Uncategorized

ಕಲ್ಬುರ್ಗಿಯಲ್ಲಿ ಭಾರಿ ಪ್ರತಿಭಟನಾ ಹೋರಾಟ . ಭಾರಿ ಸಂಖ್ಯೆಯಲ್ಲಿ ಹೋರಾಟಗಾರರು ಭಾಗವಹಿಸಿರಿ.

ಬಂಧುಗಳೇ
ಬೃಹತ್ ಸಂಖ್ಯೆಯಲ್ಲಿ ಬನ್ನಿ ಹೋರಾಟ ಯಶಸ್ವಿಗೊಳಿಸಿ ಜೂನ್ ಒಂದರಂದು ನಾಳೆ ಬೆಳಗ್ಗೆ 10.30 ಗಂಟೆಗೆ ಕಲ್ಬುರ್ಗಿಯ ಹೃದಯ ಭಾಗವಾದ ಸರ್ದಾರ್ ವಲ್ಲಬಾಯ್ ಪಟೇಲ್ ಸರ್ಕಲ್ ನಲ್ಲಿ 371 ಕಲಂ ಪರವಾಗಿ ಮತ್ತು ಅದನ್ನು ವಿರೋಧಿಸುವವರನ್ನು ಖಂಡಿಸುವದಕ್ಕಾಗಿ ಬಹುದೊಡ್ಡ ಪ್ರಮಾಣದಲ್ಲಿ ಸಂಘಟನಾ ಚತುರ ಲಕ್ಷ್ಮಣ್ ದಸ್ತಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಏರ್ಪಡಿಸಲಾಗಿದೆ ಭಾರಿ ಸಂಖ್ಯೆಯಲ್ಲಿ ತಾವುಗಳು ಆಗಮಿಸಿ ಈ ಹೋರಾಟ ಯಶಸ್ವಿಗೊಳಿಸಬೇಕಾಗಿ ಕೋರಿಕೆ ಬೆಂಗಳೂರಿನ ಹಸಿರು ಪ್ರತಿಷ್ಠಾನವು ಕಲ್ಯಾಣ ಕರ್ನಾಟಕದ 371 ಕಲಂ ವಿರೋಧಿಸಿ ರಾಜ್ಯಪಾಲರಿಗೆ ಮನವಿ ಪತ್ರ ನೀಡುವದಕ್ಕಾಗಿ ಬೆಂಗಳೂರಿನ ಫ್ರೀಡಂ ಪಾರ್ಕಿನಿಂದ ರಾಜ್ಯಭವನದವರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿಪತ್ರ ಸಲ್ಲಿಸಲಿದ್ದಾರೆ ಇದನ್ನು ವಿರೋಧಿಸಿ ಕಲ್ಬುರ್ಗಿಯಲ್ಲಿ ಭಾರಿ ಪ್ರತಿಭಟನಾ ಹೋರಾಟ ಏರ್ಪಡಿಸಲಾಗಿದೆ ಈ ಪ್ರತಿಭಟನೆಯಲ್ಲಿ ಈ ಭಾಗದ ಸಚಿವರು ಶಾಸಕರು ಹೋರಾಟಗಾರರು ಮತ್ತು ಸಂಘಟನಾಕಾರರು ವಿದ್ಯಾರ್ಥಿಗಳು ಯುವಕರು ಸೇರಿದಂತೆ ಎಲ್ಲಾ ಕ್ಷೇತ್ರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕರೆ ನೀಡುತ್ತೇನೆ. 371ನೇ ಜೇ ಕಲಂ ನಿಂದ ಕರ್ನಾಟಕದ ಉಳಿದ 24 ಜಿಲ್ಲೆಗಳಿಗೆ ಅನ್ಯಾಯವಾಗುತ್ತಿದೆ ಎಂಬುದು ಶುದ್ಧ ಸುಳ್ಳು ನಮ್ಮ ಹಕ್ಕು ನಮ್ಮ ಸೌಲತ್ತು ಸಂವಿಧಾನಬದ್ಧವಾಗಿ ಪಡೆದುದ್ದನ್ನು ಕಸಿದುಕೊಳ್ಳುವ ಕುತಂತ್ರ ನಡೆದಿದೆ ಕೆಲವು ದುಷ್ಟ ಶಕ್ತಿಗಳು ಇದ್ದ ಹೇಳಿಕೆಗಳನ್ನು