ಸುದ್ಧಿ

ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮ ದಿಲ್ಲಿಯಲ್ಲಿ ಭಾಗವಹಿಸಲಿರುವ ಅಕ್ಷರ ಮಲಿಕ್ ಈ ವಿದ್ಯಾರ್ಥಿನಿ

ಇನ್ಸ್ಪೈರ್ ಅವಾರ್ಡ್ ಕಾರ್ಯಕ್ರಮ ದಿಲ್ಲಿಯಲ್ಲಿ ಭಾಗವಹಿಸಲು ಖಾನಾಪುರ ತಾಲೂಕಿನ ಭೀಮಗಡ್ ಅರಣ್ಯ ವಿಭಾಗದಲ್ಲಿ ಇರುವ ಎಂ ಎಚ್ ಪಿ ಎಸ್ ಪಾಲಿ ಇಂದ ಕುಮಾರಿ ಅಕ್ಷರ ಮಲಿಕ್ ಈ ವಿದ್ಯಾರ್ಥಿನಿ ತನ್ನ ಮಾದರಿಯೊಂದಿಗೆ ದಿಲ್ಲಿಗೆ ಹೋಗಿ ಪ್ರದರ್ಶನ ನೀಡುತ್ತಿದ್ದಾಳೆ ಗ್ರಾಮವು ಖಾನಾಪುರದಿಂದ 35 ಕಿಲೋಮೀಟರ್ ದೂರದ ನಿಸರ್ಗದ ಮಡಿಲಲ್ಲಿದೆ ಈ ಶಾಲೆಯಲ್ಲಿ 24 ಮಕ್ಕಳಿದ್ದು ಅತಿಥಿ ಶಿಕ್ಷಕರಿಂದಲೇ ಮಗು ತರಬೇತಿ ಪಡೆದು ಭಾಗವಹಿಸುತ್ತಿದೆ ಮರಾಠಿ ಭಾಷೆ ಬಿಟ್ಟರೆ ಬೇರೆ ಭಾಷೆ ಮಾತನಾಡಲು ಬರುವುದಿಲ್ಲ ಶಿಕ್ಷಕರು ಹಿಂದಿ ಭಾಷೆಯಲ್ಲಿ ತರಬೇತಿಯನ್ನು ನೀಡಿದ್ದಾರೆ ಈ ಶಾಲೆಯಲ್ಲಿ ನಿಯೋಜನೆ ಮೇಲೆ ಕಾರ್ಯನಿರ್ವಹಿಸುತ್ತಿರುವ ಟಿ ಜಿ ಪಿ ಸಮಾಜ ವಿಜ್ಞಾನ ಶಿಕ್ಷಕರು ಹಾಗೂ ಸಿ ಆರ್ ಪಿ ಯವರು ಮಗುವಿಗೆ ಮಾರ್ಗದರ್ಶನ ಮಾಡಿದ್ದಾರೆ ಈ ಊರಿಗೆ ಬಸ್ಸಿನ ಸೌಕರ್ಯ ಇಲ್ಲ ನೈಸರ್ಗಿಕ ನೀರನ್ನು ಬಳಸಿ ವರ್ಷವಿಡಿ ಅಡಿಗೆ ತಯಾರಾಗುತ್ತದೆ ಸದ್ಯ ಎಂಟನೇ ತರಗತಿ ಸರ್ಕಾರಿ ಮರಾಠಿ ಪ್ರೌಢಶಾಲೆ ಶಿರೂಲಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ ದಿನನಿತ್ಯ ಪಾಲಿಯಿಂದ ಪಾಲಿ ಕ್ರಾಸ್ ವರೆಗೆ 3 ಕಿ.ಮೀ ನಡೆದು ಅಲ್ಲಿ ಗೋವಾ ಕಡೆಯಿಂದ ಬರುವ ಬಸ್ ಹತ್ತಿ ಹದಿನೈದು ಕಿಲೋಮೀಟರ್ ದೂರದ ಸರ್ಕಾರಿ ಪ್ರೌಢಶಾಲೆ ಶಿರೋಲಿಗೆ ಹೋಗುತ್ತಾಳೆ ಈ ಕಾಡಿನ ಮಗುವಿಗೆ ನಿಮ್ಮದೊಂದು ಶುಭ ಹಾರೈಕೆ ಇರಲಿ ಬಿಇಒ ಖಾನಾಪುರ್i

Related Articles

Leave a Reply

Your email address will not be published. Required fields are marked *

Back to top button