ಸುದ್ಧಿ

ಅತಿ ಹಿಂದುಳಿದ ನಾಮದೇವ ಸಿಂಪಿ ಸಮಾಜಕ್ಕೆ ಮೀಸಲಾತಿಯಲ್ಲಿ ಅನ್ಯಾಯ

ಕರ್ನಾಟಕ ರಾಜ್ಯ ಶ್ರೀ ನಾಮದೇವ ಸಿಂಪಿ ಸಮಾಜ (ರಿ)

ಅತಿ ಹಿಂದುಳಿದ ನಾಮದೇವ ಸಿಂಪಿ ಸಮಾಜಕ್ಕೆ ಮೀಸಲಾತಿಯಲ್ಲಿ ಅನ್ಯಾಯ

ಹಿಂದುಳಿದ ಸಮುದಾಯದ 2ಎ ವರ್ಗಕ್ಕೆ ಸೇರಿರುವ ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅತ್ಯಂತ ಹಿಂದುಳಿದ ಸಮಾಜವಾಗಿದ್ದು. ಸರ್ಕಾರದ ಸವಲತ್ತುಗಳಿಂದ ಸಂಪೂರ್ಣವಾಗಿ ವಂಚಿತವಾಗಿದೆ ಎಂದು
ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜ ರಾಜ್ಯಾಧ್ಯಕ್ಷ ನಾರಾಯಣರಾವ್ .ವಿ.ಕೋಪರ್ಡೆ ಹೇಳಿದ್ದಾರೆ

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮಗೋ಼ಷ್ಠಿಯಲ್ಲಿ ಮಾತನಾಡಿದ ನಾರಾಯಣರಾವ್. ವಿ. ಕೋರ್ಪಡೆ
ರಾಜ್ಯಾದ್ಯಂತ ಎಂಟು ಲಕ್ಷ ಜನಸಂಖ್ಯೆ ಹೊಂದಿರುವ ನಾಮದೇವ ಸಿಂಪಿ ಸಮುದಾಯಕ್ಕೆ ಇವರೆಗೂ ರಾಜಕೀಯವಾಗಿ ಯಾವುದೇ ಪ್ರಾತಿನಿಧ್ಯ ಸಿಗದೆ ಅನ್ಯಾಯವಾಗಿದೆ ಅಲ್ಲದೆ ಪ್ರಬಲ ಜಾತಿಗಳ ಸ್ಪರ್ಧೆಯಲ್ಲಿ ನಮ್ಮ ಸಮುದಾಯಕ್ಕೆ ಮೀಸಾಲತಿಯಲ್ಲೂ ಸೌಲಭ್ಯ ಸಿಗುವುದರಲ್ಲೂ ಅನ್ಯಾಯವಾಗಿದೆ ಎಂದರು

ದರ್ಜಿ ಕೆಲಸ, ಬಟ್ಟೆ ಹೊಲಿಯುವುದು ಹಾಗೂ ನೇಕಾರಿಕೆ ವೃತ್ತಿಯನ್ನೆ ಅವಲಂಭಿಸರುವ ಈ ಸಮಾಜಕ್ಕೆ ಸರ್ಕಾರದಿಂದ ಆರ್ಥಿಕ ನೆರವು ಸಿಗದೆ ನಿರಂತರ ಅನ್ಯಾಯವಾಗಿದೆ.

ಸರ್ಕಾರಕ್ಕೆ ಹಕ್ಕೊತ್ತಾಯಗಳು

1 ರಾಜಕೀಯ ಪ್ರಾತಿನಿಧ್ಯದಿಂದ ವಂಚಿತವಾಗಿರುವ ನಾಮದೇವ ಸಿಂಪಿ ಸಮುದಾಯವರಿಗೆ ನೇರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಕಷ್ಟದ ಕೆಲಸ ಆದರಿಂದ ಈ ಸಮಾಜದ ಒಬ್ಬರನ್ನು ವಿಧಾನ ಪರಿಷತ್ ಗೆ ನಾಮನಿರ್ದೇಶನ ಮಾಡಬೇಕು

