ಸುದ್ಧಿ

ಬಾಲಕಲಾ ಕಾರಂಜಿ-೨೦೨೫…..ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯ ಅನಾವರಣಕ್ಕಾಗಿ ವೇದಿಕೆ

ಬಾಲಕಲಾ ಕಾರಂಜಿ-೨೦೨೫
ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯ ಅನಾವರಣಕ್ಕಾಗಿ ವೇದಿಕೆ ಕಲ್ಪಿಸುವ ಉದ್ದೇಶದಿಂದ ಬಾಲಕಲಾ ಕಾರಂಜಿ ಎಂಬ ಪ್ರತಿಭಾಶೋಧವನ್ನು ಹಮ್ಮಿಕೊಂಡಿತ್ತು.

ಬಾಲಕಲಾ ಕಾರಂಜಿ-೨೦೨೫ ಪ್ರತಿಭಾಶೋಧದ ಪ್ರಕಟಣೆಗೆ ಸ್ಪಂದನೆಯಾಗಿ ರಾಜ್ಯದ ವಿವಿಧ ಭಾಗಗಳಿಂದ ಗಾಯನ, ವಾದನ, ನರ್ತನ, ವಾಚನ, ಯಕ್ಷಗಾನ, ಜಾದೂ-ಹೀಗೆ ವಿವಿಧ ಪ್ರಕಾರಗಳಲ್ಲಿ ನೈಪುಣ್ಯತೆ ಸಾಧಿಸಿರುವ ಮಕ್ಕಳು ಈ ಪ್ರತಿಭಾಶೋಧದಲ್ಲಿ ಪಾಲ್ಗೊಂಡಿದ್ದರು.

ಬಂದ ವಿಡಿಯೋಗಳ ಪೈಕಿ ಆಯ್ದ ಮೊದಲ ೩೦ ಬಾಲಪ್ರತಿಭೆಗಳಿಗೆ ಜೂನ್‌ ೧೪ ರಂದು ಶನಿವಾರ ಅಪರಾಹ್ನ ೨.೩೦ರಿಂದ ಬೆಂಗಳೂರಿನ ನಯನ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ.

ಉಳಿದ ಬಾಲಪ್ರತಿಭೆಗಳಿಗೆ ಮುಂದಿನ ದಿನಗಳಲ್ಲಿ ಪರಂಪರಾ ಕಲ್ಚರಲ್‌ ಫೌಂಡೇಶನ್‌ ನಡೆಸುವ ಕಾರ್ಯಕ್ರಮಗಳಲ್ಲಿ ನಿಶ್ಚಿತವಾಗಿ ಅವಕಾಶ ನೀಡಲಾಗುವುದು ಎಂದು ಪರಂಪರಾ ಕಲ್ಚರಲ್‌ ಫೌಂಡೇಶನ್‌ ಪ್ರಕಟಣೆ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button