ಐ.ಡಿ.ಎಸ್. ಎಂ ಟಿ.ದೋಷಪೂರಿತ ವರದಿ ವಿರುದ್ಧ ದೂರು.ಯಾದಗಿರಿ ಜಿಲ್ಲಾಧಿಕಾರಿಗಳಿಂದ ತನಿಖೆಗೆ ಆಗ್ರಹ.

ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ರವರಿಂದ ಶಹಾಪೂರ ನಗರ ಸಭೆಯ ಐ.ಡಿ.ಎಸ್. ಎಂ ಟಿ.ದೋಷಪೂರಿತ ವರದಿ ವಿರುದ್ಧ ದೂರು ಪ್ರಕಾರ ಯಾದಗಿರಿ ಜಿಲ್ಲಾಧಿಕಾರಿಗಳಿಗೆ ತನಿಖೆ ನಡೆಸಿ ಸ್ಪಷ್ಟ ವರದಿ ಸಲ್ಲಿಸುವಂತೆ ಕೋರಲಾಗಿದೆ
ಯಾದಗಿರಿ ಜಿಲ್ಲೆಯ ಶಹಾಪುರ ನಗರಸಭೆಯ ಐ ಡಿ ಎಸ್ ಎಂ ಟಿ ಯೋಜನೆಯಲ್ಲಿ ನಿವೇಶನಗಳು ಅಕ್ರಮ ನೊಂದಣಿ ಮತ್ತು ಅಕ್ರಮ ಖಾತಾ ನಕುಲುಗಳ ಬಗ್ಗೆ ಎರಡನೇ ಹಂತದ ತನಿಖಾ ತಂಡವು ರಾಜಕೀಯ ವ್ಯಕ್ತಿಗಳು ಹಾಗೂ ಭ್ರಷ್ಟಧಿಕಾರಿಗಳೊಂದಿಗೆ ಕೈಜೋಡಿಸಿ ನೂರಾರು ನಿವೇಶನಗಳು ಅಕ್ರಮವಾಗಿದ್ದರು ದಲಿತ ಅಧಿಕಾರಿಗಳ ಅವಧಿಯಲ್ಲಿ ಮಾತ್ರ ತನಿಖೆ ಕೈಗೊಂಡು ಕೇವಲ 27 ನಿವೇಶನಗಳು ಮಾತ್ರ ಅಕ್ರಮವಾಗಿವೆ ಎಂದು ಸರಕಾರಕ್ಕೆ ಕೊಟ್ಟಿರುವ ದೋಷಪೂರಿತ ವರದಿಯನ್ನು
ರದ್ದುಗೊಳಿಸಿ ಉನ್ನತ ಮಟ್ಟದ ತನಿಖೆ ಕೈಗೊಂಡು ದೋಷಪೂರಿತ ವರದಿ ನೀಡಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಶ್ರೀ ಮರಳು ಸಿದ್ದಪ್ಪ ನಾಯ್ಕಲ್ ಕಲಬುರ್ಗಿ ವಿಭಾಗೀಯ ಸಂಘಟನಾ ಸಂಚಾಲಕರು ಕರ್ನಾಟಕ ದಲಿತ ಸಂಘರ್ಷ ಸಮಿತಿ. (ಅಂಬೇಡ್ಕರವಾದ) ಕಲಬುರಗಿ ವಿಭಾಗ. ರವರು. ದಿನಾಂಕ 07.07.2025 ರಂದು.ನಗರಾಭಿವೃದ್ದಿ ಇಲಾಖೆ ಬೆಂಗಳೂರು.ಪ್ರಾದೇಶಿಕ ಆಯುಕ್ತರು ಕಲಬುರ್ಗಿ.ಪೌರಾಡಳಿತ ನಿರ್ದೇಶನಾಲಯ ಬೆಂಗಳೂರು ರವರಿಗೆ. ದೂರು ನೀಡಿದ್ದರಿಂದ.
ಪೌರಾಡಳಿತ ನಿರ್ದೇಶನ ಬೆಂಗಳೂರು ರವರು. ಸರ್ಕಾರ ಹಾಗೂ ಪ್ರಾದೇಶಿಕ ಆಯುಕ್ತರ ಪತ್ರ ಹಾಗೂ ಅದರೊಂದಿಗಿನ ದೂರು ಮನವಿಗಳನ್ನು ಈ ಪತ್ರದೊಂದಿಗೆ ಲಗತ್ತಿಟ್ಟು ಕಳುಹಿಸಿದೆ. ಸದರಿ ದೂರು ಮನವಿಗಳಲ್ಲಿ ಪ್ರಸ್ತಾಪಿಸಿರುವ ಅಂಶಗಳ ಬಗ್ಗೆ ಕುಲಂಕುಶವಾಗಿ ತನಿಖೆ ನಡೆಸಿ ಸ್ಪಷ್ಟ ಅಭಿಪ್ರಾಯದೊಂದಿಗೆ ತುರ್ತಾಗಿ ವರದಿ ಸಲ್ಲಿಸುವಂತೆ ದಿನಾಂಕ 24/09/2025 ರಂದು ಕೋರಿದೆ.





