ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅಧಿಕಾರಿಗಳು ನಡೆಯುತ್ತಿರುವ ಅವ್ಯವಹಾರಗಳು ಮತ್ತು ಅಕ್ರಮಗಳು – ಸಂಗಮಾನಂದ ಸ್ವಾಮಿಜಿ

ಅಲ್ಪಸಂಖ್ಯಾತರ ಇಲಾಖೆಯಲ್ಲಿ ಅಧಿಕಾರಿಗಳ ನಡೆಯುತ್ತಿರುವ ಅವ್ಯವಹಾರಗಳು ಮತ್ತು ಅಕ್ರಮಗಳು – ಸಂಗಮಾನಂದ ಸ್ವಾಮಿಜಿ
ಬೆಂಗಳೂರು ಇಲಾಖೆಯಲ್ಲಿ ಅಧಿಕಾರಿಗಳ ನಡೆಯುತ್ತಿರುವ ಅವ್ಯವಹಾರಗಳು ಮತ್ತು ಅಕ್ರಮಗಳು ಸರ್ಕಾರ ಗಮನವಹಿಸಿ ಬೇಕೆಂದು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಸಂಗಮಾನಂದ ಸ್ವಾಮಿಜಿ ತಿಳಿಸಿದರು ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿತ ಇಲಾಖೆಯಾಗಿರುತ್ತದೆ. ಬಡ, ದೀನ, ದಲಿತ ಮತ್ತು ಅಲ್ಪಸಂಖ್ಯಾತರ ಪಾಲಿನ ಭೀಮಂತ ನಾಯಕ ರಾಜ್ಯದ ಮುಖ್ಯ ಮಂತ್ರಿಗಳಾಗಿರುವ ಸನ್ಮಾನ್ಯ ಶ್ರೀ. ಸಿದ್ದರಾಮಯ್ಯ ರವರು ಅಲ್ಪಸಂಖ್ಯಾತರ ಸಮುದಾಯದ ಎಳಿಗೆಗೆ ಈ ವರ್ಷ ಸುಮಾರು 5000 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಅಲ್ಪಸಂಖ್ಯಾತರ ನಿರ್ದೇಶನಾಯಲದಲ್ಲಿ ಆಗುತ್ತಿರುವ ಅಕ್ರಮಗಳನ್ನು ಬಯಲು ಮಾಡಬೇಕು ಎಂದರು
ಜಂಟಿ ನಿರ್ದೇಶಕರ ಹುದ್ದೆಯನ್ನು ತಮ್ಮ ಇಲಾಖೆಯ ವತಿಯಿಂದ ಇನ್ನೂ ಉಪ ನಿರ್ದೇಶಕರು ಅಲ್ಲದೇ ಕೇವಲ ಜಿಲ್ಲಾ ಅಧಿಕಾರಿ (ಗ್ರೇಡ್-1) ಶ್ರೇಣಿಯ ಶ್ರೀ. ಮಹಿಮೂದ್ ಎಂಬುವವರನ್ನು ಈಗಾಗಲೇ ಉಪ ನಿರ್ದೇಶಕರ ಹುದ್ದೆಯಲ್ಲಿ ಕರ್ತವ್ಯ ನಿರತವಾಗಿದ್ದ ಶ್ರೀ. ಸೈಯದ್ ಮನ್ಸೂರ್ ಬಾಷ ಅವರ ಜಾಗವನ್ನು ತೆರವುಗೊಳಿಸಿ ಜಂಟಿ ನಿರ್ದೇಶಕರ ಹುದ್ದೆಯಲ್ಲಿ ಸ್ವಂತ ವೇತನ ಶ್ರೇಣಿಯಲ್ಲಿ ನಿಯೋಜಿಸಿರುವುದು. 1ಶ್ರೀಮತಿ ತಸ್ಮಿಯಾ ತರನ್ನುಮ್, ಎಲೆಕ್ಟಿಕಲ್ ಇಂಜಿನಿಯರ್ ಆದ ಇವರನ್ನು ಅಲ್ಪಸಂಖ್ಯಾತರ ನಿರ್ದೇಶನಾಲಯದ ಸಿವಿಲ್ ಇಂಜಿನಿಯರ್ ಹುದ್ದೆಯಲ್ಲಿ ಕಳೆದ ಎರಡು ವರ್ಷಗಳಿಂದ ಮುಂದುವರೆಸಿದರುವುದು ಮತ್ತು ಈಗಾಗಲೇ ಸರ್ಕಾರದ ಆದೇಶ ಸಂಖ್ಯೆ:-ಲೋಇ 18 ಸೇಸಎ 2023 ದಿನಾಂಕ:- 18-08-2023 ರನ್ವಯ ಕ್ರ.ಸಂ. 