ನಮ್ಮ ಪರಂಪರೆ ನಮ್ಮ ಹೆಮ್ಮೆ… ಪರಂಪರಾ ಕಲ್ಚರಲ್ ಫೌಂಡೇಶನ್ (ರಿ.), ಬೆಂಗಳೂರು.paramparagpr@gmail.com 9448202708 wats app only

ಪರಂಪರಾ ಕಲ್ಚರಲ್ ಫೌಂಡೇಶನ್ (ರಿ.), ಬಿಟಿಎಂ ಬಡಾವಣೆ, ಬೆಂಗಳೂರು.
paramparagpr@gmail.com 9448202708 wats app only
ನಮ್ಮ ಪರಂಪರೆ ನಮ್ಮ ಹೆಮ್ಮೆ…
79ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಕ್ಕಳಿಗಾಗಿ ಭಾಷಣ ಸ್ಪರ್ಧೆ
ವಿಷಯ : ನನ್ನ ಹೆಮ್ಮೆಯ ಸ್ವಾತಂತ್ರ್ಯ ಹೋರಾಟಗಾರ/ಹೋರಾಟಗಾರ್ತಿ
ಭಾರತ ಸ್ವಾತಂತ್ರ್ಯ ಚಳವಳಿಯು ಅನೇಕ ಚಾರಿತ್ರಿಕ ಹೋರಾಟಗಳ ಸರಮಾಲೆ. ಸ್ವಾತಂತ್ರ್ಯ ಚಳವಳಿಯ ಮೂಲೋದ್ದೇಶ ಬ್ರಿಟೀಷರನ್ನು ನಮ್ಮ ದೇಶದಿಂದ ತೊಲಗಿಸುವುದೇ ಆಗಿತ್ತು. ಸ್ವಾತಂತ್ರ ಸಂಗ್ರಾಮವು 1857ರಿಂದ ಮೊದಲ್ಗೊಂಡು 1947ರ ವರೆಗೆ ಸುಮಾರು 90 ವರ್ಷ ನಡೆಯಿತು. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಪ್ರಾಂತ್ಯಗಳಿಗೆ ಸೇರಿದ ಸ್ವಾತಂತ್ರ್ಯ ವೀರರು ಸ್ವಾತಂತ್ರ ಸಂಗ್ರಾಮದ ಭಾಗವಾಗಿದ್ದರು. ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಅಂತಹ ದಿವ್ಯ ಚೇತನಗಳ ತ್ಯಾಗ ಬಲಿದಾನಗಳನ್ನು ನಾವು ನೆನೆಯಬೇಕಾಗಿದೆ. ಮಕ್ಕಳಿಗೂ ಅಂತಹ ದಿವ್ಯಾತ್ಮಗಳನ್ನು ಪರಿಚಯಿಸುವ ಅಗತ್ಯ ಇದೆ. ಆ ಕಾರಣಕ್ಕಾಗಿ ಪರಂಪರಾ ಕಲ್ಚರಲ್ ಫೌಂಡೇಶನ್ ಈ ಭಾಷಣ ಸ್ಪರ್ಧೆಯನ್ನು ಆಯೋಜಿಸಿದೆ.
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ, ದೇಶ ರಕ್ಷಣೆಗಾಗಿ ಬದುಕನ್ನೇ ಗುರಾಣಿಯಾಗಿಸಿದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ಧೀರನಾಯಕರ ಕತೆಗಳನ್ನು ಹೇಳಿಸುವ ಸ್ಪರ್ಧೆ ಇದು.
ಸ್ಪರ್ಧಾ ನಿಯಮಗಳು :
- ಭಾಷಣವು ನೀವು ಬಯಸಿದ ಯಾವುದೇ ಒಬ್ಬ ಸ್ವಾತಂತ್ರ್ಯ ಹೋರಾಟಗಾರರ ಕುರಿತಾಗಿ ಮಾತ್ರ ಇರಬೇಕು.
- ನಿಮ್ಮ ಮಾತುಗಳನ್ನು/ಭಾಷಣವನ್ನುಚಿತ್ರೀಕರಿಸಿ (ವಿಡಿಯೋ ರೂಪದಲ್ಲಿ) https://forms.gle/4AUa4zwdo8vbsSEr5 ಮೂಲಕ ಕಳಿಸಬೇಕು.
