ರಾಹುಲ್ ಗಾಂಧಿ ಚುನಾವಣಾ ವಿಫಲ ನಾಯಕರಾ?

ದೇಶದ ರಾಜಕಾರಣದಲ್ಲಿ ಪ್ರಾದೇಶಿಕ ಪಕ್ಷಗಳು ಅಸಹಾಯಕ ಸ್ಥಿತಿಯಲ್ಲಿ ನಲಗುತ್ತಿವೆ. ಇದೇ ಕಾರಣಕ್ಕೆನೇ ಇಂಡಿಕೂಟ ಎಂಬ ವಿಫಲ ಮೈತ್ರಿಕೂಟ ರಚಿಸಿಕೊಂಡು ತಿಣುಕುತ್ತಿವೆ. ಪ್ರಾದೇಶಿಕ ಪಕ್ಷಗಳಿಗೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬಿಸಿ ತುಪ್ಪದನತಾಗಿದ್ದು ನುಂಗುವಂತಿಲ್ಲ ಉಗುಳುವಂತಿಲ್ಲ ಎನ್ನುವ ಅನುಭವ ಆಗುತ್ತಿದೆ
ಪ್ರಾದೇಶಿಕ ಪಕ್ಷಗಳು ತಮ್ಮ ತಮ್ಮ ರಾಜ್ಯದಲ್ಲಿಯ ವಿಧಾನಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಅಲ್ಲಿಯ ಪ್ರಬಲ ಪ್ರಾದೇಶಿಕ ಪಕ್ಷಗಳು ಕುತ್ತಿಗೆಗೆ ಸೊಂಟಕ್ಕೆ ಕಲ್ಲು ಕಟ್ಟಿಕೊಂಡು ನದಿಗೆ ಧುಮುಕಿದ ಅನುಭವ ಆಗುತ್ತಿದೆ ಹಾಗಾಗಿ ಕಾಂಗ್ರೆಸ್ ತನ್ನ ಮಿತ್ರ ಪಕ್ಷಗಳಿಗೆ ಬಿಸಿ ತುಪ್ಪವು ಹಾಗಿದೆ ಮಿತ್ರ ಪಕ್ಷಗಳ ಭವಿಷ್ಯವನ್ನೇ ನಾಶಗೊಳಿಸುವ ಅಪಾಯಕಾರಿಯಾಗಿದೆ.
ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಪ್ರಾದೇಶಿಕ ಪಕ್ಷಿಗಳಿಗೆ ಧೃತರಾಷ್ಟ್ರ ಆಲಿಂಗನ ವಾಗಿ ಗೋಚರಿಸುತ್ತಿದೆ ಧ್ರುತರಾಷ್ಟ್ರ ಆಲಿಂಗನವೆಂದರೆ, ಕುರುಕ್ಷೇತ್ರ ಯುದ್ಧ ಆದ ನಂತರ ದೊಡ್ಡಪ್ಪ ದೃತರಾಷ್ಟ್ರನ ಆಶೀರ್ವಾದ ಪಡೆಯಲು ಐದು ಜನ ಪಾಂಡವ ಸಹೋದರರು ಧೃತರಾಷ್ಟ್ರನ ಭೇಟಿಗೆ ಹೋಗುತ್ತಾರೆ. ಇದನ್ನರಿತ ಧೃತಾರಾಷ್ಟ್ರನು ತನ್ನ ಮಕ್ಕಳ ವಧೆ ಮಾಡಿದ ಭೀಮನನ್ನು ಕೊಂದು ಹಾಕುವಷ್ಟು ಸಿಟ್ಟು