70 ರಲ್ಲಿ ಮಂಜುನಾಥ ಕೆ ದೈವಜ್ಞ ಇವರನ್ನು ಅಲ್ಪಸಂಖ್ಯಾತರ ಇಲಾಖೆಗೆ ಸ್ಥಳ ನಿಯುಕ್ತಿಗೊಳಿಸಲು ಆದೇಶಿಸಿದ್ದರೂ ಸಹ ಅನುಪಾಲನೆ ಮಾಡದೇ ಸರ್ಕಾರಕ್ಕೆ ವರದಿ ಮಾಡದೇ ಸುಮಾರು 1000.00 ಕೋಟಿಗಳ ಅನುದಾನದ ಸಿವಿಲ್ ಕಾಮಗಾರಿಗಳ ಉಸ್ತುವಾರಿಗೆ ಎಲೆಕ್ಟಿಕಲ್ ಇಂಜಿನಿಯರ್ ಓರ್ವರನ್ನು ನಿಯೋಜಿಸಿರುವುದು
- ಕಾರ್ಯನಿರ್ವಾಹಕ ಅಭಿಯಂತರರು (ಸಿವಿಲ್)
ಇಲಾಖೆಯ ವತಿಯಿಂದ ನಿರ್ವಹಿಸಲಾಗುವ ಎಲ್ಲಾ ಸಿವಿಲ್ ಕಾಮಗಾರಿಗಳನ್ನು ಮೇಲುಸ್ತುವಾರಿ ಮಾಡಲು ಮತ್ತು ಇಂಜಿನಿಯರಿಂಗ್ ಕಾಮಗಾರಿಗಳ ಪರಿವೀಕ್ಷಣೆಗೆಂದು ಇಲಾಖೆಯಲ್ಲಿ ಕಾರ್ಯನಿರ್ವಾಹಕ ಅಭಿಯಂತರರು ಹುದ್ದೆ ಒಂದಿದೆ.
ಒಂದು ಸಿವಿಲ್ ಕಾಮಗಾರಿಗೆ ಸಿವಿಲ್ ಇಂಜಿನಿಯರ್ ಇರಬೇಕೆ ಅಥವಾ ಎಲೆಕ್ಟಿಕಲ್ ಇಂಜಿನಿಯರ್ ಸಿವಿಲ್ ಕಾಮಗಾರಿಯನ್ನು ನೋಡಿಕೊಳ್ಳುತ್ತಾನೆಯೇ ಎಂದು ಡಾ ಶಂಕರ್ ಚೌಹಾಣ್ ಅವರು ಪ್ರಶ್ನಿಸಿದರು
“ಇಲ್ಲಿನ ವಿಚತ್ರ ನೋಡಿ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯ ನಂತರ ಹೊಲಿಗೆ ಹಾಕಲು ಡಾಕ್ಟರ್ ಬೇಡ್ ಒಬ್ಬ ಟೈಲರ್ ಇದ್ದರೆ ಸಾಕು ಹೊಲಿಗೆ ಹಾಕುತ್ತಾನೆ ಎನ್ನುವಂತೆ” ಮೂಲತ: ಸರ್ಕಾರದ ಸ್ವಾಯತ್ತ ಕಂಪನಿಯಾದ ಕೆ.ಪಿ.ಟಿ.ಸಿ.ಎಲ್ ನ ಅಧಿಕಾರಿಯಾಗಿರುವ ಎಲೆಕ್ಟಿಕಲ್ ಇಂಜಿನಿಯರ್ ಶ್ರೀಮತಿ. ಸೈಯಿದಾ ತಸ್ಮಿಯಾ ತರನ್ನುಮ್ ಎಂಬುವವರನ್ನು ಪ್ರಭಾರಿ ಅಧಿಕಾರಿಯಾಗಿ ಸ್ಥಳನಿಯುಕ್ತಿಗೊಳಿಸಲಾಗಿದ್ದು ಕಳೆದ ಎರಡರಿಂದ ಮೂರು ವರ್ಷಗಳಿಂದ ಇದೇ ಸ್ಥಳದಲ್ಲಿರುತ್ತಾರೆ ಎಂದು
ಇದೇ ವಿಷಯಕ್ಕೆ ಸಂಬಂಧಿಸಿ ಒಂದು ಕೋರ್ಟ್ ಕೇಸು ಸಹ ಇದೆ ಎಂದು ರಫೀಕ್ ರಹಿತ ಅವರು ದೂರಿದರು
ಸೈದಾ ತಸ್ಮಿಯಾ ತರನ್ನಮ್ ಅವರು ಯಾವುದೇ ಕಂಪನಿಯವರಲ ಸರ್ಕಾರಿ ಹುದ್ದೆ ನವರೇ ಎಂದರು 22ಈ ಮೇಲಿನ ಎಲ್ಲಾ ಅಧಿಕಾರಿಗಳ ವಿರುದ್ಧ ಈಗಾಗಲೇ ಜನವರಿ 2024 ರಂದು ಇಲಾಖೆಗೆ ದೂರನ್ನು ನೀಡಲಾಗಿದೆ ಎಂದರು ಕಾರ್ಯಕ್ರಮದಲ್ಲಿಯೂ ಸಹ ಅನರ್ಹ ಅಧಿಕಾರಿ ಗಳನ್ನು ಅವರವರ ಮಾತೃ ಇಲಾಖೆಗೆ ಹಿಂದಿರುಗಿಸಲು ಕೋರಿರುತ್ತೇನೆ.
