ಸುದ್ಧಿ

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗವೆ ಮೂಲ. ಕ.ವಿ ಗಚ್ಚಿನಮನಿ.

ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಯೋಗವೆ ಮೂಲ. ಕ.ವಿ ಗಚ್ಚಿನಮನಿ.

ತುರವಿಹಾಳ:ಬಸವ ಚೇತನ ವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು ಈ ಸಂದರ್ಭವನ್ನು ಉದ್ದೇಶಿಸಿ ಮಾತನಾಡಿದ ಪ್ರಾಂಶುಪಾಲರಾದ ವಿರುಪಾಕ್ಷಪ್ಪ ಗಚ್ಚಿನಮನಿ, ಧರ್ಮ, ಅರ್ಥ, ಕಾಮ, ಮೋಕ್ಷಗಳನ್ನು ಅನುಸರಿಸಲು ಆರೋಗ್ಯವೇ ಮೂಲಮಂತ್ರ ಎಂದು ಚರಕ ಸಂಹಿತೆಯಲ್ಲಿ ಹೇಳಲಾಗಿದೆ. ಯೋಗ ದಿನಂಪ್ರತಿ ನಿಯಮಿತವಾಗಿ ಮಾಡುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವಂತರಾಗಿ ಆರೋಗ್ಯವಂತ ಸಮಾಜವನ್ನು ಕಟ್ಟಬಹುದು ಎಂದು ಹೇಳಿದರು.
ಅವರು ಪಟ್ಟಣದ ಬಸವಚೇತನ ಪ್ರಾಥಮಿಕ ಪ್ರೌಡಶಾಲೆ ಹಾಗೂ ಪಿಯು ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 10ನೇ ಅಂತರಾಷ್ಟ್ರೀಯ ಯೋಗದಿನಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು
ಯೋಗವು ನಮ್ಮ ಮನಸ್ಸು ಮತ್ತು ದೇಹವನ್ನು ಪುನರುಜ್ಜೀವನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ. ಪ್ರತಿದಿನ ಯೋಗ ಮಾಡುವವರು ಚೈತನ್ಯವಂತರಾಗುತ್ತಾರೆ ಯೋಗವು ನಮ್ಮ ಮನಸ್ಸನ್ನು ಸಂಪೂರ್ಣವಾಗಿ ಏಕಚಿತ್ತತೆಯಿಂದ ಇರಲು ಸಹಾಯ ಮಾಡುತ್ತದೆ. ಇದು ಅನಗತ್ಯ ಉದ್ವೇಗಗಳನ್ನು ತಡೆಯುತ್ತದೆ.
ಸೂರ್ಯನಮಸ್ಕಾರ ವಿವಿದ ಪ್ರಣಾಯಾಮ ದಂತಹ ಯೋಗಬ್ಯಾಸಗಳನ್ನು ಮಾಡುವುದರಿಂದ ದುಷ್ಚಟಗಳಿಂದ ಮಕ್ತರಾಗಿ ಸ್ವಸ್ತ ಮತ್ತು ಆರೋಗ್ಯವಂತರಾಗಿ ಸದೃಡ ರಾಷ್ಟವನ್ನು ಕಟ್ಟಬಹುದಾಗಿದೆ. ಎಂದು ತಿಳಿಸಿದರು
ನಂತರ ವಿವಿಧ ಯೋಗಾಸನಗಳನ್ನು ಅಭ್ಯಾಸ ಮಾಡಿಸಿ ಪ್ರತಿನಿತ್ಯವೂ ಕನಿಷ್ಟ ಸೂರ್ಯನಮಸ್ಕಾರ ಮಾಡಿ ಹಾಗೂ 5 ಬಾರಿ ಓಂಕಾರವನ್ನು ಲಯಬದ್ದವಾಗಿ ಹೇಳಬೇಕೆಂದರು
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಸಾವಿತ್ರಿ ಗಚ್ಚಿನಮನಿ, ಪಾಲಾಕ್ಷಯ್ಯ ಹಿರೇಮಠ ಜ್ಯೋತಿ ಕೊನಾಪೂರ ಅಮರೇಶ ಮಾಟೂರು ಲಕ್ಷ್ಮೀಬಾಯಿ ಗುಡೂರು ಶಿಕ್ಷಕರಾದ ಮಣಿಕಂಠ ಬಸವರಾಜ ಶಿಕ್ಷಕಿಯರಾದ ವಿಜಯಲಕ್ಷ್ಮಿ ಮಡಿವಾಳರ ಶಿಲ್ಪಾ ಹಿರೇಮಠ ರೇಣುಕಾ ಸಂದೂರಿ ,ಉಮಾದೇವಿ, ಸವಿತಾ ,ವಿಜಯಲಕ್ಷ್ಮೀ ಬಟ್ಟೇರ್, ಶಾಲಾ ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು..

ವರದಿ:-ವಿಜಯ್ ಕುಮಾರ್ ಹಿರೇಮಠ್
ತುರುವಿಹಾಳ

Related Articles

Leave a Reply

Your email address will not be published. Required fields are marked *

Back to top button