ಸುದ್ಧಿ

ಶ್ರೀ ಚಂದ್ರ ಚೌಡೇಶ್ವರಿದೇವಿ ಆಮ್ಮನವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ…….ಎಣ್ಣೆಗೆರೆ ವೆಂಕಟ ರಾಮಯ್ಯ.

॥ ಶ್ರೀ ಚಂದ್ರ ಚೌಡೇಶ್ವರಿದೇವಿ ಪ್ರಸನ್ನ ॥

ಶ್ಲೋ ॥ ಭವಾನಿತ್ವಾಂ ವಂದೇ ಭವಮಹಿಷಿ ಸಚ್ಚಿತ್ಸುಖವಪುಃ । ಪರಾಕಾರಂ ಮಮೃತಲಹರೀ ಬೈಂದವಕಳಾಂ ॥
ಮಹಾಕಾಲಾತೀತಂ ಕಲಿತಸರಣೇ ಕಲ್ಪಿತತನುಂ । ಸುಧಾಸಿಂಧೂರಂ ತರ್ವಸತಿ ಮುನಿಯ ವಾಸರಮಯೀಮ್ ॥

ಶ್ರೀ ರಾಮೇಶ್ವರ ಶ್ರೀ ಚಂದ್ರ ಚೌಡೇಶ್ವರಿ ದೇವಸ್ಥಾನ
ಚೌಡೇಶ್ವರಿಗುಡಿ ಬೀದಿ, ದೇವರ ದಾಸಿಮಯ್ಯ ರಸ್ತೆ, ಬೆಂಗಳೂರು – 560002.

ಶ್ರೀ ಚಂದ್ರ ಚೌಡೇಶ್ವರಿದೇವಿ ಆಮ್ಮನವರ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಆಹ್ವಾನ ಪತ್ರಿಕಾ

ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಕರ್ನಾಟಕ ರಾಜ್ಯದಲ್ಲಿ ಕಲ್ಯಾಣ ನಗರವೆಂದು ಪ್ರಖ್ಯಾತಿ ಪಡೆದಿರುವ ಬೆಂಗಳೂರು ನಗರದ ದೇವರ ದಾಸಿಮಯ್ಯ ರಸ್ತೆ , ಚೌಡೇಶ್ವರಿಗುಡಿ ಬೀದಿಯಲ್ಲಿ ಸುಪ್ರಸಿದ್ಧವಾಗಿ ಅನಾದಿಯಿಂದಲೂ ನೆಲೆಗೊಂಡಿರುವ
ಶ್ರೀ ಚಂದ್ರ ಚೌಡೇಶ್ವರಿ ದೇವಿ ಅಮ್ಮನವರ ಪ್ರೇರಣೆಯಾಗಿರುವಂತೆ ಇದೇ ಸ್ವಸ್ತಿಶ್ರೀ ವಿಜಯಾಭ್ಯದಯ ಶಾಲಿವಾಹನ ಶಕ 1946 ಕ್ಕೆ ಸರಿಯಾದ ಶ್ರೀ ಕ್ರೋಧಿನಾಮ ಸಂವತ್ಸರ ಮಾರ್ಗರ್ಶಿಮಾಸ ಶುದ್ಧ ಪಂಚಮಿ ಶುಕ್ರವಾರ ತಾ ॥ 06-12-2024 ರಂದು ಶ್ರೀ ರಾಮೇಶ್ವರ ಪ್ರಸನ್ನ ಪಾರ್ವತಿ ದೇವಿಯ ಸನ್ನಿಧಿಯಲ್ಲಿ ಶ್ರೀ ಚಂದ್ರ ಚೌಡೇಶ್ವರಿ ದೇವಿ ಅಮ್ಮನವರ ಪುನರ್ ಪ್ರತಿಷ್ಠಾಪನೆಯನ್ನು ದೇವ್ಯಾಗಮರೀತ್ಯಾ ತ್ರಿದಿನ ಸಂಕಲ್ಪ ಪೂರ್ವಕವಾಗಿ ಸೂರ್ಯೋದಯಾತ್ಪರ್ವ ಪ್ರಾತಃಕಾಲ 04-30 ರಿಂದ 06-00 ಕ್ಕೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ನಡೆಸಲು ಭಗವಂತನ ಪ್ರೇರಣೆಯಾಗಿರುವುದರಿಂದ ತಾವು ಈ ಮಹತ್ಕಾರ್ಯದಲ್ಲಿ ಭಾಗವಹಿಸಿ ಶ್ರೀ ಚಂದ್ರ ಚೌಡೇಶ್ವರಿ ದೇವಿ ಅಮ್ಮನವರ ಕೃಪೆಗೆ ಪಾತ್ರರಾಗಬೇಕೆಂದು ಪ್ರಾರ್ಥನೆ.

ಬ್ರಹ್ಮರಥೋತ್ಸವದ ಕಾರ್ಯನಿರ್ವಾಹಕರು

https://www.facebook.com/share/1CnRKGLtor/?mibextid=CTbP7E

Related Articles

Leave a Reply

Your email address will not be published. Required fields are marked *

Back to top button