ಇಲಾಖೆಯ ಕಾರ್ಯದರ್ಶಿಯಾದ ಮನೋಜ್ ಜೈನ್ ಇವರು ಸದರಿ ದೂರರ್ಜಿಯನ್ನು ನೋಡಿ ಉಡಾಫೆಯಾಗಿ ಉತ್ತರಿಸಿರುತ್ತಾರೆ.
ಈ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಶ್ರೀಮತಿ. ತಸ್ಮಿಯಾ ಇವರ ಪತಿ ಶ್ರೀ. ಮೊಹಮ್ಮದ್ ಸಾ ಮುಲ್ಲಾ ಇವರು ವೃತ್ತಿಯಿಂದ ವಕೀಲರಾಗಿರುತ್ತಾರೆ ಪ್ರಭಾವಿ ಸಚಿವರೊಂದಿಗೆ ಮಿತ್ರರಿದ್ದು, ಪ್ರಭಾವಿ ರಾಜಕಾರಣಿಗಳು ಮತ್ತು ಶಾಸಕರೊಂದಿಗೆ ಒಡನಾಟವಿಟ್ಟುಕೊಂಡಿರುತ್ತಾರೆ.
ನೀವು ದೂರು ಹಿಂಪಡೆಯದಿದ್ದರೆ ನಿಮ್ಮ ವಿರುದ್ಧ ಪೊಲೀಸ್ ಇಲಾಖೆಯಲ್ಲಿ ಇಲ್ಲ ಸಲ್ಲದ ಪ್ರಕರಣದಲ್ಲಿ ಸಿಲುಕಿಸಲಾಗುವುದು ಮತ್ತು ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ಕರೆಗಳು ಸಹ ಬಂದಿರುತ್ತವೆ.
ಮಾನ್ಯ ಮುಖ್ಯಮಂತ್ರಿಗಳ, ಜನಸ್ಪಂದನಾ ಕಾರ್ಯಕ್ರಮದಲ್ಲಿ ನೀಡಲಾಗಿರುವ ದೂರನ್ನು ಯಾವ ಅಧಿಕಾರಿ ಪಾಲನೆ ಮಾಡುತ್ತಿಲ್ಲ ಎಂದರು
ಅಂದರೆ ಸದರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಹಿಡಿತ ಎಷ್ಟು ಗಟ್ಟುಮುಟ್ಟಾಗಿದೆ ಅಂತ ಸ್ಪಷ್ಟ ವಾಗಿ ಎದ್ದು ಕಾಣುತ್ತಿದೆ ಎಂದು ಶಂಕರ್ ಅವರು ತಿಳಿಸಿದರು ಈ ಪತ್ರಿಕಾಗೋಷ್ಟಿ ಯಲ್ಲಿ ಸಂಗಮಾನಂದ ಸ್ವಾಮಿ
ಡಾ ಶಂಕರ ಚವ್ಹಾಣ ರಾಜ್ಯಾಧ್ಯಕ್ಷರು
ರಫಿಕ್ ರಾಹುತ್ ಉಪಸ್ಥಿತರಿದ್ದರು
ವರದಿ ಮಂಜುಳಾ ರೆಡ್ಡಿ



