ಸುದ್ಧಿ

ಪ್ರೊ. ರಾಜು ಆಲಗೂರ. ವಿಜಯಪುರ ಲೊಕಸಭಾ ಕ್ಷೇತ್ರದ ಕಾಂಗೈ ಅಭ್ಯರ್ಥಿ ನಡೆದು ಬಂದ ದಾರಿ…..

ಪ್ರೊ ರಾಜು ಆಲಗೂರ ರವರ ಕುರಿತು…
ಶ್ರೀಯುತ Raju Alagur ಅವರ ನಿಜನಾಮಧೇಯ ಶ್ರೀ ಹನುಮಂತರಾವ್ ರಾಮಚಂದ್ರರಾವ ಆಲಗೂರ. ಅದು 1960ರ ಕಾಲಘಟ್ಟ ಕನ್ನಡದ ಖ್ಯಾತ ನಟ ಡಾ. ರಾಜಕುಮಾರ್ ರವರ ವರ್ಚಸ್ಸು ನಾಡಿನಾದ್ಯಾಂತ ಹರಡಿತ್ತು ಪ್ರತಿಯೊಬ್ಬರಿಗೂ ರಾಜಕುಮಾರ್ ಎಂದರೆ ಪಂಚಪ್ರಾಣ ಅಂತಹ ಸಂದರ್ಭದಲ್ಲಿ ಪೂಜ್ಯ ಕಮಲಾ ಬಾಯಿ ಹಾಗೂ ರಾಮಚಂದ್ರರವರ ಉದರದಿಂದ ಮೂರನೇ ಮಗನಾಗಿ ಜನ್ಮ ತಳೆದ ರಾಜು ಆಲಗೂರ ಮುತ್ತಿನಂತೆ ಬಲು ರೂಪವಂತನಾಗಿ ಹೊಳೆಯುತ್ತಿದ್ದ ಅವನಲ್ಲಿರುವ ಆ ತೇಜಸ್ಸು, ಆ ಚೆಲುವಿಕೆಯನ್ನು ಕಂಡ ಮನೆ ಮಂದಿಯಲ್ಲ ತೇಟ ರಾಜಕುಮಾರ ನಂತೆಯೇ ಇದ್ದಾನೆ ಎಂದು ಎಲ್ಲರೂ ಮುದ್ದಿಸ ತೊಡಗಿದರು ಮತ್ತೊಂದೆಡೆ ರಾಜ ಗಾಂಭೀರ್ಯ ಹೊಂದಿದ ರಾಜಕುಮಾರ್ ನಂತೆ ಕಂಗೊಳಿಸುತ್ತಿದ್ದ ಈ ಮುದ್ದಾದ ಕಂದನನ್ನು ಎಲ್ಲರೂ ರಾಜಕುಮಾರ್, ರಾಜಣ್ಣ, ರಾಜು ಎಂದು ಕರೆಯಲಾರಂಭಿಸಿದರು ಮನೆಯವರೆಲ್ಲರೂ ರಾಜಣ್ಣ ರಾಜು ಎಂದೇ ಕರೆಯುತ್ತಿದ್ದುದರಿಂದ ಇಂದಿಗೂ ಎಲ್ಲರ ಬಾಯಿಯಲ್ಲಿ ಮನದಲ್ಲಿ, ಮನೆಗಳಲ್ಲಿ ಪ್ರೀತಿಪೂರ್ವಕವಾಗಿ ರಾಜು ಆಲಗೂರ ಎಂದೇ ಗುರುತಿಸಿಕೊಂಡಿದ್ದಾರೆ ರಾಜು ಆಲಗೂರ ರವರು ಜನ್ಮತಾಳಿದ್ದು ತಾಯಿಯ ತವರು ಮನೆ ತೊರವಿ ಗ್ರಾಮದಲ್ಲಿ ಅವರದು ಅತ್ಯಂತ ಸುಸಂಸ್ಕೃತ ಮನೆತನ ತಾಯಿ ಪ್ರಾಥಮಿಕ ಶಾಲಾ ಶಿಕ್ಷಕಿ, ತಂದೆ ಪೊಲೀಸ್ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಕೆಲಸ ಮಾಡುತ್ತಿದ್ದರು. ಇಡೀ ಮನೆತನ ವಿದ್ಯಾವಂತರ ಮನೆತನ ಇವರ ತಾಯಿಯ ತಾಯಿ ಶಾಲಾ ಶಿಕ್ಷಕಿ ಸೋದರ ಮಾವ ಶಿಕ್ಷಕರು ಮತ್ತೊಬ್ಬರು ಚೀಪ್ ಇಂಜಿನಿಯರ್ ಇನ್ನೊಬ್ಬರು ಖ್ಯಾತ ವಕೀಲರು, ದೊಡ್ಡಮ್ಮ, ಚಿಕ್ಕಮ್ಮ ಎಲ್ಲರೂ ಶಿಕ್ಷಕರು ಒಂದರ್ಥದಲ್ಲಿ ಅವರ ಹುಟ್ಟಿದ ಮನೆ ವಿದ್ಯಾ ದೇಗುಲದಂತಿತ್ತು ಮನೆತನದವರೆಲ್ಲರೂ ಉನ್ನತ ಹುದ್ದೆಗಳಲ್ಲಿ ಮತ್ತು ಪವಿತ್ರ ಶಿಕ್ಷಕ ಹುದ್ದೆಯಲ್ಲಿದ್ದುದ್ದರಿಂದ ಇವರಲ್ಲಿ ಸುಸಂಸ್ಕೃತತೆ, ವಿನಯತೆ ವಿಧೇಯತೆ ಮೈಗೂಡಿಸಿಕೊಂಡು ಬೆಳೆಯುವಲ್ಲಿ ಸಹಕಾರಿಯಾಯಿತು ಇವರು ಪ್ರಾಥಮಿಕ ಶಿಕ್ಷಣವನ್ನು ತೊರವಿ ಗ್ರಾಮದಲ್ಲಿ, ಹೈಸ್ಕೂಲ್ ಶಿಕ್ಷಣವನ್ನು 1977ರಲ್ಲಿ ಸರ್ಕಾರಿ ಬಾಲಕರ ಪ್ರೌಢಶಾಲೆ, ವಿಜಯಪುರದಲ್ಲಿ,1979ರಲ್ಲಿ ಪಿಯುಸಿಯನ್ನು ಅದೇ ಕಾಲೇಜಿನಲ್ಲಿ 1982 ರಲ್ಲಿ ವಿಜಯಪುರದ ನ್ಯೂ ಆರ್ಟ್ಸ್ ನಲ್ಲಿ ಪದವಿಯನ್ನು ಮುಗಿಸಿ 1984ರಲ್ಲಿ ಕರ್ನಾಟಕ ವಿ ವಿಯಲ್ಲಿ ರಾಜ್ಯಶಾಸ್ತ್ರದಲ್ಲಿಎಂ. ಎ ಪದವಿಯನ್ನು ಮುಗಿಸಿದರು ಎಂ. ಎ ಪದವಿ ಮುಗಿದ ಬಳಿಕ ವಿಜಯಪುರದಲ್ಲಿ ಬಿ. ಎಲ್. ಡಿ. ಸಂಸ್ಥೆಯ ಆರ್. ಎಂ. ಬಿರಾದಾರ್ ಕಾಲೇಜ್ ದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ಪ್ರಾರಂಭಿಸಿದರು ಶಾಲಾ ಕಾಲೇಜು ದಿನಗಳಲ್ಲಿ ನಾಟಕ ಅಭಿನಯದಲ್ಲಿ ಪಾಲ್ಗೊಳ್ಳುವುದು, ಚುನಾವಣೆಗಳಲ್ಲಿ ಭಾಗವಹಿಸುವುದು ಮತ್ತು ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಳ್ಳುವುದು ಪ್ರಾರಂಭಿಸಿದರು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಾ ತಾನು ತನ್ನ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂದು ತನ್ನ ಜನತೆಗೆ ನಿಸ್ವಾರ್ಥ ಸೇವೆ ಸಲ್ಲಿಸಬೇಕೆಂದು ಇಚ್ಚಿಸಿ ದಲಿತ ಹೋರಾಟಗಳಲ್ಲಿ ಚಳುವಳಿಯಲ್ಲಿ ಭಾಗವಹಿಸಲು ಪ್ರಾರಂಭಿಸಿದರು, ಡಾ. ಬಾಬಾ ಸಾಹೇಬರ ವಿಚಾರಗಳನ್ನು, ಆದರ್ಶಗಳನ್ನು ಅವರ ಪರಿಶ್ರಮವನ್ನು ದೀನದಲಿತರಿಗೆ ಮುಟ್ಟಿಸುವ ಕಾರ್ಯದಲ್ಲಿ ತೊಡಗಿದರು ಇದೇ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಶ್ರೀ. ಡಿ.ಜಿ ಸಾಗರ ಸಾರಥ್ಯದಲ್ಲಿ ವಿಜಯಪುರ ಜಿಲ್ಲೆಯ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಅಧ್ಯಕ್ಷರಾಗಿ ನೇಮಕಗೊಂಡು ತಮ್ಮ ಕಾರ್ಯಕ್ಷೇತ್ರವನ್ನು ಗುರುತಿಸಿಕೊಳ್ಳಲು ಪ್ರಾರಂಭಿಸಿದರು ಸನ್ 1985- 86ರ ಅವಧಿಯಲ್ಲಿ ಜಿಲ್ಲೆಯಾದ್ಯಂತ, ರಾಜ್ಯದಾದ್ಯಂತ ತಮ್ಮತನವನ್ನು ಸಂಘಟನೆಯ ಚಾತುರ್ಯವನ್ನು ಗುರುತಿಸುವಂತೆ ಬೆಳೆದರು ಅವರ ಕಾಲಾವಧಿಯಲ್ಲಿ ದಲಿತ ಸಂಘರ್ಷ ಸಮಿತಿಗೆ ಎಲ್ಲಿಲ್ಲದ ಬಲ ಬಂದಿತ್ತು ಇವರು ಹಮ್ಮಿಕೊಳ್ಳುವ ಸಮಾವೇಶದಲ್ಲಿ, ವಿಚಾರ ಸಂಕೀರ್ಣಗಳಲ್ಲಿ ಲಕ್ಷಾಂತರ ಜನ, ದಲಿತರು ಭಾಗವಹಿಸುವಷ್ಟು ಸಾಮರ್ಥ್ಯವನ್ನು ದಲಿತ ಸಂಘರ್ಷ ಸಮಿತಿ ಬಲಾಢ್ಯತೆಯನ್ನು ಹೊಂದಿತ್ತು ಇವರು ಹಮ್ಮಿಕೊಳ್ಳುವ ದಲಿತ ಸಮಾವೇಶಕ್ಕೆ ಮಹಾನ್ ನಾಯಕರು, ಅತಿಥಿಯಾಗಿ ಆಗಮಿಸುತ್ತಿದ್ದರು ಮಹಾರಾಷ್ಟ್ರದ ಖ್ಯಾತ ದಲಿತ ನಾಯಕರಾದ ರಾಮದಾಸ್ ಅಟವಾಲೆ, ರಾಜ್ಯದ ಶ್ರೀನಿವಾಸ್ ಪ್ರಸಾದ್, ಶ್ರೀ ಎಚ್. ಸಿ. ಮಹದೇವಪ್ಪ ಇವರಿಗೆ ಆತ್ಮೀಯರಾದರು ಇಡೀ ರಾಜ್ಯದಲ್ಲಿ ರಾಜು ಆಲಗೂರ ಎಂದರೆ ದೀನ ದಲಿತರ ಹಿಂದುಳಿದವರ ,ಬಡವ ಬಲಿದರ ನಾಯಕರೆಂದು ಮನೆ ಮಾತಾದರು ರಾಜ್ಯದ ದೇಶದ ಯಾವುದೇ ಮೂಲೆಯಲ್ಲಿ ದೀನದಲಿತರಿಗೆ ಅನ್ಯಾಯವಾದರೆ ಹಿಂದುಳಿದವರಿಗೆ ನೋವಾದರೆ ತಕ್ಷಣವೇ ಹೋರಾಟಕ್ಕಿಳಿದು ಅದನ್ನು ವಿರೋಧಿಸಿ ,ಖಂಡಿಸಿ ಚಳುವಳಿಗಳ ಮೂಲಕ ಅದನ್ನು ಸಮರ್ಥಿಸಿ ನ್ಯಾಯಕ್ಕಾಗಿ ಹೋರಾಡಲು ಪ್ರಾರಂಭಿಸಿದರು ಇಂತಹ ಅಮೋಘಗಳಿಗೆಯಲ್ಲಿ ಶ್ರೀಯುತ ರಾಜು ಆಲಗೂರ ಸಾಹೇಬರು ಕಣ್ಣಿಗೆ ಬಿದ್ದುದ್ದು ಅಂದಿನ ಸಜ್ಜನಿಕೆಯ ರಾಜಕಾರಣಿ ರಾಜಕೀಯ ಅಜಾತಶತ್ರು ಅಪ್ಪಟ ಗಾಂಧಿ ವಾದಿ ನಾಡಿನ ಶ್ರೇಷ್ಠ ರಾಜಕಾರಣಿ ದಿವಂಗತ ಬಿ. ಎಂ. ಪಾಟೀಲ್ ಸಾಹೇಬರಿಗೆ ಅದಾಗಲೇ ತನ್ನ ಸಂಘಟನೆಯ ಚಾತುರ್ಯವನ್ನು ಗುರುತಿಸಿಕೊಂಡ ರಾಜು ಆಲಗೂರ ರವರು ಶ್ರೀ. ಬಿ.ಎಮ್ ಪಾಟೀಲ್ ಸಾಹೇಬರಿಗೆ ಹತ್ತಿರವಾಗ ತೊಡಗಿದರು ಜೊತೆಗೆ ಮನೆಯ ಮಗನಂತೆ ಅವರ ಪ್ರೀತಿಗೆ ಪಾತ್ರರಾದರು ತಮ್ಮ ಸರಳ ಸಜ್ಜನಿಕೆಯ ಮೂಲಕ ಬೆಳೆದು ಇವರ ರಾಜ್ಯದ ಶ್ರೇಷ್ಠ ರಾಜಕಾರಣಿಗಳಿಗೆ ಹತ್ತಿರವಾಗತೊಡಗಿದರು ಜೊತೆಗೆ ದಿವಂಗತ ಬಿ.ಎಮ್. ಪಾಟೀಲ್ ರ ಚುನಾವಣೆಗಳಲ್ಲಿ ಮುಂದಾಳತ್ವ ವಹಿಸಿ ಮತ್ತಷ್ಟು ಅವರಿಗೆ ಹತ್ತಿರವಾಗಿದ್ದರು. ವಿಧಿ ಅಟ್ಟ ಹಾಸದಿಂದ ದೂರವಾದ ಪೂಜ್ಯ ಬಿ. ಎಮ್. ಪಾಟೀಲ್ ತರುವಾಯ ರಾಜು ಆಲಗೂರ ಸಾಹೇಬರನ್ನು ಕೈ ಹಿಡಿದು ನಡೆಸಿದ್ದು ನಮ್ಮೆಲ್ಲರ ನೆಚ್ಚಿನ ಶ್ರೇಷ್ಠ ಜನನಾಯಕ ಶ್ರೀಯುತ ಎಂ. ಬಿ. ಪಾಟೀಲ್ ಸಾಹೇಬರು 1998ರ ವಿಧಾನಸಭೆ ಚುನಾವಣೆ ಗಾಗಿ ಬಳ್ಳೊಳ್ಳಿ ಮೀಸಲು ಕ್ಷೇತ್ರದ ಸೂಕ್ತ ಅಭ್ಯರ್ಥಿಯ ಆಯ್ಕೆಯಲ್ಲಿ ಶ್ರೀ ಎಮ್. ಬಿ. ಪಾಟೀಲ್ ಸಾಹೇಬರು ಶ್ರೀ ರಾಜು ಆಲಗೂರ ಹೆಸರು ಪ್ರಸ್ತಾಪಿಸಿ ಎಲ್ಲ ಬಗೆಯ ಸಹಾಯ, ಸಹಕಾರ ನೀಡಿ ಅವರನ್ನು ಆಯ್ಕೆಗೊಳಿಸಿದ ಕೀರ್ತಿ ಶ್ರೀಯುತ ಶ್ರೀ. ಎಂ. ಬಿ ಪಾಟೀಲ್ ಅವರಿಗೆ ಸಲ್ಲುತ್ತದೆ 