ಸುದ್ಧಿ

ಹನುಮನಾಳ ಕರಿ ಬಸವೇಶ್ವರ ಜಾತ್ರಾ ಮಹೋತ್ಸವ…..ಕನಕಗಿರಿ ವಿಧಾನಸಭಾ ಕ್ಷೆತ್ರ.

ಹನುಮನಾಳ ಕರಿ ಬಸವೇಶ್ವರ ಜಾತ್ರಾ ಮಹೋತ್ಸವ

ಕನಕಗಿರಿ ವಿಧಾನಸಭಾ ಕ್ಷೆತ್ರದ ಹನುಮನಾಳ ಗ್ರಾಮದಲ್ಲಿ ಸೋಮವಾರ ನಡೆದ ಉಟಗನೂರು ಕರಿಬಸವೇಶ್ವರ ಜಾತ್ರೆ ಮಹೋತ್ಸವ ನಡೆದಿದ್ದು ಕರಿಬಸವೇಶ್ವರನಿಗೆ ವಿಶೇಷ ಪೂಜೆ ರುದ್ರಾಭಿಷೇಕ ಮೆರವಣಿಗೆ ನಡೆದವು .ಜಾತ್ರೆಯ ಪ್ರಯುಕ್ತ ಸಾಮೂಹಿಕ ವಿವಾಹ ಹಮ್ಮಿಕೊಂಡಿದ್ದು ಒಟ್ಟಾರೆ 12 ನವ ಜೋಡಿಗಳು ಹಸೇಮಣಿ ಏರಿ ಹೊಸ ಜೀವನ ಪ್ರಾರಂಭ ಮಾಡಿದರು ಈ ಕಾರ್ಯಕ್ರಮದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಮತ್ತು ಕಾರ್ಯಕ್ರಮದಲ್ಲಿ ಕನಕಗಿರಿ ಕ್ಷೆತ್ರದ ಮಾಜಿ ಶಾಸಕರ ಬಸವರಾಜ್ ದಡೇಸುಗೂರ್ ರವರ ಸುಪುತ್ರರಾದ ಮೌನೇಶ್ ದಡೆಸೂಗೂರು ರವರು ಪಾಲ್ಗೊಂಡಿದ್ದು ಹಾಗೂ ನೂತನ ವಧು ವರರಿಗೆ ಸರ್ವರು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕನಕಗಿರಿ ಮಂಡಲ ಅಧ್ಯಕ್ಷರಾದ ಸಣ್ಣ ಕನಕಪ್ಪ, ಪ್ರ. ಕಾರ್ಯದರ್ಶಿಗಳಾದ ಗ್ಯಾನಪ್ಪ ಗಾಣದಾಳ ಮತ್ತು ಪ್ರಕಾಶ ಹಾದಿಮನಿ, ಮುಖಂಡರಾದ ರಾಜಾ ಶರತ್ ಚಂದ್ರ ನಾಯಕ ಧಣಿ, ಗುರುಮೂರ್ತಿಗೌಡ, ಜೀಲಾನಿಸಾಬ್, ಯುವ ಮೋರ್ಚಾ ಪ್ರ. ಕಾರ್ಯದರ್ಶಿಗಳಾದ ವಿನಾಯಕ ಚಿತ್ತರಕಿ, ಒಬಿಸಿ ಮೊರ್ಚಾ ಅಧ್ಯಕ್ಷರು ಹಾಗೂ ಕನಕಗಿರಿ ನೂತನ ಪಿಕಾರ್ಡ್ ಬ್ಯಾಂಕ್ ನಿರ್ದೇಶಕರಾದ ಹರೀಶ್ ಪೂಜಾರ್, ಯುವ ಮುಖಂಡರಾದ ಅಚ್ಚಪ್ಪ ಹನುಮನಾಳ, ಹನುಮಂತಪ್ಪ, ಮಾಳಪ್ಪ, ಬಸವರಾಜ್, ಭೀರಪ್ಪ ಹಾಗೂ ಗ್ರಾಮಸ್ಥರು ಅನೇಕರು ಉಪಸ್ಥಿತರಿದ್ದರು
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ 8867257737

Related Articles

Leave a Reply

Your email address will not be published. Required fields are marked *

Back to top button