2 ನಾಮದೇವ ಸಿಂಪಿ ಸಮಾಜದ ಸಮಗ್ರ ಅಭಿವೃದ್ಧಿಗೆ ನಾಮದೇವ ಸಿಂಪಿ ಅಭಿವೃದ್ಧಿ ಮಂಡಳಿ ರಚಿಸಿ 50 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು

3 ರಾಜ್ಯಾದಂತ ತಾಲ್ಲೂಕು ಮಟ್ಟದಲ್ಲಿ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಿಸಲು‌ ಜಮೀನು ಮಂಜೂರು ಮಾಡಿ ಹಣ ಬಿಡುಗಡೆ ಮಾಡಬೇಕು

4 ಶಿಕ್ಷಣ ಸಂಸ್ಥೆ, ವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಪಾಲಿಟೆಕ್ನಿಕ್ ಕಾಲೇಜು ಸ್ಥಾಪನೆಗೆ ನೆರವು ನೀಡಬೇಕು.

5 ನೇಕಾರಿಕೆ ಮತ್ತು ಬಟ್ಟೆ ಹೊಲಿಯುವ ವೃತ್ತಿ ನಡೆಸುವವರಿಗೆ ಕೌಶಲ್ಯ ತರಬೇತಿ ಯೋಜನೆಯಡಿ ತರಬೇತಿ ನೀಡಿ ಸ್ವಂತ ಉದ್ಯಮ ಸ್ಥಾಪಿಸಲು ಹಣಕಾಸಿನ ನೆರವು ನೀಡಬೇಕು.

ಮೀಸಲಾತಿ ಸೌಲಭ್ಯ ಪಡೆಯವುದರಲ್ಲೂ ಅನ್ಯಾಯವಾವಗಿದ್ದು ಅದನ್ನು ಸರಿಪಡಿಸಲು ಕ್ರಮಕೈಗೊಳ್ಳಬೇಕು

ಕರ್ನಾಟಕ ಶ್ರೀ ನಾಮದೇವ ಸಿಂಪಿ ಸಮಾಜವು ಬೆಂಗಳೂರಿನ, ವಿಲ್ಸನ್ ಗಾರ್ಡನ್ ನ ಹೊಂಬೇಗೌಡ ನಗರದಲ್ಲಿ ಸಮಾಜದ ಬಂಧುಗಳ ಆರ್ಥಿಕ ನೆರವಿನಿಂದ ಸಮುದಾಯ ಭವನ ಹಾಗೂ ವಿದ್ಯಾರ್ಥಿ ನಿಲಯ ನಿರ್ಮಿಸಿದ್ದು,

*ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಅವರು 25-04-2025 ರ ಶುಕ್ರವಾರದಂದು ನೂತನ *ಶ್ರೀ ನಾಮದೇವ ಭವನದ ಕಟ್ಟಡ ಲೋಕಾರ್ಪಣೆ ಮಾಡಲಿದ್ದಾರೆ.*

ಕಾನೂನು ಮತ್ತು ಸಂಸದೀಯ ಸಚಿವ ಸನ್ಮಾನ್ಯ ಶ್ರೀ ಎಚ್.ಕೆ.ಪಾಟೀಲ್

ಸಾರಿಗೆ ಮತ್ತು ಮುಜರಾಯಿ ಸಚಿವ ಸನ್ಮಾನ್ಯ ಶ್ರೀ ರಾಮಲಿಂಗಾರೆಡ್ಡಿ

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸನ್ಮಾನ್ಯ ಶ್ರೀ ಶಿವಾರಾಜ್ ತಂಗಡಗಿ

ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸದಸ್ಯರು ಸನ್ಮಾನ್ಯ ಶ್ರೀ ಜಗದೀಶ್ ಶೆಟ್ಟರ್

