ಸುದ್ಧಿ

ಟೈಮ್ ಬಾಂಡ್ ಇಂಕ್ರಿಮೆಂಟ್ ಬೇಡಿಕೆಯ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ

ಸಂಘದ ಸುದ್ದಿ
🌺🌺🌺🌺🌺🌺🌺🌺🌺
ಕರ್ನಾಟಕ ರಾಜ್ಯ ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ರಾಜ್ಯ ಘಟಕ ಬೆಂಗಳೂರು
🌺🌺🌺🌺🌺🌺🌺🌺🌺
ರಾಜ್ಯ ಕಾರ್ಯಕಾರಿಣಿ ಸಭೆ
ಹುಬ್ಬಳ್ಳಿ
🌺🌺🌺🌺🌺🌺🌺🌺🌺
Declaration of Hubbli meeting Date 15/12/2024
🌺🌺🌺🌺🌺🌺🌺🌺🌺

Declaration no 1

ಟೈಮ್ ಬಾಂಡ್ ಇಂಕ್ರಿಮೆಂಟ್ ಬೇಡಿಕೆಯ ಈಡೇರಿಕೆಗಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಧರಣಿ ಸತ್ಯಾಗ್ರಹ ಸಭೆಯ ಅನುಮೋದನೆ
ಧರಣಿ ಸತ್ಯಾಗ್ರಹ ಜನವರಿ ಕೊನೆಯ ವಾರ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಮಾಡಲು ದಿನಾಂಕ ನಿಗದಿ ಮಾಡಲು ಸಭೆಯು ಅನುಮೋದನೆ

Declaration No-2

ಫ್ರೀಡಂ ಪಾರ್ಕ್ ನಲ್ಲಿ ಚಳುವಳಿ ಮಾಡಲು ಹಣಕಾಸಿನ ವೆಚ್ಚಕ್ಕಾಗಿ ರಾಜ್ಯದ ಪ್ರತಿಯೊಬ್ಬ ಬಡ್ತಿ ಶಿಕ್ಷಕರಿಂದ 1000/- ಒಂದು ಸಾವಿರ ರೂಪಾಯಿ ಸಂಗ್ರಹ ದಿನಾಂಕ 15 12 2024 ಒಳಗೆ ಸಂಗ್ರಹಿಸಿ ತಕ್ಕದ್ದು

Declaration No-3

ಫ್ರೀಡಂ ಪಾರ್ಕಿನ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಸನ್ಮಾನ್ಯಶ್ರೀ ಚೇತನ್ ಗೌಡರವರು ಸಹಾಯಸ್ತವಾಗಿ ಒಂದು ಲಕ್ಷ ರೂಪಾಯಿಗಳ ಘೋಷಣೆ ಸದರಿ ಘೋಷಣೆಯನ್ನು ಸಭೆಯು ಚಪ್ಪಾಳೆ ಮಾಡುವುದರ ಮೂಲಕ ಅನುಮೋದನೆ ವ್ಯಕ್ತಪಡಿಸಿದರು

Declaration No-4

ಸಂಘದ ಗೌರವಾಧ್ಯಕ್ಷರಾಗಿ ಶ್ರೀ ಚೇತನ್ ಗೌಡ ರವರನ್ನು ಆಯ್ಕೆ ಸಭೆ ಅನುಮೋದನೆ

Declaration No-5

ಜನವರಿ 15ರ ಒಳಗೆ ಹೋರಾಟದ ಖರ್ಚು ವೆಚ್ಚಕ್ಕಾಗಿ ಪ್ರತಿಯೊಬ್ಬ ಬಡ್ತಿ ಶಿಕ್ಷಕರಿಂದ1000/- ಸಾವಿರ ರೂಪಾಯಿ ಸಂಗ್ರಹ ಸದರಿ ಜವಾಬ್ದಾರಿಯನ್ನು ಜಿಲ್ಲಾಧ್ಯಕ್ಷರು ವಹಿಸಿ ತಕ್ಕದ್ದು ಹಾಗೂ ತಾಲೂಕಿನ ಅಧ್ಯಕ್ಷರುಗಳು ಸಂಗ್ರಹಿಸಿ ಜಿಲ್ಲಾ ಅಧ್ಯಕ್ಷರಿಗೆ ಹಸ್ತಾಂತರಿಸುವುದು
ಹಣದ ನಿರ್ವಹಣೆಗಾಗಿ ಕೇಂದ್ರ ಸಂಘದಿಂದ 10 ಸದಸ್ಯರ ಸಮಿತಿಯನ್ನು ರಚನೆಯ ಪ್ರಸ್ತಾವನೆ ಸಭೆ ಅನುಮೋದನೆ

Declaration No:-6 ಸಂಘದ ವತಿಯಿಂದ 2025 ವಾರ್ಷಿಕ ಕ್ಯಾಲೆಂಡರ್ ಬಿಡುಗಡೆಗೆ ಸಭೆಯು ಅನುಮೋದನೆ ನೀಡಲಾಯಿತು

