ಸುದ್ಧಿ
ಫಾತಿಮಾ ಶೇಖ್ ಸಾಧನೆ ಸಮಾಜಕ್ಕೆ ಮಾದರಿ..ಕನಕಗಿರಿ

ಫಾತಿಮಾ ಶೇಖ್ ಸಾಧನೆ ಸಮಾಜಕ್ಕೆ ಮಾದರಿ
ಕನಕಗಿರಿ: ‘ಮಹಿಳೆಯರಿಗೆ ಶಿಕ್ಷಣ ದೊರಕದ ಕಾಲದಲ್ಲಿ ಅಕ್ಷರ ಕಲಿತು ಮೊದಲ ಮುಸ್ಲಿಂ ಶಿಕ್ಷಕಿಯಾಗಿದ್ದ ಫಾತಿಮಾ ಶೇಖ್ ಅವರ ಸಾಧನೆ ಸಮಾಜಕ್ಕೆ ಮಾದರಿಯಾಗಿದೆ’ ಎಂದು ಪ್ರಗತಿಪರ ಮುಖಂಡ ಪಾಮಣ್ಣ ಅರಳಿಗನೂರು, ಯುವ ಮುಂದಾಳು ಅನ್ನು ಚಳ್ಳಮರದ್ ಹೇಳಿದರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಫಾತಿಮಾ ಶೆಕ್ ಜನ್ಮದಿನಾಚರಣೆ ಅಂಗವಾಗಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನಸಲ್ಲಿಸಿ ಮಾತನಾಡಿದರು.
ಭಾರತದ ಮೊದಲ ಮುಸ್ಲಿಂ ಮಹಿಳಾ ಶಿಕ್ಷಕಿ ಮತ್ತು ಸಮಾಜ ಸುಧಾರಕಿಯಾಗಿದ್ದು, ಸಾವಿತ್ರಿಬಾಯಿ ಫುಲೆ ಅವರೊಂದಿಗೆ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದರು ಎಂದರು.
ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಚಲುವಾದಿ, ಪ.ಪಂ ಹಂಗಾಮಿ ಅಧ್ಯಕ್ಷ ಕಂಠಿರಂಗ ನಾಯಕ, ಪ್ರಮುಖರಾದ ನೀಲಕಂಠ ಬಡಿಗೇರ್, ಮಕ್ತುಮ್ ಸಾಬ, ಶಶಿ ಕೋರಿ, ಮಂಜುನಾಥ, ಉಮೇಶ ಮ್ಯಾಗಡೆ, ಕಲ್ಯಾಣಪ್ಪ ಇತರರು ಇದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