2013ರ ವಿಧಾನಸಭೆ ಚುನಾವಣೆ ಗಾಗಿ ನಾಗಠಾಣ ಮೀಸಲು ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆಯಾದ ರಾಜು ಆಲಗೂರ ರವರು ತಮ್ಮ ರಾಜಕೀಯದ ಅಧಿಕಾರಾವಧಿಯಲ್ಲಿ ಬಳ್ಳೊಳ್ಳಿ ಮತ್ತು ನಾಗಠಾಣ ಕ್ಷೇತ್ರಗಳಲ್ಲಿ ನೀರಾವರಿಗೆ ಸಂಬಂಧಪಟ್ಟಂತೆ ಕೆರೆಗಳನ್ನ ನಿರ್ಮಿಸಿ ನೀರು ತುಂಬಿಸಿದ್ದು ಕಾಲುವೆಗಳನ್ನ ನಿರ್ಮಾಣಗೊಳಿಸಿ ಕು ಗ್ರಾಮಗಳಿಗೂ ರಸ್ತೆ ಸಂಪರ್ಕ ಕಲ್ಪಿಸಿದ್ದು ಸ್ಮರಣೀಯ ಕಾರ್ಯಗಳು ಶ್ರೀಯುತ ರಾಜು ಆಲಗೂರ ಸಮಾಜಮುಖಿಯಾಗಿ ಮಾಡಿದ ಕಾರ್ಯಗಳು ರಾಜಕೀಯವಾಗಿ ಮಾಡಿದ ಜನಸೇವೆಗಳು ಒಂದು ರೀತಿಯಲ್ಲಿ ಸಮನ್ವಯತೆಯ ಸಂಕೇತಗಳಾಗಿದ್ದವು ರಾಜು ಆಲಗೂರ ಕೇವಲ ಶೋಷಿತರ ಧ್ವನಿ ಯಾಗದೆ ದೀನದಲಿತರ ಅಲ್ಪಸಂಖ್ಯಾತರ ಹಿಂದುಳಿದವರ ಬಡವ ಬಲ್ಲಿದರ ನೆರಳಾಗಿ ಕೆಲಸ ಮಾಡಿದ್ದು ಈ ಜಿಲ್ಲೆಯ ಪ್ರಜ್ಞಾವಂತರಿಗೆ ತಿಳಿದ ವಿಷಯ ಅವರದು ಸಾಮರಸ್ಯದ ಹೋರಾಟ ಎಲ್ಲ ಧರ್ಮದ ಎಲ್ಲ ಜಾತಿಯವರು ಪ್ರೀತಿಯನ್ನು ಸಂಪಾದಿಸಿದ ರಾಜಕಾರಣಿ ರಾಜಕೀಯದಲ್ಲಿ ಸೋತಾಗ ವಿಚಲಿತರಾಗದೆ ಗೆದ್ದಾಗ ಗರ್ವ ತೋರದೆ ಒಬ್ಬ ಸಾಮಾನ್ಯನಂತೆ ಬದುಕಿದ ವ್ಯಕ್ತಿ ಅವರಲ್ಲಿ ಎಂದು ದ್ವೇಷದ ರಾಜಕೀಯವನ್ನು ಈ ಜಿಲ್ಲೆಯ ಜನರು ಕಂಡಿಲ್ಲ ಅವರೆಂದು ಯಾರಿಗೂ ಅನ್ಯಾಯ ಮಾಡಿದವರಲ್ಲ ನಂಬಿಕೆ ವಿಶ್ವಾಸಕ್ಕೆ, ದ್ರೋಹ ಬಗೆದವರಲ್ಲ ತನ್ನ ಒಳಿತಿಗಾಗಿ ಶ್ರಮಿಸಿದ ಎಲ್ಲರಿಗೂ ವಿಧೇಯರಾಗಿ ನಡೆದುಕೊಂಡ ಹೃದಯ ಶ್ರೀಮಂತ ಸಾಮಾಜಿಕವಾಗಿ ರಾಜಕೀಯವಾಗಿ ತಮ್ಮ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕೆ ಬರದಂತೆ ನಡೆದುಕೊಂಡವರು ಎಲ್ಲ ಜಾತಿ ಜನಾಂಗದವರು