ಸಂಪಾದಕೀಯ

ಅಡುಗೆ ಉಪಕರಣಗಳ ಮೇಲಿನಜಿಎಸ್‌ಟಿ ಶೂನ್ಯಕ್ಕಿಳಿಸಲು ಆಗ್ರಹ

ಇಂಡಕ್ಷನ್ ಅಡುಗೆ ಉಪಕರಣಗಳು ಪರಿಸರ ಸ್ನೇಹಿ. ಅಡುಗೆ ಅನಿಲ ಅಭಾವ ತಕ್ಷಣ ಪರಿಹಾರ;ಇಂಡಕ್ಷನ್ ಅಡುಗೆ ಉಪಕರಣಗಳ ಮೇಲಿನ
ಜಿಎಸ್‌ಟಿ ಶೂನ್ಯಕ್ಕಿಳಿಸಲು ಆಗ್ರಹ

ಬೆಂಗಳೂರು ಏಪ್ರಿಲ್ 8 ; ಅಡುಗೆ ಅನಿಲ ಅಭಾವ ತಕ್ಷಣ ಪರಿಹಾರ;ಇಂಡಕ್ಷನ್ ಅಡುಗೆ ಉಪಕರಣಗಳ ಮೇಲಿನ
ಜಿಎಸ್‌ಟಿ ಶೂನ್ಯಕ್ಕಿಳಿಸಲು ಆಗ್ರಹವನ್ನು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾಡಿದರು ಪ್ರಸ್ತುತ ಇಂಡಕ್ಷನ್ ಅಡುಗೆ ಉಪಕರಣಗಳ ಮೇಲಿನ ಜಿಎಸ್‌ಟಿ ಶೇಕಡಾ 18 ರಷ್ಟಿದ್ದು,
ದೇಶಾದ್ಯಂತ ಭುಗಿಲೆದ್ದಿರುವ ಅಡುಗೆ ಅನಿಲ ಕೊರತೆಗೆ ತಕ್ಷಣ ಪರಿಹಾರವಾಗಿ ಇಂಡಕ್ಷನ್ ಅಡುಗೆ ಉಪಕರಣಗಳ ಮೇಲಿನ ಸರಕು ಹಾಗೂ ಸೇವಾ ತೆರಿಗೆಯನ್ನು ಶೂನ್ಯಕ್ಕಿಳಿಸುವಂತೆ ಲೋರ್ಮನ್ ಕಿಚನ್ ಸಲಕರಣೆಗಳ ಕಂಪನಿ ನಿರ್ದೇಶಕ ಡಾ. ಎಸ್ .ಎನ್. ಚಂದ್ರ ಮೌಳಿ ಪ್ರಧಾನಿ ನರೇಂದ್ರ ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಒತ್ತಾಯಿಸಿದ್ದಾರೆ.

ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಶುದ್ಧ ಮತ್ತು ಇಂಧನ-ಸಮರ್ಥ ಅಡುಗೆ ತಂತ್ರಜ್ಞಾನದ ಅಳವಡಿಕೆಯನ್ನು ಇನ್ನಷ್ಟು ಜನಪ್ರಿಯಗೊಳಿಸಲು ಇಂಡಕ್ಷನ್ ಅಡುಗೆ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ಶೂನ್ಯಕ್ಕಿಸಬೇಕು,”ಇಂಡಕ್ಷನ್ ಅಡುಗೆ ವ್ಯವಸ್ಥೆಗಳು ಪರಿಸರ ಸ್ನೇಹಿ ಮತ್ತು ಅವುಗಳ ಇಂಧನ ದಕ್ಷತೆ ಅತಿ ಹೆಚ್ಚಿನದು.ಅವುಗಳ ವ್ಯಾಪಕ ಅಳವಡಿಕೆಯು ಆಮದು ಮಾಡಿಕೊಳ್ಳಲಾಗುವ ಎಲ್‌ ಪಿಜಿ ಅನಿಲ ಹಾಗೂ ಇತರ ಪೆಟ್ರೋಲಿಯಂ ಇಂಧನಗಳ ಮೇಲಿನ ದೇಶದ ಅವಲಂಬನೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದರು.

“ಇಂಡಕ್ಷನ್ ಅಡುಗೆ ಉಪಕರಣಗಳು ಪರಿಸರ ಸ್ನೇಹಿ. ಇವುಗಳ ಮೇಲಿನ ಜಿಎಸ್‌ಟಿಯನ್ನು ಕಡಿಮೆ ಅಥವಾ ಶೂನ್ಯಕ್ಕಿಳಿಸಿದರೆ, ಅವುಗಳ ಬಳಕೆಯನ್ನು ಇನ್ನಷ್ಟು ಹೆಚ್ಚಿಸಲು ಸಾಧ್ಯವಿದೆ.”ಪ್ರಸ್ತುತ ಇಂಡಕ್ಷನ್ ಅಡುಗೆ ಉಪಕರಣಗಳ ಮೇಲಿನ ಜಿಎಸ್‌ಟಿ ಶೇಕಡಾ 18 ರಷ್ಟಿದ್ದು, ತೆರಿಗೆಯನ್ನು ತೆಗೆದುಹಾಕುವುದರಿಂದ ಗಮನಾರ್ಹವಾಗಿ ಕಡಿಮೆ ಮಾಡುವುದರಿಂದ ಮನೆಗಳು ಮತ್ತು ವಾಣಿಜ್ಯ ಬಳಕೆದಾರರಿಗೆ ಈ ತಂತ್ರಜ್ಞಾನವನ್ನು ಕೈಗೆಟುಕುವಂತೆ ಮಾಡಲು ಸಾಧ್ಯವಿದೆ ಎಂದು ಅವರು ಅಭಿಪ್ರಾಯ ಪಟ್ಟರು.
ಇಂಡಕ್ಷನ್ ಅಡುಗೆ ಉಪಕರಣಗಳ ಬಳಕೆಯನ್ನು ಉತ್ತೇಜಿಸುವುದು ಭಾರತದ ಸ್ವಚ್ಛ ಮತ್ತು ಹೆಚ್ಚು ಇಂಧನ-ಸಮರ್ಥ ತಂತ್ರಜ್ಞಾನಗಳತ್ತ ವ್ಯಾಪಕ ಪರಿವರ್ತನೆಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ಡಾ. ಮೌಳಿ ಹೇಳಿದರು. ವರದಿ .ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button