ಬೆಂಗಳೂರು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದ ಅಶ್ವಥ್ ನಾರಾಯಣರ ವೋಟ್ ಬ್ಯಾಂಕ್ ರಾಜಕಾರಣ
ನೌಟಂಕಿ ಅಶ್ವಥ್ ನಾರಾಯಣನ
ವೋಟ್ ಬ್ಯಾಂಕ್ ರಾಜಕಾರಣ
ಹಲವು ದಶಕಗಳಿಂದ ಬೆಂಗಳೂರಿನಲ್ಲಿರುವ ಹರಿಶ್ಚಂದ್ರ ಘಾಟ್ ಹಿಂದೂ ರುದ್ರಭೂಮಿಯಲ್ಲಿ ಸ್ಥಳೀಯ ಶಾಸಕ ಡಾ ಅಶ್ವಥ್ ನಾರಾಯಣರ ಕಿತಾಪತಿಯಿಂದ ಪಕ್ಕದಲ್ಲಿರುವ ಜಾಗದಲ್ಲಿ ಮಸೀದಿ ಕಟ್ಟಲು ಅನುಮತಿ ನೀಡಿಸಿದ್ದಲ್ಲದೆ, ಮಂಜೂರಿಸಲಾದ ನಕ್ಷೆಯ ಜೊತೆ ಎರಡು ಮಹಡಿ ಸೇರಿಸಿ ಕಟ್ಟಲು ಅನುಮತಿ ನೀಡುವ ಮೂಲಕ ಹಿಂದೂ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ.
ಮಲ್ಲೇಶ್ವರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಹಿಂದೂ ರುದ್ರಭೂಮಿ ಹರಿಶ್ಚಂದ್ರ ಘಾಟ್ ಗೆ ದಶಕಗಳ ಇತಿಹಾಸವಿದೆ. ಈ ರುದ್ರಭೂಮಿಯ ಪಕ್ಕದಲ್ಲೇ ಇರುವ ಜಗದಲ್ಲಿ ಮಸೀದಿ ಕಟ್ಟಿಕೊಳ್ಳಲು ಅಶ್ವಥ್ ನಾರಾಯಣರ ‘ರೆಕಮೆಂಡೇಷನ್’ ವರ್ಕೌಟ್ ಆಗಿದೆ. ಮಂಜೂರಾದ ನಕ್ಷೆಯೊಂದಿಗೆ ಇನ್ನೂ ಎರಡು ಮಹಡಿ ಕಟ್ಟುವುದಕ್ಕೂ ಸಾಹೇಬರ ಶಿಫಾರಸು ವರ್ಕೌಟ್ ಆಗಿದೆ.
ಸೋಜಿಗದ ವಿಷಯವೇನೆಂದರೆ ಡಾ.ಅಶ್ವಥ್ ಅವರು ಬಿಜೆಪಿಯ ವಕ್ಫ್ ವಿರುದ್ಧ ನಡೆಯುತ್ತಿರುವ ‘ನಮ್ಮ ಭೂಮಿ, ನಮ್ಮ ಹಕ್ಕು’ ಹೋರಾಟದಲ್ಲಿ ಭಾಗವಹಿಸಿ ಮುಸಲ್ಮಾನರ ವಿರುದ್ಧ ವೀರಾವೇಶದಿಂದ ಭಾಷಣಗಳನ್ನು ಚಾಚುತ್ತಿದ್ದಾರೆ.
ಬೆಳಿಗ್ಗೆಯಷ್ಟೇ ವಕ್ಫ್ ಪ್ರತಿಭಟನೆಯಲ್ಲಿ ಭಾಗವಹಿಸಿದ ಶಾಸಕ ಅಶ್ವಥ್ ನಾರಾಯಣರು ಮದ್ಯಾಹ್ನದ ಹೊತ್ತಿಗೆ ತಮ್ಮ ಪ್ರಭಾವ ಬಳಸಿ ಅನುಮತಿ ನೀಡಿದ ಮಸೀದಿಗೆ ಭೇಟಿ ನೀಡಿ ಮುಸಲ್ಮಾನ ಬಂಧುಗಳೊಂದಿಗೆ ಕೋಲ್ಗೆಟ್ ಸ್ಮೈಲ್ ನೀಡುತ್ತಾ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಿಂದೂ ಗಳ ಭಾವನೆಗಳಿಗೆ ಘಾಸಿಗೊಳಿಸಿದ ಶಾಸಕ ಅಶ್ವಥ್
ಪಕ್ಕದಲ್ಲೇ ಮಸೀದಿ ಬರುವ ಕಾರಣ ಧಾರ್ಮಿಕ ಆಚರಣೆಗೆ ಹಿಂದೂಗಳಿಗೆ ಇರುಸು ಮುರುಸು ಉಂಟಆಗುತ್ತದೆ. ಮಸೀದಿಗೆ ಅನುಮತಿ ನೀಡುವುದರಿಂದ ಸಂಪ್ರದಾಯದಂತೆ ಐದು ಹೊತ್ತು ನಮಾಜ್, ಅಜಾನ್ ಇತರೆ ಕೈಂಕರ್ಯಗಳು ನಡೆಯುತ್ತದೆ. ಇದರಿಂದ ಪಕ್ಕದಲ್ಲೇ ಇರುವ ರುದ್ರಭೂಮಿಯಲ್ಲಿ ಬರುವವರಿಗೆ ಇರುಸು ಮುರುಸು ಉಂಟಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರುವುದು ಸಹಜ.
