ಸುದ್ಧಿ

ಕುವೆಂಪು ನಗರ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ – 10/3/2024 ಭಾನುವಾರ ಸಂಜೆ 5.30ರಿಂದ.


ಪರಂಪರಾ ಕಲ್ಚರಲ್ ಫೌಂಡೇಶನ್
ಕುವೆಂಪು ನಗರ (ಬಿಟಿಎಂ ಬಡಾವಣೆ), ಬೆಂಗಳೂರು.

ವಿಷಯ : ಕುವೆಂಪು ನಗರ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ – 10/3/2024 ಭಾನುವಾರ ಸಂಜೆ 5.30ರಿಂದ.

ಬಿಟಿಎಂ ಬಡಾವಣೆಯ (ಕುವೆಂಪು ನಗರ) ಪರಂಪರಾ ಕಲ್ಚರಲ್ ಫೌಂಡೇಶನ್ ವತಿಯಿಂದ
ಇದೇ ಭಾನುವಾರ ಮಾರ್ಚ್ 10 ರಂದು ಸಂಜೆ ಕುವೆಂಪು ನಗರ ಸಾಂಸ್ಕೃತಿಕ ಸೌರಭ ಕಾರ್ಯಕ್ರಮ ನಡೆಯಲಿದೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬಡಾವಣೆಯ ಕಲಾವಿದರಿಂದ ಗಾಯನ, ಹಾಸ್ಯರಸಾಯನ, ಶಿಳ್ಳೆ ಗಾಯನ, ಹಾಸ್ಯ ಪ್ರಹಸನ , ಮಿಮಿಕ್ರಿ ಏರ್ಪಡಿಸಲಾಗಿದೆ.

ಖ್ಯಾತ ಹಾಸ್ಯೋಪನ್ಯಾಸಕ ಬೇಲೂರು ರಾಮಮೂರ್ತಿ, ಪ್ರಹಸನ ಪ್ರಚಂಡರಾದ ಅಶ್ವತ್ಥ ನಾರಾಯಣ, ಎಸ್.ರಾಜಗೋಪಾಲಾಚಾರಿ, ಮಿಮಿಕ್ರಿ ನಂಜುಂಡಿ ಮತ್ತು ಗಾಯಕರಾದ ಏಣಗಿ ಪ್ರಭಾಕರ್, ಶಿಳ್ಳೆ ಲೋಕೇಶ್, ಎನ್.ಗೋಪಾಲಕೃಷ್ಣ ಕಾರ್ಯಕ್ರಮ ನೀಡುವರು.

ಬಿಟಿಎಂ ಬಡಾವಣೆಯ ಶ್ರೀ ರಾಜರಾಜೇಶ್ವರಿ ದೇವಾಲಯದ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ದೇವಳದ ಟ್ರಸ್ಟಿ ಬಿ.ಕೆ.ಪಾರ್ಥಸಾರಥಿ ಮತ್ತು ಪರಂಪರಾ ಅಧ್ಯಕ್ಷ ಜಿ ಪಿ ರಾಮಣ್ಣ ಉಪಸ್ಥಿತರಿರುವರು.

ಶ್ರೀ ರಾಜರಾಜೇಶ್ವರಿ ದೇವಸ್ಥಾನ ಚಾರಿಟಬಲ್ ಟ್ರಸ್ಟ್ ಸಮಿತಿ ಮತ್ತು ನಂದಿ ಪ್ರಿಂಟ್ಸ್ ಸಹಯೋಗದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ಎಸ್.ಸುಧಾಕರ್ ಮತ್ತು ಜಿ.ಮಧುಸೂದನ ನಾಯಕ ನಡೆಸಿಕೊಡುವರು. ಎಸ್.ಅರ್.ಚಿದಾನಂದ ಕಾರ್ಯಕ್ರಮವನ್ನು ನಿರ್ವಹಿಸುವರು.
…….

ದಯಮಾಡಿ ಬನ್ನಿ ಭಾಗವಹಿಸಿ, ಸಭೆಗೆ ಶೋಭೆ ತನ್ನಿ. ಗೌರವಾದರಗಳೊಂದಿಗೆ

ನಿಮ್ಮ ವಿಶ್ವಾಸಿ

ಜಿ ಪಿ ರಾಮಣ್ಣ
ಅಧ್ಯಕ್ಷ
ಪರಂಪರಾ ಕಲ್ಚರಲ್ ಫೌಂಡೇಶನ್
ಕುವೆಂಪು ನಗರ
9448202708
paramparagpr@gmail.com

Related Articles

Leave a Reply

Your email address will not be published. Required fields are marked *

Back to top button