- ಕಳಿಸುವಾಗ ಅಲ್ಲಿ ಕೇಳಲಾಗಿರುವ ವಿವರಗಳನ್ನು ತುಂಬಿ ನಂತರ ವಿಡಿಯೋವನ್ನು ಅಪ್ಲೋಡ್ ಮಾಡಬೇಕು. ವಿಡಿಯೋ ಫೈಲನ್ನು ಸೇವ್ (SAVE) ಮಾಡುವಾಗ ಮಕ್ಕಳ ಹೆಸರು ಮತ್ತು ತರಗತಿ ಯ ಹೆಸರಲ್ಲಿ ಸೇವ್ ಮಾಡಬೇಕು. ಉದಾ : NAMRATA.S 9TH STD ಎಂದು ಸೇವ್ ಮಾಡಬೇಕು.
*ಎಡಿಟ್ ಮಾಡಲಾದ ವಿಡಿಯೋಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ. ಅಂದರೆ ವಿಡಿಯೋವನ್ನು ಒಂದೇ ಬಾರಿಗೆ ಚಿತ್ರೀಕರಿಸಿರಬೇಕು.
*ಸ್ಪರ್ಧೆಯು ಎರಡು ವಿಭಾಗಗಳಲ್ಲಿ ನಡೆಯುತ್ತದೆ.
ಅ. 5ನೇ ತರಗತಿಯಿಂದ 7ನೇ ತರಗತಿಯವರೆಗೆ ಮತ್ತು
ಆ. 8ನೇ ತರಗತಿಯಿಂದ 10ನೇ ತರಗತಿಯವರೆಗೆ.
ಈ ತರಗತಿಗಳಲ್ಲಿ ಕಲಿಯುತ್ತಿರುವ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಬಹುದು.
*ಕರ್ನಾಟಕದ ಎಲ್ಲ ಜಿಲ್ಲೆಗಳ ಮಕ್ಕಳು, ಹೊರರಾಜ್ಯ ಮತ್ತು ಹೊರದೇಶಗಳಲ್ಲಿ ನೆಲೆಸಿರುವ ಮಕ್ಕಳೂ ಸ್ಪರ್ಧೆಯಲ್ಲಿ ಭಾಗವಹಿಸಬಹುದು.
*ಭಾಷಣದ ಅವಧಿ ನಾಲ್ಕು ನಿಮಿಷ ಮಾತ್ರ ಇರಬೇಕು.* ಬರೆದುದನ್ನು ನೋಡಿಕೊಂಡು ಓದಬಾರದು. ಭಾಷಣವು ಕನ್ನಡದಲ್ಲೇ ಇರಬೇಕು.
*ಪೀಠಿಕೆ, ವಿಷಯ ಸಂಗ್ರಹ, ವಿಷಯ ಮಂಡನೆ, ಸ್ಪಷ್ಟ ಉಚ್ಚಾರ, ಸುಲಲಿತ ಮಾತುಗಾರಿಕೆ, ಮುಕ್ತಾಯ-ಇವುಗಳತ್ತ ತೀರ್ಪುಗಾರರ ಸಮಿತಿ ಹೆಚ್ಚು ಗಮನವೀಯುತ್ತದೆ. ಸೂಕ್ತ ಉಡುಪು, ಚಿತ್ರೀಕರಣದ ಹಿನ್ನೆಲೆ ಕೂಡ ಮುಖ್ಯವಾಗುತ್ತದೆ.
*ಭಾಷಣದ ಆರಂಭದಲ್ಲಿ ಹೆಸರು, ತರಗತಿ, ಊರು ಮತ್ತು ಮೊಬೈಲ್ ಸಂಖ್ಯೆಯನ್ನು ತಪ್ಪದೆ ಒಂದು ಬಿಳಿ ಹಾಳೆಯಲ್ಲಿ ಸ್ವಷ್ಟವಾಗಿ ಕಾಣುವಂತೆ ಬರೆದು ಅದನ್ನು ಮೊದಲು ಚಿತ್ರೀಕರಿಸಿ, ಆ ನಂತರ ಭಾಷಣವನ್ನು ಪ್ರಾರಂಭಿಸಬೇಕು. ಈ ವಿವರಗಳಿಲ್ಲದ ವಿಡಿಯೋಗಳನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.