ಗೌರವಿಸುವ ಎಲ್ಲರನ್ನು ಪ್ರೀತಿಯಿಂದ ಕಾಣುವ ಅವರ ಕಷ್ಟ ಸುಖಗಳಲ್ಲಿ ಒಂದಾಗುವ ಹೃದಯ ವೈಶಾಲ್ಯತೆಯ ರಾಜಕಾರಣಿ ಶ್ರೀ. ರಾಜು ಆಲಗೂ ರವರು ಅವರೀಗ ಲೋಕಸಭೆಯ ಚುನಾವಣೆಯ ಕಾಂಗ್ರೆಸ್ಸಿನ ಅಧಿಕೃತ ಅಭ್ಯರ್ಥಿ ಆತ್ಮೀಯರೇ ವಿಜಯಪುರ ಮೀಸಲು ಕ್ಷೇತ್ರಕ್ಕೆ ಮೀಸಲಾತಿಯ ಲಾಭದ ಮೂಲಕ ಅಸ್ಪೃಶ್ಯತೆಯ ನೋವಿರದ ಅವಮಾನತೆಯ ಸೋಂಕಿಲ್ಲದೆ ಮೀಸಲಾತಿ ಕಲ್ಪಿಸಿದ ಬಾಬಾ ಸಾಹೇಬರ ಚರಿತ್ರೆ ಗೊತ್ತಿರದ ಹೋರಾಟದ ಗಂದಗಾಳಿಯ ಅರಿವಿಲ್ಲದ ಪ್ರಜಾಪ್ರಭುತ್ವ ಬೇಡವೆನ್ನುವವರು ಸಂವಿಧಾನ ಬದಲಿಸುವ ವಿಕೃತ ಮನೋಭಾವದವರ ಪಕ್ಷದಿಂದ ನಮ್ಮ ನಾಯಕರನ್ನು ಆರಿಸಿ ಕಳಿಸುತ್ತಿರುವ ನಾವು ಇನ್ನೂ ನೂರಾರು ವರ್ಷ ಮೌಡ್ಯತೆಯ ಹಿಂದುಳಿದಿದ್ದೇವೆ ಎಂಬ ಕಳವಳ ಕಾಡುತ್ತಿದೆ ನಾವಿಂದು ಶಾಂತಿಯಿಂದ ಬದುಕಿದ್ದು ವಿದ್ಯಾವಂತರಾಗಿ ಬಾಳುತ್ತಿರುವುದು ಅಧಿಕಾರದಲ್ಲಿರುವುದು ಬಾಬಾ ಸಾಹೇಬರ ಸಂವಿಧಾನದಿಂದ ಎಂಬುದನ್ನು ಅರಿಯದೆ ಬದುಕುತ್ತಿದ್ದೇವೆ ನಾವು ಉಣ್ಣುವ ,ಉಡುವ, ತೊಡುವ ಬಾಳುವ ಬದುಕುವದರಲ್ಲಿ ಡಾ. ಬಾಬಾ ಸಾಹೇಬರವರ ಪರಿಶ್ರಮದ ರಕ್ತವಿದೆ ಅವರ ತ್ಯಾಗವಿದೆ ಎಂಬುದು ಮರೆಯುತ್ತಿದ್ದೇವೆ. ಬಾಬಾ ಸಾಹೇಬರ ರಕ್ತದ ಕುಡಿಗಳಾದ ನಾವು ಅಸ್ಪೃಶ್ಯ ರೆನಿಸಿಕೊಂಡು ಬಲು ದೂರ ಉಳಿದಿದ್ದೇವೆ. ಸ್ಪೃಶ್ಯ ರೇನಿಸಿಕೊಂಡ ಅಸ್ಪೃಶ್ಯರು ನಮ್ಮ ರಾಜಕೀಯ ಲಾಭ ವನ್ನು ಕಬಳಿಸುತ್ತಿದ್ದಾರೆ . ಮೂಲ ಅಸ್ಪೃಶ್ಯರ ಲಾಭ ಪಡೆದುಕೊಳ್ಳುತ್ತಿದ್ದಾರೆ. ಈ ಅಸ್ಪೃಶ್ಯರಿಗೆ ಅಂಬೇಡ್ಕರ್ ಎಂದರೆ ಗೊತ್ತಿಲ್ಲ ,ಅವರು ಹುಟ್ಟಿದ್ದು ಹೋರಾಡಿದ್ದು ಅವಮಾನಗೊಂಡಿದ್ದು ಶೋಷಣೆಗೆ ಒಳಗದವರಿಗಾಗಿ ತ್ಯಾಗ ಮಾಡಿದ್ದು ಅವರಪ್ಪರಾಣೆಗೂ ಗೊತ್ತಿಲ್ಲ.