ಸುದ್ಧಿ

ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ ಅಖಿಲೇಶ್ ಯಾದವ್ ಅವರು ನ.15, 16 ರಂದು ಬೆಂಗಳೂರಿಗೆ ಆಗಮನ – ಆನಂದ್ ತಿರುಮಲ

ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ ಅಖಿಲೇಶ್ ಯಾದವ್ ಅವರು ನ.15, 16 ರಂದು ಬೆಂಗಳೂರಿಗೆ ಆಗಮನ – ಆನಂದ್ ತಿರುಮಲ

ಬೆಂಗಳೂರು: ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ ಅಖಿಲೇಶ್ ಯಾದವ್ ಅವರು ನ.15, 16 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾ ರೆಂದು ಸಮಾಜವಾದಿ ಪಕ್ಷದ ಆನಂದ್ ತಿರುಮಲ ಅವರು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು ಯುವಜನಸಭಾ ಸಂಘಟನೆ ಹಾಗೂ ವಿಷನ್ ಇಂಡಿಯಾ ಸ್ಟಾರ್ಟ್ ಆಪ್ ಶೃಂಗಸಭೆ ನಡೆಸಲಿದ್ದಾರೆ ಎಂದು ಸಮಾಜವಾದಿ ಯುವಜನ ಸಭಾಧ್ಯಕ್ಷ ಆನಂದ್ ಸಿ ತಿರುಮಲ ಯುವಕರು ಈ ಕಾರ್ಯಕ್ರಮಕ್ಕೆ ಬರಬೇಕೆಂದು ಕರೆಯನ್ನು ನೀಡಿದರು
ವಿಷನ್ ಇಂಡಿಯಾ ಸ್ಟಾರ್ಟ್ಅಪ್ ಶೃಂಗಸಭೆಯ ಮೊದಲ ಸಭೆಯು ನವೆಂಬರ್‌ 15, 16, ರಂದು ಕರ್ನಾಟಕದ ಬೆಂಗಳೂರಿನ ತಾಜ್ ಬೆಂಗಳೂರನಲ್ಲಿ ನಡೆಯಬೇಕು ಎಂದು ಮಾಜಿ ಮುಖ್ಯ ಮಂತ್ರಿ ಅಖಿಲೇಶ್ ಯಾದವ್ ಅವರು ಘೋಷಣೆ ಮಾಡಿರುವುದು ಕರ್ನಾಟಕದ ಯುವ ಜನತೆಗೆ ಸಂತಸ ತಂದಿದೆ ಎಂದರು.
ದೇಶದ ಯುವಜನತೆ ಸಶಕ್ತವಾಗಬೇಕು. ಉದ್ಯೋಗ, ಉದ್ಯಮಗಳನ್ನು ನಡೆಸುವಂತಾಗಬೇಕೆಂಬುದು ಸಮಾಜವಾದಿ ಪಕ್ಷದ ರಾಷ್ಟ್ರಾಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ರಾಜ್ಯಾಧ್ಯಕ್ಷ ಮಂಜಪ್ಪ ಅವರ ಆಶಯವಾಗಿದೆ. ಆ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ವಿಷನ್ ಇಂಡಿಯಾ ಸ್ಟಾರ್ಟ್ ಆಪ್‌ಗೆ ಚಾಲನೆ ನೀಡುತ್ತಿದ್ದಾರೆ.‌ ಅವರಿಗೆ ಬೆಂಬಲಾರ್ಥವಾಗಿ ಕರ್ನಾಟಕ ಸಮಾಜವಾದಿ ಪಕ್ಷ ಇರಲಿದೆ ಎಂದು ಅವರು ಹೇಳಿದರು.

ಸಮಾಜವಾದಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯರಾಮ್ ರೆಡ್ಡಿ ಮಾತನಾಡಿ, ಬೆಂಗಳೂರಿನಿಂದ ಪ್ರಾರಂಭಿಸಿ ದೇಶಾದ್ಯಂತ ವಿವಿಧ ನಗರಗಳಲ್ಲಿ ವೈವಿಧ್ಯಮಯ ಕ್ಷೇತ್ರಗಳ ಪ್ರತಿಭೆಗಳನ್ನು ಒಟ್ಟುಗೂಡಿಸುವ ನಮ್ಮ “ವಿಷನ್ ಇಂಡಿಯಾ: ಪ್ಲಾನ್, ಡೆವಲಪ್ ಮತ್ತು ಅಸೆಂಟ್” ಮಿಷನ್‌ನ ಭಾಗವಾಗಲು ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ತತ್ವಗಳನ್ನು ಎತ್ತಿಹಿಡಿಯುವ “ಸಾಮಾಜಿಕ ನ್ಯಾಯದ ನಿಯಮ”ವನ್ನು ಸ್ಥಾಪಿಸಲು ಮತ್ತು ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದರು.