ಧೃತರಾಷ್ಟ್ರನ ಮನದಲ್ಲಿ ಜ್ವಾಲೆಯಂತೆ ಹರಿಯುತ್ತಿರುತ್ತದೆ. ಹಾಗಾಗಿ ಭೀಮನನ್ನು ಬಿಗಿದಪ್ಪಿಕೊಳ್ಳಲು ದೃತರಾಷ್ಟ ಮುಂದಾಗುತ್ತಾನೆ ಆಗ ಅಲ್ಲಿಯೇ ಇದ್ದ ಭೀಮ ಗಾತ್ರದ ಕಂಚಿನ ಪ್ರತಿಮೆಯನ್ನು ಶ್ರೀಕೃಷ್ಣ ಪರಮಾತ್ಮನು ದೃಷ್ಟರಾಷ್ಟ್ರನ ಎದುರು ನೂಕುತ್ತಾನೆ ಧೃತರಾಷ್ಟ್ರನು ಇದು ಭೀಮನೆ ಎಂದು ಭಾವಿಸಿ ಆ ಕಂಚಿನ ಮೂರ್ತಿಯನ್ನು ಬಿಗಿದಪ್ಪಿಬಿಡುತ್ತಾನೆ ಕ್ಷಣಮಾತ್ರದಲ್ಲಿ ಕಂಚಿನ ಪ್ರತಿಮೆ ಪುಡಿಪುಡಿಯಾಗುತ್ತದೆ ಇದರ ಅರ್ಥ ಏನೆಂದರೆ ಕಾಂಗ್ರೆಸ್ ಪಕ್ಷವು ರಾಜ್ಯಗಳ ಚುನಾವಣೆಗಳಲ್ಲಿ ಯಾವ ಪಕ್ಷದೊಂದಿಗಾದರೂ ಸ್ನೇಹ ಸಹವಾಸ ಮಾಡಿದರೆ ಆ ಪ್ರಾದೇಶಿಕ ಪಕ್ಷಗಳು ಇನ್ನಿಲ್ಲದಂತೆ ಮಖಾಡೆ ಮಲಗಿ ಬಿಡುತ್ತವೆ ಇದಕ್ಕೆ ಜ್ವಲಂತ ತಾಜಾ ಉದಾಹರಣೆ ಎಂದರೆ ಬಿಹಾರ್ ನಲ್ಲಿ ಆರ್ಜೆಡಿ ಪ್ರಾದೇಶಿಕ ಪಕ್ಷದ ಸ್ಥಿತಿ.
ರಾಜಕಾರಣದಲ್ಲಿ ರಾಹುಲ್ ಗಾಂಧಿ ವಿಫಲನಾಯಕ ಪ್ರತಿ ಚುನಾವಣೆಗೆ ತೆರೆ ಬಿದ್ದಾಗಲೂ ಪಕ್ಷವನ್ನು ನಿರಾಶೆಯ ಮಡಿಲಿನಲ್ಲಿ ರಾಹುಲ್ ಗಾಂಧಿ ತಳ್ಳಿಬಿಡುತ್ತಾರೆ ವಾಸ್ತವವಾಗಿ ರಾಹುಲ್ ಗಾಂಧಿ ನಾಯಕತ್ವ ಇರುವವರೆಗೂ ಬಿಜೆಪಿಗೆ ಯಾವುದೇ ಸಮಸ್ಯೆ ಆತಂಕ ಇಲ್ಲ
ರಾಷ್ಟ್ರ ರಾಜಕಾರಣದಲ್ಲಿ ರಾಹುಲ್ ಗಾಂಧಿಯವರು 95 ಸಾರ್ವಜನಿಕ ಚುನಾವಣೆಗಳಲ್ಲಿ ಸೋತು ಸುಣ್ಣವಾಗಿದ್ದಾರೆ 96 ನೆಯ ಚುನಾವಣೆಗೆ ಸಜ್ಜಾಗುತ್ತಿದ್ದಾರೆ ಮತ್ತು ನೂರರ ಗಡಿಯನ್ನು ದಾಟಿಸಿ ಶತವೀರ ಎಂಬ ಬಿರುದಿಗೆ ಪಾತ್ರರಾಗಲು ಮುನ್ನುಗ್ಗುತ್ತಿದ್ದಾರೆ



