ಭಾರತದಲ್ಲಿ ಪತ್ರಿಕೋದ್ಯಮ ವೃತ್ತಿ ನಿರ್ವಹಿಸಲು ಸರಿಯಾದ ವಯಸ್ಸು ಎಷ್ಟು

ಭಾರತದಲ್ಲಿ ಪತ್ರಿಕೋದ್ಯಮ ವೃತ್ತಿ ನಿರ್ವಹಿಸಲು ಸರಿಯಾದ ವಯಸ್ಸು ಎಷ್ಟು? ನಾನು ಪತ್ರಕರ್ತನಾಗಲು ಬಯಸುತ್ತೇನೆ, ಆಗಬಹುದೇ? ನಾನು ಪತ್ರಕರ್ತನಾಗಿ ವರದಿ ಮಾಡಬಹುದೇ ಎಂದು 16-17 ವರ್ಷದ ಮಕ್ಕಳು ನನಗೆ phone ಮಾಡಿ ವಿಚಾರಿಸುತ್ತಾರೆ.
ಭಾರತದಲ್ಲಿ ಪತ್ರಿಕೋದ್ಯಮದಲ್ಲಿ ಪತ್ರಕರ್ತ ವೃತ್ತಿ ಮಾಡಲು ವಯಸ್ಸಿನ ಮಿತಿ ಇದೆ, ಅದರ ಬಗ್ಗೆ ನೀವು ಮೊದಲು ತಿಳಿದುಕೊಳ್ಳಬೇಕು. ಇದು 18 ವರ್ಷಗಳು. ನೀವು ಪ್ರೆಸ್ ಐ.ಡಿ. ಕಾರ್ಡ್‌ನೊಂದಿಗೆ ವರದಿ ಮಾಡಲು ಬಯಸಿದರೆ, ನಿಮ್ಮ ವಯಸ್ಸು ಕನಿಷ್ಠ 18 ವರ್ಷಗಳಿರಬೇಕು.ಅಥವಾ 18 ವರ್ಷ ವಯಸ್ಸನ್ನು ಪೂರ್ಣಗೊಳಿಸಿದ ನಂತರವೇ ಯಾವುದೇ ಮಾಧ್ಯಮ ಸಂಸ್ಥೆ ನಿಮ್ಮನ್ನು ಸೇರೀಸಿಕೊಳ್ಳಲು ಅಥವಾ ಅರ್ಜಿ ಸಲ್ಲಿಸಲು ಅರ್ಹರೆಂದು ಪರಿಗಣಿಸುತ್ತದೆ. ಆದರೆ ಮಾನ್ಯತೆ ಪಡೆದಯಲು ಅನುಭವದ ಅವಶ್ಯಕತೆ ಇರಬೇಕು. ನೀವು 18 ಪ್ಲಸ್ ಆಗಿದ್ದರೆ, 18 ವರ್ಷಕ್ಕಿಂತ ಮೇಲ್ಪಟ್ಟಿದ್ದರೆ, ನಿಮಗೆ ಸೌಲಭ್ಯಗಳಿಗೆ ಅರ್ಹರಾಗಲು, ಪತ್ರಿಕಾ ರಂಗದಲ್ಲಿ ನಿಮ್ಮ ಅನುಭವ 8 ವರ್ಷದಿಂದ 15 ವರ್ಷಗಳ ನಡುವೆ ಇರಬೇಕು. ಆಗ ನೀವು ಮಾನ್ಯತೆಗಾಗಿ accradation ಗೆ ಅರ್ಜಿ ಸಲ್ಲಿಸಬಹುದು. ಆಗ ನೀವು ಪತ್ರಿಕಾ ರಂಗದಲ್ಲಿ ಮಾನ್ಯತೆ ಪಡೆದ ಪತ್ರಕರ್ತರಾಗುತ್ತೀರಿ.



