ಸುದ್ಧಿ

ಜಂಗ್ಲಿರಾಜ ಆಡಳಿತ ನಡೆಸುತ್ತಿರುವ ಜಮಖಂಡಿ ತಾಲೂಕು ಸಿ ಪಿ ಐ. ಶ್ರೀ ಮಡ್ಡಿಯವರು.

ಜಂಗ್ಲಿರಾಜ ಆಡಳಿತ ನಡೆಸುತ್ತಿರುವ ಜಮಖಂಡಿ ತಾಲೂಕು ಸಿ ಪಿ ಐ. ಶ್ರೀ ಮಡ್ಡಿಯವರು.ಕಾನೂನಿಗೆ ಖ್ಯಾರೇ ಎನ್ನದೇ, ನ್ಯಾಯಾಲಯದಲ್ಲಿರುವ ಪ್ರಕರಣಗಳಿಗೂ ಸೆಡ್ಡು ಹೊಡೆದು ಅಮಾಯಕರನ್ನು ಬೆದರಿಸುತ್ತಿದ್ದಾರೆ. ಮಾನ್ಯ ಗೃಹ ಸಚಿವರೇ ಉತ್ತರ ಕರ್ನಾಟಕದ ಈ ಪ್ರದೇಶಗಳ ಕಡೆಗೆ ಕಣ್ಣಾಯಿಸಿರಿ.ಅವಿಭಜಿತ ವಿಜಯಪುರ ಜಿಲ್ಲೆಯ ಜಮಖಂಡಿ ಪಟ್ಟಣವು, ತಾಲೂಕು ಕೇಂದ್ರ ಮತ್ತು ವಿಧಾನಸಭಾ ಕ್ಷೇತ್ರವಾಗಿದೆ. ಈಗ ಬಾಗಲಕೋಟ್ ಜಿಲ್ಲೆಗೆ ಸೇರಿರುವ ಸಕ್ಕರೆಯ ಸಿಹಿ ನಾಡು, ಕಬ್ಬು ಬೆಳೆಗಾರರ ಸ್ವರ್ಗವಾಗಿರುವ ಜಮಖಂಡಿ ತಾಲೂಕು ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗಳ ಜಂಗ್ಲಿ ಆಡಳಿತ ಅತಿ ಕೆಟ್ಟದಾಗಿ ನಡೆಯಿಸುತ್ತಿದ್ದಾರನಂತೆ. ಜಮಖಂಡಿ ಪೋಲಿಸ ಠಾಣೆಯ ಕೆಲವು ಅಧಿಕಾರಿಗಳು, ಪೋಲಿಸ ಸಿಬ್ಬಂಧಿಗಳ ಸಮ್ಮೂಖದಲ್ಲಿಯೇ ಮಟಕ, ಜೂಜು, ಇಸ್ಪೇಟ್, ಆನ್ಲೈನ್ ಆಟದ ತವರೂರಾಗಿದೆ. ಮರಳು ಮಾಫಿಯ ಅಂತೂ ಕೇಕೆ ಹಾಕಿ ನಗುತ್ತಿದೆಯಂತೆ ಅಷ್ಟೇ ಅಲ್ಲ, ಸಕ್ಕರೆ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡುವ ಅನ್ನದಾತರ ಕಬ್ಬಿನ Tractor ಗಳಿಗೂ ಮಂತ್ಲೀ ಫಿಕ್ಷ ಮಾಡಿದ್ದಾರೆ ಎಂದು ಅಲ್ಲಿಯ ಜನರು ಆಡಿಕೊಳ್ಳುತ್ತಾರೆ. ಈ ಎಲ್ಲಾ ಘನ ಕಾರ್ಯಗಳು ಜಮಖಂಡಿ ತಾಲೂಕಿನಲ್ಲಿ ಅನುಚಾನವಾಗಿ ನಡೆಯುತ್ತಿದ್ದರೂ ಸಹ . ಪೊಲೀಸ್ ಇಲಾಖೆಯ ಕೆಲವು ಅಧಿಕಾರಿಗಳು ಕೆಲವು ಸಿಬ್ಬಂದಿಗಳು ಕಣ್ಮುಚ್ಚಿಕೊಂಡು ಕುಳಿತು ಹೊಟ್ಟೆ ತುಂಬ ಹಾಲು ಕುಡಿದು ಗಡದ್ದಾಗಿ ಮಲಗಿದವರಂತೆ ನಟಿಸುತ್ತಿದ್ದಾರಂತೆ ಮತ್ತು ಜಾಣ ಕುರುಡುತನದಿಂದ ನವರಂದ್ರಗಳಿ0ದ ಮುಕ್ಕುತ್ತಿದ್ದಾರೆ ಎಂದು ಇಲ್ಲಿಯ ನಾಗರಿಕರ ಅಂಬೋಣ. ಜಮಖಂಡಿ ಸರ್ಕಲ್ ನ ಸರ್ಕಲ್ ಇನ್ಸ್ಪೆಕ್ಟರ್ ಆಫ್ ಪೊಲೀಸ್ ಅಥವಾ ಸಿಪಿಐ ಶ್ರೀ ಮಡ್ಡಿ ಸಾಹೇಬರು ಸಂವಿಧಾನಕ್ಕೆ ಮತ್ತು ಕಾನೂನಿಗೆ ಶೆಡ್ಡು ಹೊಡೆಯುತ್ತಿದ್ದಾರೆ. ಪ್ರತಿಯೊಂದು ಕಾನೂನು