ಮಾಜಿ ಸಚಿವರು ಹಾಗೂ ನರಗುಂದ ಕ್ಷೇತ್ರದ ಶಾಸಕರು ಸನ್ಮಾನ್ಯ ಶ್ರೀ ಸಿ.ಸಿ.ಪಾಟೀಲ್

ಚಿಕ್ಕಪೇಟೆ ಶಾಸಕರು ಸನ್ಮಾನ್ಯ ಶ್ರೀ ಉದಯ ಗರುಡಾಚಾರ್

ರಾಣೆಬೆನ್ನೂರು ಕ್ಷೇತ್ರದ ಶಾಸಕರು ಸನ್ಮಾನ್ಯ ಶ್ರೀ ಪ್ರಕಾಶ ಕೋಳಿವಾಡ

ಮಾಜಿ ಸಚಿವರು ಶ್ರೀಮತಿ ಜಯಮಾಲಾ

ವಿಧಾನಪರಿಷತ್ ಸದಸ್ಯರು ಸನ್ಮಾನ್ಯ ಶ್ರೀ ನಾಗರಾಜ್ ಯಾದವ
ಅವರುಗಳು ಮುಖ್ಯ ಅಥಿತಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

*ಶ್ರೀ ನಾಮದೇವ ಭವನದ ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ 23-04-2025 ಬುಧವಾರ ಬೆಳಿಗ್ಗೆ 10 ಗಂಟೆಗೆ ಆಕರ್ಷಕ ಕಲಾತಂಡಗಳ ಹಿಮ್ಮೇಳದಲ್ಲಿ *ಶ್ರೀ ವಿಠಲ ರುಕ್ಮಾಯಿ ಮೂರ್ತಿಗಳ ವರ್ಣರಂಜಿತ ಸಂಪ್ರದಾಯಿಕ ಮೆರವಣಿಗೆ ನಡೆಯಲಿದೆ*

*24-04-2025 ರ ಗುರುವಾರ ಬೆಳಿಗ್ಗೆ ಸಂತ ಶ್ರೀ ನಾಮದೇವ ಮಹಾರಾಜರ 17 ನೇಯ ವಂಶಸ್ಥರಾದ, ಪಂಢರಪುರದ *ಶ್ರೀ ಜ್ಞಾನೇಶ್ವರ ತುಳಸಿದಾಸ್ ನಾಮದಾಸ್ ಮಹಾರಾಜರ ನೇತೃತ್ವದಲ್ಲಿ ದೇವರ ಮೂರ್ತಿಗಳ ಪ್ರಾಣ ಪ್ರತಿಷ್ಠೆ ಹಾಗೂ ಇತರ ಧಾರ್ಮಿಕ ಕಾರ್ಯಗಳನ್ನು ಆಯೋಜಿಸಲಾಗಿದೆ*

ಕರ್ನಾಟಕ ರಾಜ್ಯ ನಾಮದೇವ ಸಿಂಪಿ ಸಮಾಜದ
ಉಪಾಧ್ಯಕ್ಷ ಶಂಕರ್ ಖಟಾವಕರ್, ಸಂಘಟನಾ ಕಾರ್ಯದರ್ಶಿ ಮೈಪು ರಾಜೇಶ್, ಸಹಕಾರ್ಯದರ್ಶಿ ಗಳಾದ ನಾಗರಾಜ್.ಕೆ.ಪತಂಗೆ, ಪಾಂಡುರಂಗ ಪಿ.ಸೆ. ಕಾರ್ಯಕಾರಿ ಸದಸ್ಯರಾದ ಲಕ್ಷ್ಮಣರಾವ್ ಮಹೇಂದ್ರಕರ್ ಹಾಗೂ ಸಮಾಜದ ಮುಖಂಡರಾದ ರಮೇಶ್.ವಿ.ಚಿಕ್ಕಕಳ್ಕರ್ ಮಾಧ್ಯಮಗೋಷ್ಠಿಯಲ್ಲಿ ಹಾಜರಿದ್ದರು. ವರದಿ.ಮಂಜುಳಾ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button