ಸುದ್ಧಿ

ಕನಕಗಿರಿ: ಪಟ್ಟಣ ಪಂಚಾಯಿತಿಯಿಂದ ಅರ್ಜಿ ಆಹ್ವಾನ. ಕೊಪ್ಪಳ ಜಿಲ್ಲೆ.

ಕನಕಗಿರಿ: ಪಟ್ಟಣ ಪಂಚಾಯಿತಿಯಿಂದ ಅರ್ಜಿ ಆಹ್ವಾನ

ಕನಕಗಿರಿ ಪಟ್ಟಣ ಪಂಚಾಯಿತಿಯಿಂದ ಸ್ವಚ್ಚ ಭಾರತ್ ಮಿಷನ್ (ನಗರ) 2.0 ಅಡಿಯಲ್ಲಿ ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕಾಗಿ ಕನಕಗಿರಿ ಪಟ್ಟಣಕ್ಕೆ 75 ವೈಯಕ್ತಿಕ ಶೌಚಾಲಯಗಳ ಗುರಿ ನೀಡಿದ್ದು ಕನಕಗಿರಿ ಪಟ್ಟಣದ ವ್ಯಾಪ್ತಿಯಲ್ಲಿ ವೈಯಕ್ತಿಯ ಶೌಚಾಲಯಗಳನ್ನು ಹೊಂದದಿರುವ ಫಲಾನುಭವಿಗಳು ತಮ್ಮ ಸ್ವಂತ ಜಾಗೆಯಲ್ಲಿ ವೈಯಕ್ತಿ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಜಾತಿ ಆದಾಯ ಪ್ರಮಾಣ ಪತ್ರ., ಆಧಾರ್ ಕಾರ್ಡ್., ಪಡಿತರ ಚೀಟಿ., ಬ್ಯಾಂಕ್ ಪಾಸ್ ಪುಸ್ತಕ, ಅರ್ಜಿದಾರರ ಫೋಟೋ., ಆಸ್ತಿ ದಾಖಲಾತಿ ಮತ್ತು ಶೌಚಾಲಯ ನಿರ್ಮಾಣ ಜಾಗದ ಡಿಜಿಟಲ್ ಫೋಟೋ ಮತ್ತು ಫಲಾನುಭವಿಗಳ ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ದಾಖಲಾತಿಗಳೊಂದಿಗೆ ಕಾರ್ಯಾಲಯದಿಂದ ಅರ್ಜಿ ನಮೂನೆ ಪಡೆದು ಏಳು ದಿನಗಳೊಳಗೆ ಅರ್ಜಿ ಸಲ್ಲಿಸಲು ಕನಕಗಿರಿ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳು ದತ್ತಾತ್ರೇಯ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ

Related Articles

Leave a Reply

Your email address will not be published. Required fields are marked *

Back to top button