ಅಖಿಲೇಶ್ ಯಾದವ್ ಜೀ ರವರು ಅಭಿವೃದ್ಧಿ, ಸಂವಾದ, ಪಾಲುದಾರಿಕೆ ಮತ್ತು ಪರಿಹಾರ-ಆಧಾರಿತ ವಿಧಾನಗಳನ್ನು ಉತ್ತೇಜಿಸುವುದು, ಇದರಿಂದ ನಾವು ಅಭಿವೃದ್ಧಿ ಹೊಂದಬಹುದು ಮತ್ತು ಶೀಘ್ರದಲ್ಲೇ ಅಭಿವೃದ್ಧಿ ಹೊಂದಿದ ದೇಶಗಳ ಶ್ರೇಣಿಗೆ ಸೇರಬಹುದು. ನಾವೀನ್ಯತೆ ಮತ್ತು ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಳ್ಳುವ ಮೂಲಕ ನಮ್ಮ ದೇಶವನ್ನು ಜಾಗತಿಕ ನಾಯಕತ್ವದತ್ತ ಮುನ್ನಡೆಸುವುದು ಮತ್ತು ಮುನ್ನಡೆಸುವುದು ಎಂದು ಅವರು ಹೇಳಿದರು.
ಯುವ ಜನ ಸಭಾ ಬೆಂಗಳೂರು ನಗರ ಅಧ್ಯಕ್ಷ ಸಂಜಯ್ ಎಚ್ ಮಾತನಾಡಿ, ಬೆಂಗಳೂರಿನಿಂದ ಪ್ರಾರಂಭಿಸಿ ದೇಶಾದ್ಯಂತ ವಿವಿಧ ನಗರಗಳಲ್ಲಿ ವೈವಿಧ್ಯಮಯ ಕ್ಷೇತ್ರಗಳ ಪ್ರತಿಭೆಗಳನ್ನು ಒಟ್ಟುಗೂಡಿಸುವ ನಮ್ಮ “ವಿಷನ್ ಇಂಡಿಯಾ: ಪ್ಲಾನ್, ಡೆವಲಪ್ ಮತ್ತು ಅಸೆಂಟ್” ಮಿಷನ್‌ನ ಭಾಗವಾಗಲು ನಾವು ಎಲ್ಲರನ್ನು ಆಹ್ವಾನಿಸುತ್ತೇವೆ.ಸಾಮಾಜಿಕ-ಮಾನಸಿಕ ಸಬಲೀಕರಣ, ಸಮತೋಲಿತ ಬೆಳವಣಿಗೆ ಮತ್ತು ನಿಜವಾಗಿಯೂ ಸಮಗ್ರ ಅಭಿವೃದ್ಧಿಯನ್ನು ಉತ್ತೇಜಿಸುವುದು ನಮ್ಮ ಗುರಿಯಾಗಿದೆ. ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ತತ್ವಗಳನ್ನು ಎತ್ತಿಹಿಡಿಯುವ “ಸಾಮಾಜಿಕ ನ್ಯಾಯದ ನಿಯಮ”ವನ್ನು ಸ್ಥಾಪಿಸಲು ನಾವು ಬದ್ಧರಾಗಿದ್ದೇವೆ. ನ್ಯಾಯ, ಸ್ವಾತಂತ್ರ್ಯ, ಸಮಾನತೆ, ಸಹೋದರತ್ವ ಮತ್ತು ಘನತೆಯಂತಹ ಮೌಲ್ಯಗಳನ್ನು ರಕ್ಷಿಸಲು ನಾವು ಬಯಸುತ್ತೇವೆ ಎಂದ ಸಂಜೆಯ್ ಮಾತನಾಡುತ್ತಾ ಇದರಿಂದ ಎಲ್ಲರಿಗೂ ಸಮಾನ ಅವಕಾಶಗಳು ಸಿಗುತ್ತವೆ ಮತ್ತು ಪ್ರಗತಿ ಹೊಂದಬಹುದು ಎಂದು ತಿಳಿಸಿದರು

ಪತ್ರಿಕಾ ಗೋಷ್ಠಿ ಯಲ್ಲಿ ಸಮಾಜವಾದಿ ಯುವಜನ ಸಭಾ ಅಧ್ಯಕ್ಷ ಆನಂದ್ ಸಿ ತಿರುಮಲ, ಸಮಾಜವಾದಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಜಯರಾಮ್ ರೆಡ್ಡಿ ,ಬೆಂಗಳೂರು ನಗರ ಜಿಲ್ಲಾ ಯುವಜನ ಸಭಾ (SYS )ಅಧ್ಯಕ್ಷ ಸಂಜಯ್ ಎಚ್ ಜೀ, ಸಮಾಜವಾದಿ ಯುವಜನ ಸಭಾದ ಕಾರ್ಯಾಧ್ಯಕ್ಷ ರಾದ ಡಾ. ಅರ್ಜುನ್ ಹನುಮಂತಪ್ಪ ಬಂಡಿ ರಾಜ್ಯಸಂಘಟನ ಕಾರ್ಯದರ್ಶಿ ಎಲ್ ರಂಗನಾಥ್ ಜೀ, ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಚೌದರಿ, ಅನಿಲ್ ಜಾದವ್ ಮುಂತಾದವರು ಉಪಸ್ಥಿತರಿದ್ದರು ವರದಿ ಮಂಜುಳಾ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button