ಸುದ್ಧಿ

ಮಹಿಳೆಯರಿಂದ ಮಹಾಲಕ್ಷ್ಮಿಯ ರಥೋತ್ಸವ..ಕನಕಗಿರಿ

ಮಹಿಳೆಯರಿಂದ ಮಹಾಲಕ್ಷ್ಮಿಯ ರಥೋತ್ಸವ

ಕನಕಗಿರಿ: ಸಮೀಪದ ವಡಕಿ ಗ್ರಾಮದ ಲಕ್ಷ್ಮೀದೇವಿಯ ರಥೋತ್ಸವ ಮಂಗಳವಾರ ಸಂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ದೇಗುಲದಲ್ಲಿ ಕುಂಕುಮಾರ್ಚನೆ, ಅಭಿಷೇಕ, ಎಲೆ ಚಟ್ಟಿ ಕಟ್ಟುವುದು, ಗಂಡಾರುತಿ ಇತರೆ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾ, ಭಕ್ತಿಯಿಂದ ನಡೆದವು. ಅನ್ನ ಬಲಿ ನೀಡುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ವಡಕಿ ಸೇರಿದಂತೆ ಸುತ್ತಮುತ್ತಲ್ಲಿನ ಮಹಿಳೆಯರು ದೇವಸ್ಥಾನದಿಂದ ರಥವನ್ನು ಪಾದಗಟ್ಟೆ ವರೆಗೆ ನಂತರ ದೇವಸ್ಥಾನದ ವರೆಗೆ ಎಳೆದು ಸಂಭ್ರಮಿಸಿದರು. ಈ ಸಮಯದಲ್ಲಿ ಯುವಕರು ಕೇಕೇ ಚಪ್ಪಾಳಿ ತಟ್ಟಿ ಸಂತಸ ವ್ಯಕ್ತಪಡಿಸಿದರು. ಮಲ್ಲಿಗೆವಾಡ, ನವಲಿ, ಚಿರ್ಚನಗುಡ್ಡ, ಚಿರ್ಚನಗುಡ್ಡ ತಾಂಡ, ಆಕಳಕುಂಪಿ, ಡಂಕನಕಲ್, ಕಾರಟಗಿ, ಜೀರಾಳ, ಕಲ್ಗುಡಿ, ಕನಕಗಿರಿ, ಕಾಟಾಪುರ, ಕಲಕೇರಿ, ಹಟ್ಟಿ ಸೇರಿದಂತೆ ಅನೇಕ ಗ್ರಾಮಗಳ ಭಕ್ತರು ಭಾಗವಹಿಸಿದ್ದರು. ಹೂ, ಉತ್ತುತ್ತಿ, ಬಾಳೆ ಹಣ್ಣು ತೇರಿನ ಕಡೆಗೆ ಎಸೆದು ಭಕ್ತರು ಧನ್ಯತೆ ಮೆರೆದರು. ಭಾಜಾ ಭಜಂತ್ರಿ, ಲಕ್ಷ್ಮೀದೇವಿಯ ಸ್ಮರಣೆ ರಥೋತ್ಸವಕ್ಕೆ ಕಳೆ ತಂದಿತು.
ಗ್ರಾಮದಲ್ಲಿ ಎರಡು ರಥಗಳನ್ನು ಎಳೆಯಲಾಗುತ್ತಿದ್ದು ಸೋಮವಾರ ಗಂಡಸರು ಎಳೆದರೆ ಮಂಗಳವಾರ ಮಹಿಳೆಯರು ಎಳೆಯುವುದು ಇಲ್ಲಿ ವಾಡಿಕೆಯಾಗಿದೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button