ಸಂಪಾದಕೀಯ

ಕ್ರೋಧಿ” ನಾಮ ಸಂವತ್ಸರದ ನಮಸ್ಕಾರ ಪೂರ್ವಕ ಯುಗಾದಿ ಹೊಸ ವರ್ಷದ ಶುಭಾಷಯಗಳು…🌹

“ಕ್ರೋಧಿ” ನಾಮ ಸಂವತ್ಸರದ ನಮಸ್ಕಾರಪೂರ್ವಕ ಶುಭಾಷಯಗಳು…🌹💐

“ಕ್ರೋಧೀ” ಕ್ರೋಧವನ್ನು ಕಾಲಕಾಲಕ್ಕೆ ಸೃಷ್ಟಿಸುವ, ನಿಯಾಮಕನಾದ, ಪಾಲಕನಾದ, ರಕ್ಷಕನಾದ, ಅಸ್ತಿತ್ವಪ್ರದನಾದ ಅಂತೆಯೇ ನಾರಾಯಣನೇ “ಕ್ರೋಧಿ.”
“ಕ್ರೋಧಕೃತ್” ಕ್ರೋಧವನ್ನು ಹುಟ್ಟಿಸುವವನು ದೇವನೇ “ಕ್ರೋಧಹಾ” ಕ್ರೋಧನಾಶಕನೂ ದೇವನೇ. “ಜಿತಕ್ರೋಧಃ” ಕ್ರೋಧವನ್ನು ಗೆದ್ದವನೂ ದೇವನೇ.

ಕ್ರೋಧೀ ಭವತು ದುರ್ಧರ್ಮೇ ದುಷ್ಟಾನಾಂ ನಿಗ್ರಹೇ ಸದಾ | ಸದಾ ಭವತು ನಿಷ್ಕ್ರೋಧೀ ಸದ್ಧರ್ಮೇ ಭಗವತ್ಪ್ರಿಯೇ ||

ಅಧರ್ಮದ ವಿಷಯದಲ್ಲಿ ಹಾಗೂ ದುಷ್ಟರ ನಿಗ್ರಹದ ವಿಷಯದಲ್ಲಿ “ಕ್ರೋಧಿ” ಯಾಗಿಯೇ ಬರಲಿ.
ದುರ್ಗುಣ ದುರ್ಮನಸ್ಸು ದುರ್ವಿಚಾರಗಳ ವಿರುದ್ಧ “ಕ್ರೋಧಕೃತ್” ಕ್ರೋಧವನ್ನು ಹುಟ್ಟಿಸುವವನು ಆಗಲಿ. ಸದಾಚಾರ ಸದ್ಚಿಚಾರ ಸದ್ಗುಣವಂತಿಕೆಯ ವಿಷಯಕ್ಕೆ “ಕ್ರೋಧಹಾ” ಕ್ರೋಧ ನಾಶಮಾಡುವವನು ಆಗಲಿ. ದೇವ‌ ದೇವತೆ ಗುರು ತಂದೆ ತಾಯಿ ಇವರ ವಿಷಯದಲ್ಲಿ “ಜಿತಕ್ರೋಧಃ” ಕ್ರೋಧವೇ ಮಾಡಿಕೊಳ್ಳದ ಹಾಗೆ ಕ್ರೋಧವನ್ನು ಗೆಲ್ಲುವಂತೆ ಮಾಡಲಿ. ಎಂದು ಶುಭ ಕೋರುವ

Related Articles

Leave a Reply

Your email address will not be published. Required fields are marked *

Back to top button