ಕೂಸಿನ ಮನೆ ಆರೈಕೆದಾರರ ಕ್ಷೇತ್ರ ಭೇಟಿಯಲ್ಲಿ ತಾ.ಪಂ ಇಓ ಸಲಹೆ
ಕೂಸಿನ ಮನೆ ಆರೈಕೆದಾರರ ಸೇವಾ ಪೂರ್ವ ತರಬೇತಿ ಸದುಪಯೋಗ ಪಡೆಯಿರಿ
ಕೂಸಿನ ಮನೆ ಆರೈಕೆದಾರರ ಕ್ಷೇತ್ರ ಭೇಟಿಯಲ್ಲಿ ತಾ.ಪಂ ಇಓ ಸಲಹೆ
ಕನಕಗಿರಿ: ಗ್ರಾಮೀಣ ಪ್ರದೇಶದಲ್ಲಿ ನರೇಗಾ ಯೋಜನೆಯಡಿ ಕಾರ್ಯನಿರ್ವಹಣೆ ಮಾಡುವ ಕೂಲಿಕಾರರ 3 ವರ್ಷದೊಳಗಿನ ಮಕ್ಕಳನ್ನು ನೋಡಿಕೊಳ್ಳಲು ಕೂಸಿನ ಆರೈಕೆದಾರರ ಪೂರ್ವ ತರಬೇತಿ ನೀಡಲಾಗಿದ್ದು ಇದರ ಸದುಪಯೋಗ
ಪಡೆಯಿರಿ ಎಂದು ತಾ.ಪಂ ಇಓ ರಾಜಶೇಖರ ಅವರು ಹೇಳಿದರು.
ತಾಲೂಕಿನ ಮುಸಲಾಪುರ ಗ್ರಾಮ ಪಂಚಾಯತಿಯಲ್ಲಿ ಶನಿವಾರದಂದು ಆಯೋಜಿಸಲಾದ ಕೂಸಿನ ಮನೆಯ ಆರೈಕೆದಾರರ ತಾಲೂಕು ಮಟ್ಟದ 5ನೇ ದಿನದ ತರಬೇತಿಯ ಕ್ಷೇತ್ರ ಭೇಟಿ ಕಾರ್ಯಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕೂಸಿನ ಮನೆ ಕೇಂದ್ರದ ಉತ್ತಮ ನಿರ್ವಹಣೆಗಾಗಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಆರೈಕೆದಾರರಿಗೆ ಸೇವಾ ಪೂರ್ವ ತರಬೇತಿಯನ್ನು ನೀಡಿ ಈಗಾಗಲೇ ತಾಲೂಕಿನ ಎಲ್ಲ ಗ್ರಾಮ ಪಂಚಾಯತಿಯಲ್ಲಿ ಕೂಸಿನ ಮನೆಗಳನ್ನು ಆರಂಭಿಸಲಾಗಿದ್ದು, ಕೇರ್ ಟೇಕರ್ ಗಳು ತರಬೇತಿಯ ಸದುಪಯೋಗ ಪಡೆದು ಮಕ್ಕಳನ್ನು ಆರೋಗ್ಯಯುತವಾಗಿ ನೋಡಿಕೊಳ್ಳಬೇಕು ಎಂದರು.
ಈ ವೇಳೆ ಗ್ರಾ.ಪಂ ಸದಸ್ಯರು, ಪಿಡಿಓ ನಾಗೇಶ್ ಎಚ್, ತರಬೇತಿ ಸಂಪನ್ಮೂಲ ವ್ಯಕ್ತಿಗಳಾದ ವಿದ್ಯಾವತಿ, ಈರಮ್ಮ, SIRD DTC ದೇವರಾಜ್, ತಾ.ಪಂ ವಿಷಯ ನಿರ್ವಾಹಕರಾದ ಶಿವಮೂರ್ತಯ್ಯ ಕಂಪಾಪುರಮಠ, ಪವನಕುಮಾರ್, ಐಇಸಿ ಸಂಯೋಜಕರಾದ ಶಿವಕುಮಾರ್ ಕೆ, ಆರ್.ಜಿಪಿಆರ್.ಎಫ್ ಫೆಲೋ ಡಾ.ತಿಪ್ಪೇಸ್ವಾಮಿ, ಎನ್.ಆರ್.ಎಲ್.ಎಂ ಸಂಯೋಜಕಿ ರೇಣುಕಾ, ಗ್ರಾ.ಪಂ ಸಿಬ್ಬಂದಿ ಮಹೇಶಗೌಡ ಸೇರಿದಂತೆ ಕೂಸಿನ ಮನೆ ಆರೈಕೆದಾರರು ಇದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ.