Declaration No-7

ಸಂಘದ ಮುಖ್ಯ ಸಲಹೆಗಾರರಾಗಿ ಶ್ರೀ ಲಕ್ಷ್ಮಿನಾಥ್ ರವರ ಆಯ್ಕೆಯನ್ನು ಸವಿಲು ಅನುಮೋದನೆ ನೀಡಿತು

Declaration No-8

ಟೈಮ್ ಬಾಂಡ್ ಇಂಕ್ರಿಮೆಂಟ್ ಸಂಬಂಧ
ಹುಬ್ಬಳ್ಳಿ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನವನ್ನು ಪದವಿ ಕ್ಷೇತ್ರದ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ತಿನ ಮಾನ್ಯ ಸದಸ್ಯರ ಗಮನಕ್ಕೆ ತಂದು ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳುವುದು

Declaration No-9

ಡಿಸೆಂಬರ್ 31ರ ಒಳಗೆ ಎಲ್ಲಾ ಜಿಲ್ಲಾ ಅಧ್ಯಕ್ಷರು ಇವರುಗಳ ಸಭೆಯನ್ನು ಬೆಂಗಳೂರಿನ ಬೋರಿಂಗ್ ಕ್ಲಬ್ ನಲ್ಲಿ ಕರೆದು ಮತ್ತೊಂದು ಸುತ್ತಿನ ಚರ್ಚೆ ಮಾಡಿ ಬ್ಲೂ ಪ್ರಿಂಟ್ ತಯಾರಿಕೆ
ಮೇಲಿನ ಎಲ್ಲಾ ನಿರ್ಣಯಗಳನ್ನು ಸಭೆಯು ಸರ್ವಾನುಮತದಿಂದ ಅನುಮೋದನೆ ನೀಡಿತು

Declaration No-10

ಜಿಲ್ಲಾ ಅಧ್ಯಕ್ಷರು ಹಾಗೂ ತಾಲೂಕ ಅಧ್ಯಕ್ಷರುಗಳು ತಮ್ಮ ವ್ಯಾಪ್ತಿಯ ಬಡ್ತಿ ಶಿಕ್ಷಕರ ನಿಖರ ಸಂಖ್ಯೆಯನ್ನು ಪಡೆದು ಒಬ್ಬರನ್ನೂ ಬಿಡದಂತೆ ಪ್ರತಿಯೊಬ್ಬರಿಂದ ಹೋರಾಟಕ್ಕೆ ವೆಚ್ಚಕ್ಕಾಗಿ ರೂ.1,000 ರೂಪಾಯಿಗಳನ್ನು ಸಂಗ್ರಹ ಮಾಡಲು ಕೋರಿದೆ

ಮೇಲಿನ ಎಲ್ಲಾ ನಿರ್ಣಯಗಳನ್ನು ರಾಜ್ಯದ ಸಮಸ್ತ ಬಡ್ತಿ ಬಂಧುಗಳ ಗಮನಕ್ಕೆ ತರುತ್ತ ಟೈಮ್ ಬಾಂಡ್ ಇಂಕ್ರಿಮೆಂಟ್ ಬೇಡಿಕೆಯ ಈಡೇರಿಕೆಗಾಗಿ ಸಭೆಯು ತೆಗೆದುಕೊಂಡ ತೀರ್ಮಾನಕ್ಕೆ ಬೆಂಬಲಿಸಿ ಸಹಕಾರ ಆರ್ಥಿಕ ಸಹಾಯ ನೀಡಿ ಯಶಸ್ವಿಯಾಗಲು ಸಹಕರಿಸಬೇಕು ಹಾಗೂ ಧರಣಿ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ಗೌರವಾನ್ವಿತ ಬಡ್ತಿ ಶಿಕ್ಷಕ ಬಂಧುವು ಉಪಸ್ಥಿತಿ ಇದ್ದು ಯಶಸ್ವಿ ಯ ಭಾಗದಲ್ಲಿ ಸಾಕ್ಷಿಭೂತರಾಗಬೇಕಾಗಿ ಪ್ರಾರ್ಥನೆ

ಹುಬ್ಬಳ್ಳಿಯಲ್ಲಿ ನಡೆದ ಸಂಘದ ರಾಜ್ಯ ಕಾರ್ಯಕಾರಿ ಸಭೆ ಅತ್ಯಂತ ಯಶಸ್ವಿಯಾಗಿ ನಡೆಯಿತು ಈ ಯಶಸ್ವಿಗೆ ಕಾರಣೀಭೂತರಾದ ಧಾರವಾಡ ಜಿಲ್ಲಾ ಘಟಕದ ಪದಾಧಿಕಾರಿಗಳ ಮಿತ್ರರಿಗೆ ಕೇಂದ್ರ ಸಂಘದ ವತಿಯಿಂದ ಅಭಿನಂದನೆಗಳು

ನಮಸ್ಕಾರಗಳೊಂದಿಗೆ

ಇಂತಿ
ಶ್ರೀ ಎಲ್ಲಪ್ಪ ಗೌಡ
ರಾಜ್ಯಾಧ್ಯಕ್ಷರು
ಶ್ರೀ ಚಿಕ್ಕ ಹನುಮಗೌಡ
ಉಪಾಧ್ಯಕ್ಷರು
ಶ್ರೀ ಬಸವರಾಜು
ಕೋಶಾಧ್ಯಕ್ಷರು
ಶ್ರೀ ವೆಂಕಟೇಶ್ ಚಿನ್ನೂರು
ಪ್ರಧಾನ ಕಾರ್ಯದರ್ಶಿಗಳು.

Oplus_131072

Related Articles

Leave a Reply

Your email address will not be published. Required fields are marked *

Back to top button