ದಿನಾಂಕ 29.06.2025 ರಂದು ರಾಜ್ಯ ಮಾತಂಗ ಜಾಗೃತಿ ಸಮಿತಿಯ ಸರ್ವ ಸದಸ್ಯರ ಏರ್ಪಡಿಸಿದ್ದರು ಸಭೆ

ದಿನಾಂಕ 29.06.2025 ರಂದು ರಾಜ್ಯ ಮಾತಂಗ ಜಾಗೃತಿ ಸಮಿತಿಯ ಸರ್ವ ಸದಸ್ಯರ ಏರ್ಪಡಿಸಿದ್ದರು ಸಭೆಯ ನಂತರ ಸಮುದಾಯದ ವಿಚಾರ ಸಂಕಿರಣ

ಏರ್ಪಡಿಸಲಾಗಿತ್ತು. ಈ ವಿಚಾರ ಸಂಕಿರಣ ಸಭೆಯಲ್ಲಿ ಶ್ರೀ ಶ್ರೀ ಶ್ರೀ ಬಸವ ಮೂರ್ತಿ ಮಾದಾರ ಚನ್ನಯ್ಯ ಸ್ವಾಮಿಜಿರವರು ಹಾಗೂ ಶ್ರೀ ಶ್ರೀ ಶ್ರೀ ಷಡಕ್ಷರ ಮುನಿ ದೇಶಿಕೆಂದ್ರ ಸ್ವಾಮಿಜಿಗಳು ಭಾಗವಹಿಸಿದ್ದರು, ಇದು ರಾಜಕೀಯೇತರ ಸಂಸ್ಥೆ, ನಿಸ್ವಾರ್ಥ ಶ್ರಮಜೀವಿಗಳು ಕಟ್ಟಿರುವ ಸಮಾನ ಮನಸ್ಕರರ ಸಮಿತಿ , ಇಂತಹ ಸಮಿತಿಗಳು ನಮ್ಮ ಸಮುದಾಯದಲ್ಲಿ ಅಪರೂಪ ಎಲ್ಲಾರು ಒಗ್ಗಟ್ಟು ಪ್ರದರ್ಶಸಿ ಶುದ್ದ ಮನಸ್ಸಿನಿಂದ ಸಮಿತಿಯನ್ನು ಕಟ್ಟಿ ಬೆಳೆಸಿ ಎಂದು ಸಮಿತಿಯ ಕಿವಿ ಮಾತು ಹೇಳುವ ಮೂಲಕ ಪಧಾದಿಕಾರಿಗಳಿಗೆ ಹಾರೈಸಿದರು. ಇದೆ ಸಂದರ್ಭದಲ್ಲಿ ವಿಧ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಸಮುದಾಯದ ಮಕ್ಕಳನ್ನು ಹಾಗೂ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ಮಾಡಿದ ಮಕ್ಕಳನ್ನು ಸನ್ಮಾನಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರು, ಅಧ್ಯಕ್ಷರು ಹಾಗೂ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರೆಂದು ಸಮಿತಿಯ ಮಾದ್ಯಮ ಮತ್ತು ಪ್ರಚಾರ ಸಮಿತಿ ತಿಳಿಸಿದರು.





