ಬೇಸಿಕೆ ಬಿಸಿಲಿಗೆ ತತ್ತರ. ನೀರಿಗಾಗಿ ಪ್ರಾಣಿ ಪಕ್ಷಿಗಳು ಹಾಹಾಕಾರ….ಹನುಮೇಶ್ ಗಂಗಾಮತ
ಬೇಸಿಕೆ ಬಿಸಿಲಿಗೆ ತತ್ತರ: ನೀರಿಗಾಗಿ ಪ್ರಾಣಿ ಪಕ್ಷಿಗಳು ಹಾಹಾಕಾರ ಉಂಟಾಗಿದೆ
ಕನಕಗಿರಿ ತಾಲೂಕಿನ ಹಲವಡೆ ಬಿಸಿಲಿನ ತಾಪ ಹೆಚ್ಚಾಗಿದೆ ಕನಕಗಿರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಹಲವಡೆ ನೀರಿನ ತೊಂದರೆ ಉಂಟಾಗುತ್ತಿದೆ. ಪ್ರಾಣಿ-ಪಕ್ಷಿಗಳು ಕೆರೆಗಳಲ್ಲಿ ಹಾಗೂ ಹಳ್ಳ ಗಳಲ್ಲಿ ನೀರಿಲ್ಲದೆ ಆಹಾಕಾರದಲ್ಲಿ ಮುಳುಗಿರುತ್ತದೆ ಅಂತರ್ಜಲ ಕುಸಿತದಿಂದ ಬೋರುಗಳು ಬಾವಿಗಳಲ್ಲಿ ನೀರಿನ ತೊಂದರೆ ಉಂಟಾಗಿದೆ ಎಂದು ಹನುಮೇಶ್ ಗಂಗಾಮತ ತಿಳಿಸಿದರು.
ಮತ್ತು ಜೊತೆಗೆ ಜನರು ನೀರಿಲ್ಲದೆ ಪರದಾಟ ಪಡುತ್ತಿದ್ದಾರೆ ಬೇಸಿಗೆ ದಿನದಲ್ಲಿ ದನಕರಗಳಿಗೆ ಮೇವು ಇಲ್ಲದ ಕಾರಣ ತುಂಬಾ ಬರಗಾಲ ಪೀಡಿತರಾಗಿರುತ್ತರೆ.
ಕನಕಗಿರಿ ಭಾಗದ ಜನರಿಗೆ ಹಲವು ವಾರ್ಡುಗಳಲ್ಲಿ ಹಾಗೂ ಗ್ರಾಮಗಳಲ್ಲಿ ನೀರಿನ ಟ್ಯಾಂಕಿ ಗಳಿಂದ ಗ್ರಾಮ ಪಂಚಾಯಿತಿ ವತಿಯಿಂದ ಕಲ್ಪಿಸಿ ಕೊಡಬೇಕೆಂದು ಇನ್ನೂ ಪಟ್ಟಣದಲ್ಲಿ ನೀರಿನ ಸಮಸ್ಯೆಗೆ ಹೊಸ ಉಪಾಯ ಮಾಡಬೇಕೆಂದು ಮತ್ತು ಗೋಶಾಲೆಗಳು ತೆರೆದು ಮೇವು ಕಲ್ಪಿಸಿ ಕೊಡಬೇಕೆಂದು ಸರ್ಕಾರವು ಹಾಗೂ ಅಧಿಕಾರಿ ಗಳು ಸೂಕ್ತ ಕ್ರಮ ವಹಿಸಬೇಕೆಂದು ಹಾಗೂ ನೀರಿನ ಮತ್ತು ಧನಕರಿಗಳಿಗೆ ಮೇವಿನ ಸಮಸ್ಯೆಯನ್ನು ಪರಿಹರಿಸಬೇಕೆಂದು ಹನುಮೇಶ್ ಗಂಗಾಮತ, ಸಮಾಜ ಸೇವಕರು ಇವರು ಶಾಸಕರು ಹಾಗೂ ಸರ್ಕಾರಕ್ಕೆ ಕೋರಿರುತ್ತಾರೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