ಇಲ್ಲೇ ಏಕೆ, ಬೇರೆ ಕಡೆ ಜಾಗವಿಲ್ಲವೇ
ಮುಸಲ್ಮಾನ ಬಾಹುಳ್ಯದ ಬಡಾವಣೆಗಳು ಬೆಂಗಳೂರಿನಲ್ಲಿ ಸಾಕಷ್ಟಿವೆ. ಆದರೆ, ಪಕ್ಕದಲ್ಲೇ ಹಿಂದೂ ರುದ್ರ ಭೂಮಿ ಇರುವುದು ಗೊತ್ತಿದ್ದರೂ ಇಲ್ಲೇ ಏಕೆ ಬೇಕು ಎಂಬುದು ಹಿಂದೂ ಆಸ್ತಿಕರ ವಾದ. ಪರಸ್ಪರ ಘರ್ಷಣೆ ಆಗುವುದರಿಂದ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ತರುವ ಕೆಲಸ ಆಗುತ್ತೆ. ಇದು ನಿಜಕ್ಕೂ ಖೇದನೀಯ. ವೋಟ್ ಬ್ಯಾಂಕ್ ರಾಜಕಾರಣ ಅಲ್ಲದೆ ಮತ್ತಿನ್ನೇನು, ಇಲ್ಲಿ ಮಸೀದಿ ಕಟ್ಟಲು ಅನುಮತಿ ನೀಡಿದ್ದು ಶಾಸಕರು ಮಾಡಿರುವ ಘೋರ ತಪ್ಪು. ಹಿಂದೂ ನಂಬಿಕೆಗಳಿಗೆ ಚ್ಯುತಿ ತಂದಿದ್ದಾರೆ ಅಂತಾರೆ ಸ್ಥಳೀಯರಾದ ರಾಜು ನಾಯ್ಡು ಅವರು.
ನೌಟಂಕಿ ರಾಜಕಾರಣದ ನಿಸ್ಸೀಮ ಡಾ ಅಶ್ವಥ್
ಸ್ಯಾಂಕಿ ಕೆರೆಯಲ್ಲಿ ಕೊಳಚೆ ನೀರು ಬಿಡುತ್ತಿರುವುದು, ಗಂಗಾನಗರದಿಂದ ಸಂಜಯನಗರಕ್ಕೆ ಸಂಪರ್ಕ ಕಲ್ಪಿಸುವ ರಾಜಗೋಪಾಲ ರಸ್ತೆಯಲ್ಲಿ ಬೀದಿ ದೀಪಗಳೇ ಇಲ್ಲದಿರುವುದು, ಮಲ್ಲೇಶ್ವರದಲ್ಲಿ ಧೂಳು, ಕಸದ ಸಮಸ್ಯೆ, ಪಾರ್ಕಿಂಗ್ ಸಮಸ್ಯೆ, ಬಿದ್ದು ಹೋಗುವ ಹಂತದಲ್ಲಿ ತಲುಪಿರುವ ಹಳೆ ಮರಗಳು, ಟ್ರಾಫಿಕ್ ಕಿರಿ ಕಿರಿ ಸೇರಿದಂತೆ ಸಾಲು ಸಾಲು ಸಮಸ್ಯೆ ಇದ್ದರೂ ಶಾಸಕ ನಾರಾಯಣರಿಗೆ ವೋಟ್ ಬ್ಯಾಂಕ್ ರಾಜಕಾರಣವೇ ಮುಖ್ಯವಾಯಿತು. ಶಾಸಕರ ಕಚೇರಿ ನಿಷ್ಕ್ರಿಯವಾಗಿದೆ, ಶ್ರೀಯುತರು ಕೈಗೆ ಸಿಗುವುದಿಲ್ಲ ಜನರ ಸಮಸ್ಯೆ ಆಲಿಸುವುದಿಲ್ಲ ಎಂದು ಅಶ್ವಥ್ ನಗರದ ನಿವಾಸಿ ನಾರಾಯಣ್ ರಾವ್ ಶಿಂದೆ ಹೇಳುತ್ತಾರೆ. ಕ್ಷೇತ್ರದಲ್ಲಿ ಉತ್ತಮ ಗ್ರಂಥಾಲಯಗಳ ಕೊರತೆ ಇದೆ, ಟ್ರಾಫಿಕ್ ಸಮಸ್ಯೆ ಇದೆ, ಶಾಸಕ ಅಶ್ವಥ್ ನಾರಾಯಣ ಚುನಾವಣಾ ಪೂರ್ವದಲ್ಲಿ ರಸ್ತೆಗಳಿಗೆ ಹಾಕಿಸಿರುವ ಟಾರು, ಸಿ.ಟಿ.