ನೀಡುವುದರ ಮೂಲಕ ರಾಜ್ಯವನ್ನು ಒಡೆಯುವ ಕೆಲಸ ವ್ಯವಸ್ಥಿತವಾಗಿ ಮಾಡುತ್ತಿವೆ ಎಚ್ ಕೆ ಪಾಟೀಲ ಅಂತಹವರೇ ಕಾನೂನು ತಜ್ಞರೇ ಇದರ ಬಗ್ಗೆ ತಪ್ಪು ಕಲ್ಪನೆ ಮೂಡಿಸುತ್ತಿರುವಾಗ ಉಳಿದವರ ಪಾಡೇನು ಎಚ್ ಕೆ ಪಾಟೀಲರ ಧೋರಣೆಯನ್ನು ಖಂಡಿಸುವುದರೊಂದಿಗೆ ಈ ಭಾಗಕ್ಕೆ ವರದಾನವಾಗಿ ದೊರೆತಿರುವ 371 ಕಲಂ ಉಳವಿಗಾಗಿ ನಾವು ಹೋರಾಟ ಮಾಡಲು ಟೂಂಕ ಕಟ್ಟಿ ನಿಲ್ಲಬೇಕಾಗಿದೆ 371 ಕಲಂ ಪರಿಣಾಮಕಾರಿಯಾಗಿ ಜಾರಿಯಾಗಬೇಕಾದರೆ ಪ್ರತ್ಯೇಕ ಸಚಿವಾಲಯದ ಅವಶ್ಯಕತೆ ಇದೆ ಕೂಡಲೇ ಮುಖ್ಯಮಂತ್ರಿಗಳು ಈ ಸಚಿವಾಲಯವನ್ನು ಪ್ರಾರಂಭಿಸಬೇಕು ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಈ ಭಾಗದ ರಾಜಕಾರಣಿಗಳ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ರೀತಿ ಸಮಸ್ಯೆಗಳು ಉದ್ಭವವಾಗುತ್ತಿವೆ ಪಕ್ಷಭೇದ ಮರೆತು ಎಲ್ಲ ಪಕ್ಷಗಳವರು ಒಂದಾಗಿ ಕಲ್ಯಾಣ ಕರ್ನಾಟಕದ ಕಲ್ಯಾಣಕ್ಕಾಗಿ 371 ಕಲಂ ಉಳುವಿಗಾಗಿ ಹೋರಾಟ ಮಾಡಲೇಬೇಕು ಒಂದು ಕಡೆ ಈ ಕಲಂ ಪರಿಣಾಮಕಾರಿಯಾಗಿ ಅನುಷ್ಠಾನ ಗೊಳಿಸಲು ಉಗ್ರ ಹೋರಾಟ ಮಾಡಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸಕ್ರಿಯವಾಗಿ ಭಾಗವಹಿಸಿದಾಗ ಮಾತ್ರ ಈ ಹೋರಾಟ ಯಶಸ್ವಿಯಾಗುತ್ತದೆ.ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಕಲಬುರಗಿ ಮತ್ತು ಕಲ್ಯಾಣ ಕರ್ನಾಟಕದ ಜನರು ಈ ನಮ್ಮ ಅಸ್ತಿತ್ವದ ಹೋರಾಟದಲ್ಲಿ ಭಾಗವಹಿಸಲು ಮತ್ತೋಮ್ಮೆ ವಿನಂತಿಸುತ್ತೇನೆ. ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ

Related Articles

Leave a Reply

Your email address will not be published. Required fields are marked *

Back to top button