ಜಲಜೀವನ ಮಿಷನ್. 17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ – ಜೋಗಿ ಜೆ ಜಯಪ್ಪ. ಬೆಂಗಳೂರು

ಜಲಾಜೀವನ ಮಿಷನ್ 17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ – ಜೋಗಿ ಜೆ ಜಯಪ್ಪ
. ಬೆಂಗಳೂರು ಜಲಾಜೀವನ ಮಿಷನ್ 17 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆ – ಜೋಗಿ ಜೆ ಜಯಪ್ಪ ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಇಂದು ತಿಳಿಸಿದರು ಸುವರ್ಣ ಕರ್ನಾಟಕ ಕಾರ್ಯನಿರತ ಗುತ್ತಿಗೆದಾರರ ಸಂಘ (ರಿ) ವತಿಯಿಂದ ರಾಜ್ಯಾಧ್ಯಕ್ಷರಾದ ಜೋಗಿ ಜೆ ಜಯಪ್ಪ ಉಪಾಧ್ಯಕ್ಷರಾದ ಯಮನಪ್ಪ ಪೂಜಾರಿ, ವಿಜಯ ದಿವಾಕರ್, ಎ ಎನ್ ಸ್ವಾಮಿ
ದಿನಾಂಕ 17/11/2025 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯ ವರೆಗೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ J.JM ಜಲಜೀವನ ಮಿಷನ್ ಮನೆ-ಮನೆ ಗಂಗೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆ, ನೀರಾವರಿ ಇಲಾಖೆ, ಪಂಚಾಯತ್ ರಾಜ್ ಇಲಾಖೆ G.BA ಹಾಗೂ K N.N.L. ಈ ಎಲ್ಲಾ ಇಲಾಖೆಯಿಂದ ಗುತ್ತಿಗೆದಾರರು ನಿರ್ವಹಿಸಿದ್ದ 2024-25 ಹಾಗೂ 2025-26ನೇ ಸಾಲಿನ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ 50:50 ರ ಅನುಪಾತದಲ್ಲಿ ಇಲ್ಲಿಯವರೆಗೂ ಕಾಮಗಾರಿ ಮುಗಿಸಿದ್ದು ಇಲ್ಲಿಯವರೆಗೂ ಬಿಲ್ ಪಾವತಿ ಹಣ ಬಿಡುಗಡೆ ಆಗಿರುವುದಿಲ್ಲ. ಈಗಾಗಲೇ ನಾವು ಈ ಹಿಂದೆಯೇ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರೂ ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲ. ಗುತ್ತಿಗೆದಾರರು ತುಂಬಾ ಸಂಕಷ್ಟದಲ್ಲಿ ಇದ್ದ ಕಾರಣ ಕೂಡಲೇ ಹಣವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಬೃಹತ್ ಪ್ರತಿಭಟನೆ ಮಾಡುವುದಾಗಿ , ಈ ಪ್ರತಿಭಟನೆಯಲ್ಲಿ ಸುಮಾರು150 ರಿಂದ 200 ಜನ ಭಾಗವಹಿಸಿರುತ್ತಾರೆಂದು ತಿಳಿಸಿದರು ವರದಿ ಮಂಜುಳಾ ರೆಡ್ಡಿ



