ದಲಿತರ ಭೂಮಿ- ವಸತಿ ಹಕ್ಕಿಗಾಗಿ ಮತ್ತು ಶಹಾಪುರ ತಾಲೂಕಿನ ಇತರೆ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನಾ ಧರಣಿ

ದಲಿತರ ಭೂಮಿ- ವಸತಿ ಹಕ್ಕಿಗಾಗಿ ಮತ್ತು ಶಹಾಪುರ ತಾಲೂಕಿನ ಇತರೆ ಹಕ್ಕೋತ್ತಾಯಗಳಿಗೆ ಆಗ್ರಹಿಸಿ ಪ್ರತಿಭಟನಾ ಧರಣಿ
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ತಾಲೂಕು ಸಮಿತಿ ಶಹಪುರ ಜಿಲ್ಲಾ ಯಾದಗಿರಿ. ಸರ್ಕಾರದ ಗಮನಕ್ಕೆ ತರಬಯಸುವುದೇನೆಂದರೆ ಭೂಮಿ ಒಂದು ಉತ್ಪಾದನಾ ಸಾಧನವಾಗಿದೆ. ಭೂಮಿ ಉಳ್ಳವರಿಗೆ ಸಾಮಾಜಿಕ. ಘನತೆಯನ್ನು ಹಾಗೂ ಆಳುವ ವರ್ಗವಾಗಿ ಸಮಾಜವನ್ನು ನಿಯಂತ್ರಿಸುವ ಅಧಿಕಾರವನ್ನು ನೀಡುತ್ತದೆ. ವೈದಿಕ ಧರ್ಮ ಅರ್ಥಾತ್ ಬ್ರಾಹ್ಮಣ ಧರ್ಮ ತಲಕಲಾಂತರಗಳಿಂದ ದಲಿತರ ಭೂಮಿ ಹಾಗೂ ನೈಸರ್ಗಿಕ ಸಂಪತ್ತಿನಿಂದ ವಂಚಿಸುತ್ತಾ ಬಂದಿದೆ. ಸ್ವತಂತ್ರ ಭಾರತದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಂದೋಲನದಿಂದಾಗಿ ದಲಿತ
ದಮನಿತರಲ್ಲಿ ಬೆಳೆಯುತ್ತಿರುವ ಸಾಮಾಜಿಕ ಮತ್ತು ವರ್ಗ ಪ್ರಜ್ಞೆಯಿಂದ ಬ್ರಾಹ್ಮಣಶಾಹಿ ಬಂಡವಾಳಶಾಹಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ
ಬಾಬಾ ಸಾಹೇಬರ ಸೈದ್ಧಾಂತಿಕ ನೆಲೆಯಲ್ಲಿ ದಲಿತರ ಚಳುವಳಿ ಭೂಮಿ ಶಿಕ್ಷಣ ಉದ್ಯೋಗ ಉಂಟಾದ ಮನುಷ್ಯನ ಮೂಲಭೂತ ಅವಶ್ಯಕತೆಗಾಗಿ ಆಳುವ ಪ್ರಭುತ್ವದೊಂದಿಗೆ ನಿರಂತರ ಸಂಘರ್ಷ ನಡೆಸುತ್ತಾ ಬಂದಿದೆ ಕಳೆದ ನಾಲ್ಕು ದಶಕಗಳಿಂದ ದಲಿತರ ಭೂಮಿ ಹಕ್ಕಿಗಾಗಿ ನಡೆಸಿದ ಹೋರಾಟದಲ್ಲಿ. ದರಖಾಸ್ತು ಜಮೀನು ಮಂಜೂರು