ಶ್ರೀ ಸುಕ್ಷೇತ್ರ ಕೊಡೆಕಲ್ ಗ್ರಾಮದಲ್ಲಿ ಪರಮಪೂಜ್ಯಶ್ರೀ ಬಸವರಾಜಯ್ಯ ಅಪ್ಪನವರ 70ನೆಯ ಪುಣ್ಯಾರಾಧನೆ

ಇಂದು ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಶ್ರೀ ಸುಕ್ಷೇತ್ರ ಕೊಡೆಕಲ್ ಗ್ರಾಮದಲ್ಲಿ ನಡೆದ ಬಯಲೊಳು ಬಯಲಾದ ಪರಮಪೂಜ್ಯಶ್ರೀ ಬಸವರಾಜಯ್ಯ ಅಪ್ಪನವರ 70ನೆಯ ಪುಣ್ಯಾರಾಧನೆ ಅಂಗವಾಗಿ ರಾತ್ರಿ 10:00 ಯಿಂದ ಬೆಳಗ್ಗೆ ನಾ ಜಾವ 6:00 ವರೆಗೆ ಶ್ರೀ ನಿಜಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ನಾಡಿನ ಹೆಸರಾಂತ ಹಲವಾರು ಸಂಗೀತ ಕಲಾ ಬಳಗದವರಿಂದ ಶಾಸ್ತ್ರೀಯ ಸಂಗೀತ ಮತ್ತು ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು ಅದರೊಟ್ಟಿಗೆ ಸಂಗೀತ ಸೇವೆಯಲ್ಲಿ ಸಾಧನೆ ಮಾಡಿದ ಇಬ್ಬರೂ ಸಾಧಕರಿಗೆ ಸನ್ಮಾನ ಮತ್ತು ಸೇವೆ ಸಲ್ಲಿಸಿದ ಎಲ್ಲಾ ಶರಣರಿಗೆ ಕಲಾಭಳಗದವರಿಗೆ ಪೂಜ್ಯರಿಂದ ಆಶೀರ್ವಾದ ಕಾಣಿಕೆ ಬೆಳಗ್ಗೆ 11 ಗಂಟೆಯಿಂದ ಬಸವರಾಜ ಅಪ್ಪನವರ ಕರ್ತೃಗದ್ದಿಗೆಗೆ ಅಷ್ಟ ವಿದರ್ಚನೆ ಪೂಜೆಯೊಂದಿಗೆ ಕಾರ್ಯಕ್ರಮದ ಉದ್ಘಾಟನೆ ಧರ್ಮಸಭೆಯ ದಿವ್ಯ ಸಾನಿಧ್ಯವನ್ನು ಶ್ರೀ ಪರಮಪೂಜ್ಯ ವೃಷಭೇಂದ್ರ ಅಪ್ಪನವರು ಮಹಲಿನಮಠ ಕೊಡೆಕಲ್ ಮುಖ್ಯ ಅತಿಥಿಗಳಾಗಿ ಶ್ರೀ ಪರಮಪೂಜ್ಯ ಸಿದ್ದ ಬಸವ ಕಬೀರ ಮಹಾಸ್ವಾಮಿಗಳು ಶ್ರೀ ಜಗದ್ಗುರು ಮರುಳ ಶಂಕರ ದೇವರ ಗುರೂಪೀಠ ಸಾಕಿನ್ ಚಿಗರೆಹಳ್ಳಿ ತಾಲೂಕ್ ಜೇವರ್ಗಿ ಕೊಡೇಕಲ್ ಪರಂಪರೆಯನ್ನು ಕುರಿತು ಮಾತನಾಡಿ ಇದು ಕೊಡೆಕಲ್ ಅಲ್ಲ ಇದು ಅಮರ ಕಲ್ಯಾಣ ಇದು ಕೈಲಾಸ ಕಲ್ಯಾಣ ಇದು ಪುಣ್ಯಭೂಮಿ ಎಂದು ಕಾರ್ಯಕ್ರಮವನ್ನು ಉದ್ದೇಶಿಸಿ ಜೀವನದ ಮುಕ್ತಿಗೆ ದಾರಿಯನ್ನು ಹುಡುಕುವುದು ಹೇಗೆ ಎಂದು ತಮ್ಮ ಪ್ರವಚನದ ಮೂಲಕ ಎಲ್ಲ ಶರಣರಿಗೆ ಅಮೃತವ ಉಣಪಡಿಸಿದರು, ಮತ್ತು ಕೊಡೆಕಲ್ಲದ ಇನ್ನೋರ್ವ ಪರಮಪೂಜ್ಯರಾದ ನೀಲಕಂಠ ಮಹಾಸ್ವಾಮಿಗಳು, ಜನಪ್ರಿಯ ಮಾಜಿ ಶಾಸಕರಾದ ನರಸಿಂಹ ನಾಯಕ ರಾಜೂಗೌಡರ ಆಪ್ತ ಸಹಾಯಕರಾದ ಬಸವರಾಜ್ ಅಂಗಡಿ ಅವರು, ಮತ್ತು ನಿವೃತ್ತ ಶಿಕ್ಷಕರು ಆಧ್ಯಾತ್ಮ ಜೀವಿಗಳು ಈ ಸಭೆಯ ಅತಿಥಿ ಸ್ಥಾನಗಳನ್ನು ಅಲಂಕರಿಸಿಕೊಂಡಿದ್ದರು ಜೊತೆಗೆ ಈ ಒಂದು ಧರ್ಮ ಸಭೆಯಲ್ಲಿ ನಮ್ಮ ತಾಲೂಕಿನ ಐವರು ಸಾಧಕರನ್ನು ಶ್ರೀಮತಿ ವೀರಸಂಗಮ್ಮ ದಾನಪ್ಪ ಸಾ// ದ್ಯಾಮನಾಳ ಇವರನ್ನು ಕರ್ನಾಟಕ ಸರಕಾರದಿಂದ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಮತ್ತು ಸಾವಿರ ವಚನಗಳ ಸರದಾರ್ತಿ ಎಂಬ ಬಿರುದು ಪಡೆದಿದ್ದಾರೆ, ಶ್ರೀ ಸಿ ಬಿ ಬಾಗೋಡಿ ಎಲ್ಐಸಿ ನಿವೃತ್ತ ಡೆವಲಪ್ಮೆಂಟ್ ಆಫೀಸರ್, ಶ್ರೀ ಬಸಪ್ಪ ಸಂಗಪ್ಪ ಹಾರಿವಾಳ ಸಾಕಿನ್ ಬಾಗೇವಾಡಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಶ್ರೀಮತಿ ಚನ್ನಬಸಮ್ಮ ತಳವಾರ್ ಸುಲಗಿತ್ತಿ ಶ್ರೀ ಬಸವರಾಜ ಎಂ ಗೋರ್ಜಿ ವಿಶ್ರಾಂತ ಮುಖ್ಯ ಈ ಐದು ಜನ ಸಾಧಕರಿಗೆ ಗೌರವ ಸನ್ಮಾನ ಶ್ರೀ ಪರಮಪೂಜ್ಯ ವೃಷಭೇಂದ್ರ ಅಪ್ಪನವರ ಸಾನಿಧ್ಯದಲ್ಲಿ ನೆರವೇರಿತು ನಂತರ ಪರಮಪೂಜ್ಯರ ತುಲಾಭಾರ ಶ್ರೀ ಕಾನಪ್ಪ ಯಡ್ಡಿ ಅವರ ಕುಟುಂಬದಿಂದ ನೆರವೇರಿತು ನಂತರ ಪೂಜ್ಯರಿಂದ ಕೊಡೆಕಲ್ ಸರ್ವ ಭಕ್ತರಿಗೆ ಪರಮಪೂಜ್ಯರು ವೃಷಬೇಂದ್ರ ಅಪ್ಪನವರಿಂದ ಆಶೀರ್ವಚನ ನಂತರ ನೆರೆದಂತ ಸಾವಿರಾರು ಭಕ್ತರಿಗೆ ಪ್ರಸಾದ ವ್ಯವಸ್ಥೆಯ ೊಂದಿಗೆ ಕಾರ್ಯಕ್ರಮ ಯಶಸ್ವಿಯಾಯಿತು ಈ ಕಾರ್ಯಕ್ರಮದ ನಿರೂಪಣೆಯನ್ನು ಕೋರಿಸಂಗಯ್ಯ ಗಡ್ಡದ ಮಾಸ್ಟರ್ ವಂದನಾರ್ಪಣೆಯನ್ನು ಬಸವರಾಜ್ ಭದ್ರಗೋಳ ಮತ್ತು ಸಂಗೀತ ಸೇವೆಯನ್ನು ನಾಗರಾಜ್ ಹೂಗಾರ್ ಸಂಗಡಿಗರಿಂದ ನಡೆಯಿತು