ಆರ್ ದೋಸೆಗಿಂತ ತೆಳ್ಳಗಿದೆ ಎಂದು ಜೋಕುಗಳು ಜಾಲತಾಣದಲ್ಲಿಹರಿದಾಡುತ್ತಿದೆ ಶಾಸಕರಿಗೆ ಅಲ್ಪ ಸಂಖ್ಯಾತರ ನಿಜಕ್ಕೂ ಮುಸಲ್ಮಾನರ ಮೇಲೆ ಕನಿಕರ ವಿದ್ದರೆ, ಕಾಳಜಿ ಇದ್ದಾರೆ ಅವರ ಮಕ್ಕಳ ವಿದ್ಯಾಭ್ಯಾಸಕ್ಕೆ, ವೈದ್ಯಕೀಯ ವೆಚ್ಚಗಳಿಗೆ, ಮುಸಲ್ಮಾನ ಹೆಣ್ಣು ಮಕ್ಕಳ ಸಬಲೀಕರಣಕ್ಕೆ ಯೋಜನೆ ರೂಪಿಸಬೇಕಾಗಿತ್ತು. ಹಿಂದೂ ಮುಸಲಮಾನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಿದ್ದೂ ಘೋರ ಹಾಗೂ ಕ್ಷಮಿಸಲು ಸಾಧ್ಯವಾಗದ ತಪ್ಪು. ಪೊಲೀಸ್ ಇಲಾಖೆಯಲ್ಲಿ ಹಲವು ದಶಕಗಳ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ದಾಸಪ್ಪನವರು ಸಹ ಶಾಸಕರ ಈ ನಿರ್ಧಾರ ತಪ್ಪು ಅಂತಾರೆ. ಜನಪ್ರತಿನಿಧಿಗಳು ಕೋಮು ಸೌಹಾರ್ದತೆಗೆ ಧಕ್ಕೆ ತರುವಂತ ಕೆಲಸ ಮಾಡಬಾರದು, ಧಾರ್ಮಿಕ ನಂಬಿಕೆಗಳನ್ನು ಗೌರವಿಸುವ ಕೆಲಸ ಮಾಡಬೇಕೆ ಹೊರತು ಈ ರೀತಿ ಭಾವನೆಗಳಿಗೆ ಘಾಸಿ ತರುವ ಕೆಲಸ ಮಾಡಬಾರದು ಎಂದು ಹೇಳುತ್ತಾರೆ.
ಸೋಗಲಾಡಿ, ಅವಕಾಶವಾದಿ ರಾಜಕಾರಣಕ್ಕೆ ಫುಲ್ ಸ್ಟಾಪ್ ಹಾಕುವ ಸಮಯ ಬಂದಿದೆ …. ಎಚ್ಚರ ಮತದಾರ
ಒಟ್ಟಿನಲ್ಲಿ ಪ್ರತಿ ಬಾರಿ ಮಲ್ಲೇಶ್ವರ ಕ್ಷೇತ್ರದಿಂದ ಆಯ್ಕೆಯಾಗುತ್ತಿರುವ ಅಶ್ವಥ್ ನಾರಾಯಣರು ಈ ಬಾರಿ ಜನವಿರೋಧಿ ಅಲೆಯ ಇರುವುದು ಗೊತ್ತಾಗಿ ಅಲ್ಪ ಸಂಖ್ಯಾತರ ಓಲೈಕೆಗೆ ಬೇಡುತ್ತಿರುವುದು ನಿಜಕ್ಕೂ ಖೇದನೀಯ. ಮಾಜಿ ಉಪ ಮುಖ್ಯಮಂತ್ರಿಗಳಿಗೆ ಕ್ಷೇತ್ರ ಉಳಿಸಿಕೊಳ್ಳಲು ಕಷ್ಟ ಆಗುತ್ತಿರುವುದು ಸ್ಪಷ್ಟವಾಗಿದೆ. ಹಿಂದೂಗಳು ಹಾಗೂ ಮುಸಲ್ಮಾನರು ಮುಂದಿನ ಬಾರಿ ಮತದಾನ ಮಾಡುವಾಗ ಪ್ರಜ್ಞಾವಂತಾಗಿ ಮತ ನೀಡಲಿ. ಅವಕಾಶವಾದಿಗಳಿಗೆ, ವೋಟ್ ಬ್ಯಾಂಕ್ ರಾಜಕಾರಣಿಗಳಿಗೆ ವಿಶ್ರಾಂತಿ ನೀಡುವ ಸಮಯ ಬಂದೊದಗಿದೆ.