*ಫಲಿತಾಂಶ ಮತ್ತು ವಿಜೇತರ ಹೆಸರನ್ನು ಪರಂಪರಾ ಕಲ್ಚರಲ್ ಫೌಂಡೇಶನ್ನ ಫೇಸ್ಬುಕ್ ಪುಟದಲ್ಲಿ ಮತ್ತು ವ್ಯಾಟ್ಸಾಪ್ ಗುಂಪಿನಲ್ಲಿ ಪ್ರಕಟಿಸಲಾಗುವುದು.
*ಎರಡೂ ವಿಭಾಗಗಳಲ್ಲಿ ಅತ್ತ್ಯುತ್ತಮವೆನಿಸಿದ ಮೂರು (3) ಭಾಷಣಗಳಿಗೆ ಬಹುಮಾನ ಹಾಗೂ ಪ್ರಶಸ್ತಿಪತ್ರ ನೀಡಲಾಗುವುದು. ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಲು ಅವಕಾಶ ನೀಡಲಾಗುವುದು.
*ಆಯ್ದ ಭಾಷಣಗಳನ್ನು ಪರಂಪರಾ ಕಲ್ಚರಲ್ ಫೌಂಡೇಶನ್ನ ಫೇಸ್ಬುಕ್ ಪುಟ ಮತ್ತು ಯೂಟ್ಯೂಬ್ ಚಾನಲ್ನಲ್ಲಿ ಪ್ರಸಾರ ಮಾಡಲಾಗುವುದು. - ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಇ-ಅಭಿನಂದನಾ ಪತ್ರಗಳನ್ನು ನೀಡಲಾಗುವುದು.
*ಈ ಸ್ಪರ್ಧೆಗೆ ಮಕ್ಕಳು ಅಣಿಗೊಳ್ಳಲು ತಂದೆ-ತಾಯಿಗಳು ಮತ್ತು ಪೋಷಕರು ಸಹಕರಿಸಿದರೆ ಮಕ್ಕಳ ಉತ್ಸಾಹ ಇಮ್ಮಡಿಗೊಳ್ಳುತ್ತದೆ.
*ಗಮನಿಸಿ : ವಿಡಿಯೋಗಳನ್ನು ಈ ಲಿಂಕ್ ಮೂಲಕ ಕಳಿಸಬೇಕು : https://forms.gle/4AUa4zwdo8vbsSEr5
ವಿಡಿಯೋಗಳನ್ನು ಸ್ವೀಕರಿಸಲು ಕಡೆಯ ದಿನಾಂಕ 12 ಆಗಸ್ಟ್ 2025 ಫಲಿತಾಂಶ ಪ್ರಕಟಿಸಲಾಗುವ ದಿನಾಂಕ 25 ಆಗಸ್ಟ್ 2025
ಪ್ರಥಮ ಬಹುಮಾನ : ರೂ.5,000
ದ್ವಿತೀಯ ಬಹುಮಾನ : ರೂ.3,000
ತೃತೀಯ ಬಹುಮಾನ : ರೂ.1,000
ಎರಡು ಸಮಾಧಾನಕರ ಬಹುಮಾನ : ರೂ.500
ಬಹುಮಾನಗಳ ಪ್ರಾಯೋಜಕರು : ಡಾ.ನಂದಿ ಸುಬ್ರಮಣಿ, ನಂದಿ ಪ್ರಿಂಟ್ಸ್, ಜಯನಗರ
…………………………………..
ಸಹೃದಯರಲ್ಲಿ ಕೋರಿಕೆ
• ನಿಮ್ಮ ಮಕ್ಕಳನ್ನೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಉತ್ತೇಜಿಸಿ.
• ಈ ಪ್ರಕಟಣೆಯನ್ನು ನಿಮ್ಮ ಫೇಸ್ಬುಕ್ ವಾಲ್ಗಳಲ್ಲಿ ಅಂಟಿಸಿ ಅಥವಾ ಶೇರ್ ಮಾಡಿ.
• ನಿಮ್ಮ ವ್ಯಾಟ್ಸಾಪ್ ಗ್ರೂಪ್ಗಳಿಗೂ ಹಂಚಿ, ಗೆಳೆಯರಿಗೂ ತಲುಪಿಸಿ.
……,………………………………



