ಸುದ್ಧಿ
ಸಾಂಪ್ರದಾಯಿಕ ಔಷಧ ಜಾಗತಿಕ ಶೃಂಗಸಭೆ – ಡಾ. ಕಣ್ಣನ್.

ಸಾಂಪ್ರದಾಯಿಕ ಔಷಧ ಜಾಗತಿಕ ಶೃಂಗಸಭೆ – ಡಾ. ಕಣ್ಣನ್
ಬೆಂಗಳೂರು. ಸಾಂಪ್ರದಾಯಿಕ ಔಷಧ ಜಾಗತಿಕ ಶೃಂಗಸಭೆ ಆಯೋಜಿಸಲಾಗಿದೆ ಎಂದು ಡಾ. ಕಣ್ಣನ್ ಅವರು ಇಂದುಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು. ಸಿದ್ದ ವೈದ್ಯ ಸಂಶೋಧನಾ ಘಟಕದ ವತಿಯಿಂದ ಉಸ್ತುವಾರಿ ಮತ್ತು ಸಂಶೋಧನಾ ಅಧಿಕಾರಿಯಾದ ಡಾ. ಎಂ ಕಣ್ಣನ್, ಡಾ. ಈಶ್ವರ್, ಇಲಂಕಿ ರವರು ಪತ್ರಿಕಾಗೋಷ್ಠಿ ನಡೆಸಿರುತ್ತಾರೆ.
ದಿನಾಂಕ 17 ರಿಂದ 19 ರ ವರೆಗೂ ನವದೆಹಲಿಯ ಭಾರತ್ ಮಂಟಪದಲ್ಲಿ ಆಯುಷ್ ಸಚಿವಾಲಯ ಮತ್ತು WHO ಜಂಟಿಯಾಗಿ 2ನೇ WHO ಸಾಂಪ್ರದಾಯಿಕ ಔಷಧ ಜಾಗತಿಕ ಶೃಂಗಸಭೆ ಆಯೋಜಿಸಿದ್ದು, ಈ ಶೃಂಗಸಭೆಗೆ ಕೇಂದ್ರ ಸಚಿವರಾದ ಪ್ರತಾಪ್ ರಾವ್ ಜಾದವ್ ರವರು ಚಾಲನೆ ನೀಡಲಿದ್ದರೆಂದು ಕರ್ನಾಟಕದಿಂದ 350 ರಿಂದ 400 ಜನ ಈ ಶೃಂಗಸಭೆಯಲ್ಲಿ ಭಾಗವಹಿಸುವ ಬಗ್ಗೆ ಮಾಹಿತಿ ತಿಳಿಸಿದರು . ವರದಿ. ಮಂಜುಳಾ ರೆಡ್ಡಿ.



