ಸಂಪಾದಕೀಯ

ಶ್ರೀರಾಮ ಸೇನೆಯ ಲವ್ ಜಿಹಾದ್ ವಿರುದ್ಧದ – ಸಹಾಯವಾಣಿ – ಭಾಸ್ಕರ್

ಶ್ರೀರಾಮ ಸೇನೆಯ ಲವ್ ಜಿಹಾದ್ ವಿರುದ್ಧದ – ಸಹಾಯವಾಣಿ – ಭಾಸ್ಕರ್

ಬೆಂಗಳೂರು. ಶ್ರೀರಾಮ ಸೇನೆಯ ಲವ್ ಜಿಹಾದ್ ವಿರುದ್ಧದ – ಸಹಾಯವಾಣಿ – ಭಾಸ್ಕರ್ ಪ್ರಾರಂಭಿಸಿದ್ದೇವೆ ಎಂದು ಶ್ರಿ ರಾಮ ಸೇನೆ ಬೆಂಗಳೂರು ಅಧ್ಯಕ್ಷ ಇಂದು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು. 2019 ರಿಂದ 2021 ರ ವರೆಗೆ ಅಂದ್ರೆ 2 ವರ್ಷದಲ್ಲಿ 13 ಲಕ್ಷ 13 ಸಾವಿರ ಕೇಸ್ ಗಳು.18 ವರ್ಷಕ್ಕಿಂತ ಕಡಿಮೆ ವಯಸ್ಸಿನ 2,51,430 ಬಾಲಕಿಯರು ಹಾಗೂ 18 ವರ್ಷ ಮೇಲ್ಪಟ್ಟ ಯುವತಿಯರು, ಮಹಿಳೆಯರು ನಾಪತ್ತೆ, ಇಂತಹ ಅಪಹರಣ, ವೇಶ್ಯಾವಾಟಿಕೆ, ಅತ್ಯಾಚಾರ, ಭಯೋತ್ಪಾದನೆಗೆ ನೇಮಕ,ಮಾರಾಟ, ದೇಶದ ರಕ್ಷಣಾ ಗೌಪ್ಯತೆ ಕಳವು, ಅಕ್ರಮ ಶಸ್ತ್ರಸ್ತ್ರ ಸಾಗಾಟ, ಕಾನೂನು ಬಾಹಿರ ಮಾದಕ ದ್ರವ್ಯ ಸಾಗಾಟ,ಮಾರಾಟ, ಭಯೋತ್ಪಾದಕರೊಂದಿಗೆ ನಂಟು ಮುಂತಾದವುದರಲ್ಲಿ ಭಾಗಿಯಾಗಿರುವ ಬಗ್ಗೆ ತನಿಖೆಗಳು ನಡೆಯುತ್ತಿವೆ. ನಮಗೆ ಕರ್ನಾಟಕದ ರಾಜ್ಯ ಸರ್ಕಾರದಿಂದ, ಅದರಲ್ಲೂ ವಿಶೇಷವಾಗಿ ಕರ್ನಾಟಕದ ಗೃಹ ಇಲಾಖೆಯಿಂದ ಮತ್ತು ಪೊಲೀಸ್ ಇಲಾಖೆಯಿಂದ ಯಾವುದೇ ರೀತಿಯಾದಂತಹ ಸಹಕಾರ ಸಿಗುತ್ತಿಲ್ಲ.

ನಮ್ಮ ಸನಾತನ ಹಿಂದೂ ಧರ್ಮದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವುದು ನಮ್ಮ ಜವಾಬ್ದಾರಿ ಮತ್ತು ಆದ್ಯ ಕರ್ತವ್ಯ. ಆದುದರಿಂದಲೇ ಶ್ರೀರಾಮ ಸೇನೆಯು ಲವ್ ಜಿಹಾದಿಗೆ ಸಿಲುಕಿರುವ ಹಾಗೂ ಮುಂದೊಂದು ದಿನ ಸಿಲುಕಬಹುದಾದ ಹಿಂದೂ ಹೆಣ್ಣು ಮಕ್ಕಳ ರಕ್ಷಣೆಯ ಹಿನ್ನೆಲೆಯಲ್ಲಿ ಲವ್ ಜಿಹಾದಿಗೆ ವಿರುದ್ಧವಾಗಿ 24×7 ಸಹಾಯವಾಣಿಯನ್ನು ಇಂದಿನಿಂದ ಪ್ರಾರಂಭಿಸಿದೆ.

ಶ್ರೀರಾಮ ಸೇನೆಯ ಲವ್ ಜಿಹಾದ್ ವಿರುದ್ಧದ

24*7 ಸಹಾಯವಾಣಿ ಸಂಖ್ಯೆ 9090443444

ಲವ್ ಜಿಹಾದ್ ಗೆ ಬಲಿಯಾದ ಯುವತಿಯರು, ಅವರುಗಳ ಪೋಷಕರು, ಅವರುಗಳ ಬಂಧು ಮಿತ್ರರು ಮತ್ತು ಎಲ್ಲಾ ಜನಸಾಮಾನ್ಯರು ಈ ಸಹಾಯವಾಣಿಯನ್ನು ಬಳಕೆ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇವೆ. ಶ್ರೀರಾಮ ಸೇನೆಯು ನಿರಂತರವಾಗಿ ಹಿಂದೂ ಮಕ್ಕಳ ರಕ್ಷಣೆಗಾಗಿ ಸದಾ ಸಿದ್ಧವಿರುತ್ತದೆ.

ಈ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡವರ ಹೆಸರುಗಳು ಈ ಕೆಳಕಂಡಂತಿದೆ ಶ್ರೀ ವೈ ಡಿ ಅಮರ್ನಾಥ್, ವಿಭಾಗ ಅಧ್ಯಕ್ಷರು, ಶ್ರೀ ಸುಂದರೇಶ್ ನರ್ಗಲ್ ಪ್ರಧಾನ ಕಾರ್ಯದರ್ಶಿ ಬೆಂಗಳೂರು ನಗರ, ಶ್ರೀ ರಮೇಶ್ ಗೌಡ – ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷರು, ಶ್ರೀ ನಾಗಾರ್ಜುನ ಗೌಡ ಸಿಎಂ – ರಾಮನಗರ ಜಿಲ್ಲೆಯ ಅಧ್ಯಕ್ಷರು, ಶ್ರೀ ರಮೇಶ್ ರಾಜ್ – ವಿಭಾಗ ಅಧ್ಯಕ್ಷರು ಕೋಲಾರ ಜಿಲ್ಲೆ ಮತ್ತು ಶ್ರೀಮತಿ ಭವ್ಯ ಸಂತೋಪ್ ದುರ್ಗಾ ಸೇನೆ ಬೆಂಗಳೂರು ನಗರ , ಅನುಪಮ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.
ವರದಿ. ಮಂಜುಳಾ ರೆಡ್ಡಿ.

Oplus_0

Related Articles

Leave a Reply

Your email address will not be published. Required fields are marked *

Back to top button