ನಾವೂ ಅಸ್ಪೃಶ್ಯರೆ ಎನ್ನುವವರಿಗೆ ಡಾ. ಬಾಬಾ ಸಾಹೇಬರ ಫೋಟೋ ತೋರಿಸಿ ಇವರ್ಯಾರು ಎಂದು ಪ್ರಶ್ನಿಸಿ ನೋಡಿ ಗತಿ ಏನಾಗುತ್ತದೆ. ಹೀಗೆ ಬದುಕುವ ಜನಾಂಗದ ಜನನಾಯಕರನ್ನು ನಾವು ಆರಿಸಿ ಕಳಿಸುವ ನಮ್ಮ ಬಂಧು ಬಾಂಧವರನ್ನು ಎಚ್ಚರಗೊಳಿಸುವ ಕಾಲ ಈಗ ನಮ್ಮೆಲ್ಲರಿಗೂ ಒದಗಿ ಬಂದಿದೆ ಆತ್ಮೀಯ ಬಾಂಧವರೇ ಡಾ. ಬಾಬಾ ಸಾಹೇಬರ ಚಿಂತನೆಗಳನ್ನು ಮೈಗೂಡಿಸಿಕೊಂಡಿರುವ ವಿದ್ಯಾವಂತ ಸುಸಂಸ್ಕೃತ ಸರ್ವಧರ್ಮದವರನ್ನು ಸಮಾನತೆಯಿಂದ ಪ್ರೀತಿಸುವ ಎಲ್ಲ ಜಾತಿ ಧರ್ಮದವರನ್ನು ಗೌರವಿಸುವ ಶ್ರೀಯುತ ರಾಜು ಆಲಗೂರ ನಮ್ಮವರು ನಮ್ಮ ರಕ್ತದವರೆಂಬಭಾವ ನಮ್ಮಲ್ಲಿ ಮೂಡಬೇಕಾಗಿದೆ. ನಮ್ಮ ಕುಲದ ಮತಬಾಂಧವರಲ್ಲಿ ತಮ್ಮ ಮುಖಾಂತರ ಜಾಗೃತಿ ಮೂಡಿಸುವ ಪವಿತ್ರ ಕಾರ್ಯ ನಾವೆಲ್ಲರೂ ಮಾಡಬೇಕಾಗಿದೆ ಡಾ. ಬಾಬಾ ಸಾಹೇಬರ ಸಂವಿಧಾನವನ್ನೇ ಬದಲಿಸಲು ಹೊರಟಿರುವ ಪಕ್ಷದ ನಾಯಕರಿಗೆ ಬುದ್ಧಿ ಕಲಿಸುವ ಸುಯೋಗ ಇದಾಗಿದೆ. ಆದ್ದರಿಂದ ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ನಿಸ್ವಾರ್ಥ ಮನೋಭಾವದಿಂದ ಕೂಡಿ ಕೆಲಸ ಮಾಡಿದರೆ ನಮ್ಮ ನಾಯಕರದ ಶ್ರೀ ರಾಜು ಆಲಗೂರರನ್ನು ಆರಿಸಿ ತರುವಲ್ಲಿ ಯಶಸ್ವಿಯಾಗುತ್ತೇವೆ ನಿಮಗೆಲ್ಲರಿಗೂ ಪ್ರೀತಿಪೂರ್ವಕ ಜೈ ಭೀಮ್ ವಂದನೆಗಳು

ರವೀಂದ್ರ ಯ ತೊರವಿ ನಿವೃತ್ತ ಉಪಪ್ರಾರ್ಚಾಯರು ಬಿ ಎಲ್ ಡಿ ಸಂಸ್ಥೆ ವಿಜಯಪುರ

ವರದಿಗಾರರು ಸಂತೋಷ ಹಿರೇಮಠ

Related Articles

Leave a Reply

Your email address will not be published. Required fields are marked *

Back to top button