ಮಾಡುವ ಕಾಯ್ದೆ ಜಾರಿಗೆ ತಂದಿತ್ತು. ಇಂದಿಗೂ ಸಹ ಸರ್ಕಾರದ ಅಧಿಕೃತ ಅಂಕಿ ಅಂಶಗಳ ಪ್ರಕಾರ ರಾಜ್ಯದ ಒಟ್ಟು ಭೂಮಿಯಲ್ಲಿ ದಲಿತರು ಕೇವಲ 11% ಭೂಮಿ ಮಾತ್ರ ಹೊಂದಿರುತ್ತಾರೆ, ಇದರಲ್ಲಿ ನೀರಾವರಿ ಪ್ರದೇಶ ಭೂಮಿ ಅತ್ಯಲ್ಪವಾಗಿರುತ್ತದೆ. 70ರ ದಶಕದಲ್ಲಿ ಮಾನ್ಯ ಬಿ.ಬಸಲಿಂಗಪ್ಪ ರವರ ದೂರದೃಷ್ಟಿಯ ಫಲವಾಗಿ ಪಿ.ಟಿ.ಸಿ.ಲ್ ಕಾಯ್ದೆ ಜಾರಿಗೆ ಬಂದಿದ್ದರು ಸಹ ಜಾತಿವಾದಿಗಳ ಹಾಗೂ ಅಧಿಕಾರ ಶಾಹಿಯ ಮಸಾಲತ್ತಿನಿಂದ ಮತ್ತು ಸರ್ಕಾರಗಳ ಕುತಂತ್ರದಿಂದ ಪಿ.ಟಿ.ಸಿ.ಎಲ್ ಜಮೀನುಗಳ ಪ್ರಕರಣಗಳಲ್ಲಿ ದಲಿತ ಸಮುದಾಯಗಳು ಕೋರ್ಟ್ ಗಳಿಗೆ ಅಲಿಯುತ್ತಾ ವಂಚನೆಗೆ ಒಳಗಾಗಿದ್ದಾರೆ. ಈ ಹಿನ್ನೆಲೆಯಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ರಾಜ್ಯ ಸಮಿತಿ ಹೆಂಡಬೇಡ ಭೂಮಿ ಬೇಕು ಎನ್ನುವ ಘೋಷಣೆಯನ್ನು 80ರ ದಶಕದಲ್ಲಿ ಮೋಳಗಿಸಿದರು. ಅದೇ ರೀತಿ ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ
ದಲಿತರನ್ನು ಅರಣಭೂಮಿ ಸಾಮಾಜಿಕ ಅರಣ್ಯೀಕರಣ.
ಗೋವುಗಳ ಗೋಮಾಳಗಳಿಗೆ ಕಾಯ್ದಿರಿಸುವ ನೆಪದಲ್ಲಿ ಒಕ್ಕಲಿಬ್ಬಿಸುವುದನ್ನು ಖಂಡಿಸುತ್ತೇವೆ. ಹಾಗೂ ದಲಿತರಿಗೆ ಮಂಜೂರಾಗಿರುವ ಭೂಮಿಯನ್ನು ಸರ್ಕಾರಗಳು ಕೈಗಾರಿಕಾ ಸ್ಥಾಪನೆಗಾಗಿ ವಿದೇಶಿ ಬಂಡವಾಳ ಗಾರರಿಗೆ ಈ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿರುವುದು ದಲಿತರನ್ನು ಸಂಪೂರ್ಣವಾಗಿ ಭೂಮಿಯಿಂದ ಹೊರ ದಬ್ಬುವ ಕುತಂತ್ರವಾಗಿದೆ. ದರ್ಖಾಸ್ತು ಭೂಮಿ ಸಕ್ರಮಿಕಿರಣ ಶಾಸಕರುಗಳ ಅಧ್ಯಕ್ಷತೆಯಲ್ಲಿರುವ ಸಮಿತಿಗಳು ನಿರ್ಲಕ್ಷದಿಂದ ಸಭೆಗಳು ನಡೆಯದೆ ಫಾರಂ 54 53 57. ಸಲ್ಲಿಸಿರುವ ದಲಿತ ತಳ ಸಮುದಾಯಗಳ ಅರ್ಜಿಗಳು ರಾಶಿಗಟ್ಟಲೆ ಕೊಳೆಯುತ್ತಾ ಬಿದ್ದಿವೆ ಅವುಗಳಲ್ಲಿ ಜಿಪಿಎಸ್ ಮೂಲಕ ಉಳುಮೆ ಮಾಡುತ್ತಿಲ್ಲವೆಂದು ಹೇಳಿ ಸಾವಿರಾರು ಅರ್ಜಿಗಳನ್ನು ವಜಾ ಮಾಡಲಾಗಿದೆ. ಈ ಬಗ್ಗೆ ಸರ್ಕಾರವನ್ನು ಎಚ್ಚರಿಸಲು ಹಾಗೂ ದಲಿತರ ಭೂಮಿ ವಸತಿ ಹಕ್ಕು ಇತರೆ ಗೊತ್ತಾಯಗಳಿಗೆ ಆಗ್ರಹಿಸಿ 18 ಜುಲೈ 2025ರಂದು ಪ್ರಥಮ ಹಂತವಾಗಿ ಭೂಮಿ ಮಂಜೂರಾತಿಗೆ ಅಗ್ರಹಿಸಿ ಪ್ರತಿಭಟನಾಧಾರಣೆ ಹಮ್ಮಿಕೊಳ್ಳಲಾಗಿದೆ. ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರವಾದ ತಾಲೂಕ ಸಮಿತಿ ಶಹಾಪುರ ಈ ಮೂಲಕ ಸರ್ಕಾರಕ್ಕೆ ಒತ್ತಾಯಿಸಿ ಮನವಿ ಮಾಡಿಕೊಂಡು ವಿವಿಧ ಹಕ್ಕೋತಾಯಗಳಿಗೆ ಸಮಿತಿಯು ಒತ್ತಾಯಿಸುತ್ತದೆ.
ಈ ಪ್ರತಿಭಟನೆಯಲ್ಲಿ ಹಿರಿಯ ದಲಿತ ಮುಖಂಡರಾದ ಮಲ್ಲಿಕಾರ್ಜುನ್ ಪೂಜಾರಿ ಅವರು. ತಾಲೂಕ್ ಸಂಚಾಲಕರಾದ ಚಂದ್ರಕಾಂತ್ ಭಜೆರಿ. ಜಿಲ್ಲಾ ಮಹಿಳಾ ಸಂಚಾಲಕಿಯರಾದ ಸುನಂದ ಮದ್ರಕಿ. ಜಿಲ್ಲಾ ಸಂಘಟನಾ ಸಂಚಾಲಕರಾದ ಬಸವರಾಜ್ ಅಣಬಿ. ಜಿಲ್ಲಾ ಸಂಘಟನಾ ಸಂಚಾಲಕರಾದ ಪರಶುರಾಮ್ ಮಹಲ್ ರೋಜಾ. ಜಿಲ್ಲಾ ಸಮಿತಿ ಸದಸ್ಯರಾದ ಅನಿಲ್ ಕುಮಾರ್ ಸಾಕ್ರೆ. ತಾಲೂಕ್ ಸಂಘಟನಾ ಸಂಚಾಲಕರಾದ ಮಾನಪ್ಪ ಮುದುಕನವರ್. ತಾಲೂಕು ಸಂಘಟನಾ ಸಂಚಾಲಕರಾದ ಮಹಾಂತೇಶ್ ಪೂಜಾರಿ. ತಾಲೂಕು ಸಂಘಟನಾ ಸಂಚಾಲಕರಾದ ಪ್ರಭು ಬಡಿಗೇರ್. ತಾಲೂಕ ಸಂಘಟನಾ ಸಂಚಾಲಕರಾದ ಮರಿಯಪ್ಪ ಮಹಲರೊಜ. ಹಾಗೂ ಅನೇಕ ದಲಿತ ನಾಯಕರು ಭಾಗವಹಿಸಿದ್ದರು.




