ಮೂಲಕ ತನ್ನ 60000 ಪೂರ್ವಜರ ಆತ್ಮಕ್ಕೆ ಮೋಕ್ಷವನ್ನು ದೊರಕಿಸಲು ಬ್ರಹ್ಮನನ್ನು ಕುರಿತು ತಪಸ್ಸು ಮಾಡಿ ಗಂಗೆಯನ್ನು ಶಿವನ ಜಟೆಯ ಮೂಲಕ ಭೂಮಿಗೆ ತರಿಸಿದ ಎಂದು ಹೇಳಿದರು .
ನಂತರ ಮಹರ್ಷಿ ಭಗೀರಥ ಜಯಂತಿಯನ್ನು ಕುರಿತಾಗಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ ಗಂಗಾಧರ್ ಸ್ವಾಮಿ ಅವರು ಜಯಂತಿಯನ್ನು ಆಚರಿಸುವುದಲ್ಲದೆ ಅವರ ತತ್ವ ಸಿದ್ಧಾಂತಗಳನ್ನು ಪಾಲನೆ ಕೂಡ ಮಾಡಬೇಕು ಅವರಂತೆ ಕಠೋರ ನಿಷ್ಠೆ ಛಲದಿಂದ ಗಂಗೆಯನ್ನು ಭೂಮಿಗೆ ತಂದಿರೋ ಹಾಗೆ ನಾವು ಕೂಡ ನಮ್ಮ ಕಾರ್ಯಗಳನ್ನು ಹಠದಿಂದ ಗೆಲ್ಲಬೇಕು ಎಂದು ಮಾತನಾಡಿದರು. ಹಾಗೂ ಈ ಉಪ್ಪಾರ್ ಸಮಾಜದ ಜನರು ವಿದ್ಯಾಭ್ಯಾಸವಿಲ್ಲದೆ ಅನೇಕರು ಕಷ್ಟಪಡುತ್ತಿದ್ದಾರೆ ಮತ್ತು ಉನ್ನತ ಶಿಕ್ಷಣ ಗಾಗಿ ಇವರು ಪ್ರಯತ್ನಿಸಬೇಕು ಸರ್ಕಾರದ ಯೋಜನೆಗಳನ್ನು ಹಿಂದುಳಿದ ವರ್ಗದ ಒಂದು ಸಮಾಜವಾಗಿದೆ ಎಂದು ಹೇಳಿದರು.
. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಗಂಗಾಧರ ಸ್ವಾಮಿ ಕಲ್ಬಾಗಿಲುಮಠ ಮಾತನಾಡಿ ನಾವು ಏನಾದರೂ ಸಾಧನೆ ಮಾಡಬೇಕಾದರೆ ಭಗೀರಥನ ತರ ಪ್ರಯತ್ನ ಮಾಡಬೇಕು ಅಂದಾಗ ಮಾತ್ರ ನಮ್ಮ ಕಾರ್ಯ ಯಶಸ್ವಿಯಾಗುತ್ತದೆ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ನಾಗೇಶ್ ಉಪ್ಪಾರ, ಹನುಮಂತ ಪೂಜಾರ, ಕನಕಪ್ಪ ಉಪ್ಪಾರ, ಶಿವಪ್ಪ ಉಪ್ಪಾರ, ಯೋಗಪ್ಪ ಪೂಜಾರ, ನಾಗರಾಜ್ ಪೂಜಾರ ವೆಂಕೋಬ ಪೂಜಾರ್ ವೆಂಕಟೇಶ್ ಉಪ್ಪಾರ್ ನರಿಯಪ್ಪ ಉಪ್ಪಾರ್ ಹುಲಿಗೇಶ್ ಉಪ್ಪಾರ್ ಹನುಮಂತಪ್ಪ ಉಪ್ಪಾರ್ ಹಾಗೂ ಮಾಜಿ ಮಂಡಲ ಅಧ್ಯಕ್ಷರಾದ ಮಹಾಂತೇಶ್ ಸಜ್ಜನ್, ಪಟ್ಟಣ ಪಂಚಾಯಿತಿ ಸದಸ್ಯರಾದ ಶರಣಪ್ಪ ಬತ್ತದ್, ರಾಕೇಶ್ ಕಂಪ್ಲಿ, ಹನುಮಂತ್ ಬಸರಿ ಗಿಡ ಇತರರು ವಿವಿಧ ಸಮಾಜದ ಮುಖಂಡರಾದ ವೀರೇಶ ಸಮಗಂಡಿ, ಗಂಗಾಧರ್ ಚೌಡಕಿ, ಮರಿಸ್ವಾಮಿ ಯಾದವ ಸಂತೋಷ್ ಹಾದಿಮನಿ ನಿರುಪಾದಿ ಯಾದವ್ ಪರ್ಸಪ್ಪ ಚಿಟಿಕೆ ಹಾಗೂ ಎಲ್ಲಾ ಸಮಾಜದ ಗುರು ಹಿರಿಯರು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




