ಸುದ್ಧಿ
ಮಾತಂಗ ಜಾಗೃತಿ ಸಮಿತಿ (ನೋಂ) ಬೆಂಗಳೂರು.ದಿನಾಂಕ 29 ಜೂನ್ 2025 ಸಮಾರಂಭ.

ಮಾತಂಗ ಜಾಗೃತಿ ಸಮಿತಿ (ನೋಂ) ಬೆಂಗಳೂರು.
ದಿನಾಂಕ 29 ಜೂನ್ 2025 ಸಮಯ ಮಧ್ಯಾಹ್ನ 2 ಗಂಟೆಗೆ ಬಾಪು ಸಭಾಂಗಣ ಭವನ ಶಿವಾನಂದ್ ಸರ್ಕಲ್, ಬೆಂಗಳೂರು.
ಈ ಸ್ಥಳದಲ್ಲಿ ಪೂರ್ವ ನಿಗದಿಯಾಗಿರುವ ಸಮುದಾಯದ ಕಾರ್ಯಕ್ರಮವು ಶ್ರೀ ಜಿ ನಾರಾಯಣಸ್ವಾಮಿ ಅಧ್ಯಕ್ಷರು ಮಾಧ್ಯಮ ಮತ್ತು ಪ್ರಚಾರ ಸಮಿತಿ ಹಾಗೂ ಕೇಂದ್ರ ಕಾರ್ಯಕಾರಿ ಸಮಿತಿ, ರಾಜ್ಯ ಮಾತಂಗ ಜಾಗೃತಿ ಸಮಿತಿ ಬೆಂಗಳೂರು ಸಮುದಾಯದ ಹಲವಾರು ಗಣ್ಯರು ಈ ಕಾರ್ಯಕ್ರಮ ಆಯೋಜಿಸಿ ಸಮುದಾಯದ ಶ್ರೇಯೋಭಿವೃದ್ಧಿಗಾಗಿ, ಸಮುದಾಯದ ಶಿಕ್ಷಣ ಆರ್ಥಿಕ ಇನ್ನೂ ಹಲವಾರು ರಂಗದಲ್ಲಿ ಮುನ್ನುಗ್ಗಿ ಯಶಸ್ವಿ ಪಡೆಯಲು ಮಾಡಬೇಕಾಗಿರುವ ಕೆಲಸದ ಬಗ್ಗೆ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ.

ಕಾರಣ ಈ ಸಮಾರಂಭಕ್ಕೆ ಸಮಾನ ಮನಸ್ಕರೆಲ್ಲರೂ ಕೂಡ ಚರ್ಚಿಸೋಣ ಒಮ್ಮತಕ್ಕೆ ಬರೋಣ ಸಮಾಜಾಭಿವೃದ್ಧಿಗಾಗಿ ಹಗಲು ರಾತ್ರಿ ದುಡಿಯೋಣ ಬನ್ನಿ. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ನಮಸ್ಕಾರಗಳು.