ಭಾಹಿರ ಕೆಲಸದಲ್ಲಿ ಮೂಗು ತೂರಿಸುತ್ತಾರೆ. ನ್ಯಾಯಾಲಯದಲ್ಲಿ ನಡೆಯುತ್ತಿರುವ ಕೇಸ್ ಗಳಿಗೂ ಖ್ಯಾರೆ ಅನ್ನುತ್ತಿಲ್ಲ. ತಮ್ಮದಲ್ಲದ. ತಮಗೆ ಸಂಬ0ಧವಿಲ್ಲದ ಕೆಲಸಗಳಲ್ಲಿ ಮುಂಚೂಣಿಯಾಗಿ ನಿಂತು ಅಮಾಯಕ ನಾಗರಿಕರನ್ನು ಬೆದರಿಸುತ್ತಾ, ಜಬರಿ ವಸೂಲಿ ನಿರಾಂತಕವಾಗಿ ಮಾಡುತ್ತಿದ್ದಾರಂತೆ. ಸಿಪಿಐ ಶ್ರೀ ಮಡ್ಡಿಯವರು ತಮ್ಮ ಆಪ್ತ ಶ್ರೀ ಪರಶುರಾಮ್ ಘಾಟಿಗೆ Head Constable ಅವರ ಮೊಬೈಲ್ ನಿಂದ ಜನರನ್ನು ಬೆದರಿಸುತ್ತಾರೆ. ನಾಗರಿಕರ ಮನೆಯ ಎದುರು ಪರಶುರಾಮ ಘಾಟಗೆ ಮತ್ತು ಪಿ.ಸಿಗಳನ್ನು ಕಳುಹಿಸಿ ಬೆದರಿಕೆ ಹಾಕಿಸುತ್ತಾರೆ. ಜಮಖಂಡಿ ಪಟ್ಟಣದ ಮುಗ್ಧ, ಅಮಾಯಕ ವ್ಯಕ್ತಿ ಒಬ್ಬನನ್ನು ಇನ್ನಿಲ್ಲದಂತೆ ಕಾಡುತ್ತಿರುವ ಶ್ರೀ ಮಡ್ಡಿ ಸಿಪಿಐ ಅವರು ಮುಖ್ಯ ಪೆದೆ ಅವರಿಂದ ಫೋನ ಹಾಕಿಸಿ ಅದರಲ್ಲಿ ಸಿ.ಪಿ.ಐ ಅವರೂ ಕೂಡ ಮಾತಾಡಿರುವ ರೆಕಾರ್ಡ ಈ ಪೇಜ್‌ನಲ್ಲಿ ಕೇಳಬಹುದು. ಪೊಲೀಸ್ ಸ್ಟೇಷನ್‌ಗೆ ಬರಲೇಬೇಕು ಎಂದು ಸಿಪಿಐ ಮತ್ತು ಪರಶುರಾಮ್ ಹೆಡ್ ಕಾನ್ಸ್ಟೇಬಲ್ ಜಬರಿಸಿದ್ದಾರೆ. ಇವರು ಸುಮಾರು ನಾಲ್ಕು ತಿಂಗಳ ಹಿಂದೆ ಬಸವಂತ ರಾಮಣ್ಣ ಬಡಿಗೇರ್ ಇವರ ವಿರುದ್ಧ ಮೊಹಮ್ಮದ್ ತನ್ವೀರ್ ಎಂಬ ವ್ಯಕ್ತಿಯಿಂದ ಕಂಪ್ಲೇoಟ್ ಪಡೆದು ಬಸವಂತ ರಾಮಣ್ಣ ಬಡಿಗೇರ್ ಅವರನ್ನು ಸಿಪಿಐ ಮಡ್ಡಿ ಮತ್ತು ಪರಶುರಾಮ್ ಘಾಟ್ಗೆ ಇನ್ನಿಲ್ಲದಂತೆ ಬೆನ್ನು ಬಿದ್ದಿದ್ದಾರೆ. ೪ ತಿಂಗಳ ಹಿಂದೆ ಪೋನನಲ್ಲಿ ಮಾತಾಡಿರುವ ಆಡಿಯೋ ಇದೇ ಪೇಜ್‌ನಲ್ಲಿ ಕೇಳಬಹುದು. ಸಿ.ಪಿ.ಐ.ಯವರು ಇದ್ದ ಬಿದ್ದ ಸೆಕ್ಷನ್ ಗಳನ್ನು ಹಾಕಿ ಕೇಸ್ ಜಡಿದು ಐದು ವರ್ಷ ಜೈಲಿನಲ್ಲಿ ಕೊಳೆಯುವಂತೆ ಮಾಡುತ್ತೇನೆ ಎಂದು ಬಸವಂತ ಇವರಿಗೆ ರೋಪ ಹಾಕುತ್ತಿದ್ದಾರೆ. ಇದಕ್ಕೆಲ್ಲ ಪರಶುರಾಮ್ ಘಾಟಿಗೆ ಅವರು ಮಡ್ಡಿ ಸರ್ಕಲ್ ಇನ್ಸ್ಪೆಕ್ಟರ್ ಅವರಿಗೆ ಬಲಭು ಜರಾಗಿ ಎಲ್ಲ ಕಾಯಕಕ್ಕು ಸಾತ್ ಕೊಡುತ್ತಿದ್ದಾರನಂತೆ.

Related Articles

Leave a Reply

Your email address will not be published. Required fields are marked *

Back to top button