ಸುದ್ಧಿ

ಯಡಿಯೂರಪ್ಪಾಜೀ ಬರೀ ಜನಾಂಗದ ನಾಯಕರಾಗಿ ಬೆಳೆದರೇ ವಿನಹ ಜನನಾಯಕರಾಗಲಿಲ್ಲ.

ಲೋಕಸಭಾ ಅಭ್ಯೆರ್ಥಿಗಳನ್ನು ನಾನೊಬ್ಬನೇ ಆಯ್ಕೆ ಮಾಡುವುದಿಲ್ಲ. ವಿಜಯೇಂದ್ರ ಬಿ.ಜೆ.ಪಿ.ರಾಜ್ಯ ಅಧ್ಯಕ್ಷರು.

ಅನುಭವ ಇಲ್ಲ. ತಳಮಟ್ಟದಲ್ಲಿಯ ಕಾರ್ಯಕರ್ತರ ಸುಖ-ದುಃಖದ ಅರಿವಿಲ್ಲ. ಅಪ್ಪನ ಹೆಸರಿನಿಂದಲೇ ಎಲ್ಲವೂ ನಡೆಯುತ್ತಿರುವಾಗ, ಆಕಾಶದಿಂದ ಇಳಿದವರಂತೆ ವಿಜಯೇಂದ್ರ ಅವರು ಆಡುವ ಉಡಾಫೆಯ ಮಾತಿಗೇನು ಕೊರತೆ ಇಲ್ಲ.

ನಾನೊಬ್ಬನೇ ಲೋಕಸಭಾ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿಲ್ಲ. ಆದರೇ ಕಡ್ಡಿ ಆಡಿಸಬಲ್ಲೆ ಎಂಬರ್ಥದ ಮಾತಾಗಿರಬಹುದೇ?

ನಿಮ್ಮ ತಂದೆಯ‌ ಜೊತೆಗೆ ಬೆಳೆದ ನಿ಼ಷ್ಟಾವಂತ ವ್ಯಕ್ತಿ. ಈಶ್ವರಪ್ಪನವರು ರೋಮ ರೋಮಗಳಲ್ಲಿ ಬಿ.ಜೆ.ಪಿ. ಅಭಿಮಾನ ತುಂಬಿಕೊಂಡವರು. ತಾವೂ ಬೆಳೆದರು ಪಕ್ಷವನ್ನೂ ಬೆಳೆಸಿದ ಈಶ್ವರಪ್ಪ ಅವರನ್ನು ಕ್ರಮೇಣ ಮೂಲೆಗುಂಪು ಮಾಡಲು ಸರ್ವಸಿದ್ಧತೆಯಿಂಲೇ ಶ್ರಮಿಸಿ ತಮ್ಮ ಇಷ್ಟಾರ್ಥ ಈಡೆರಿಕೊಂಡ ಅಪ್ಪ, ಮಕ್ಕಳು ಇಂದು ತಮ್ಮಿಂದಲೇ ಬಿ.ಜೆ.ಪಿ. ಎಂದು ಠೇಂಕಾರದ ಮಾತಾಡುತ್ತಿದ್ದಾರೆ.

ಯಡಿಯೂರಪ್ಪಾಜೀ ಬರೀ ಜನಾಂಗದ ನಾಯಕರಾಗಿ ಬೆಳೆದರೇ ವಿನಹ ಜನನಾಯಕರಾಗಲಿಲ್ಲ.
ತೂತು ಇಲ್ಲದ‌ ಕಿವಿಗಳನ್ನು ಹೊಂದಿರುವ ಯಡಿಯೂರಪ್ಪಾಜೀಯವರನ್ನು ಸುತ್ತುವರೆದ ವಂದಿ ಮಾಗದರು ಕಿವಿಯೂದಿಯೇ ಅಟ್ಟಕ್ಕೇರಿಸಿದರು. ತಮ್ಮ ಬೇಳೆ ಬೇಯಿಸಿಕೊಂಡರು.
ಸಿದ್ಧಾಂತವಿಲ್ಲದ, ಕೆಲ ಕಿಡಿಗೇಡಿಗಳ ಅನುಕೂಲಕ್ಕೆ ತಕ್ಕಂತೆ ರಾಜಕಾರಣ ಮಾಡುವವರಿಗೆ ಮೈದಾನವಾಯಿತೇ ವಿನಹ ಬಿ.ಜೆ.ಪಿ.ಕರ್ನಾಟಕ ರಾಜ್ಯಕ್ಕೆ ಮಾದರಿಯ ಪಕ್ಷವಾಗಲೇ ಇಲ್ಲ

Related Articles

Leave a Reply

Your email address will not be published. Required fields are marked *

Back to top button