ಸಂಪಾದಕೀಯ

ಭಾರತಕ್ಕೆ, ಡಾನ್ನಾ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ತನ್ನ ಮಹತ್ವದ ಕೊಡುಗೆಯನ್ನು ನೀಡುತ್ತಿದೆ.

ಭಾರತಕ್ಕೆ, ಡಾನ್ನಾ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ತನ್ನ ಮಹತ್ವದ ಕೊಡುಗೆಯನ್ನು ನೀಡುತ್ತಿದೆ. ಬೆಂಗಳೂರು .9, 2026: ಇಂಟೆಲಿಜೆಂಟ್ ಟ್ರಾನ್ಸ್‌ ಪೋರ್ಟ್ರೇಶನ್ ಸಿಸ್ಟಮ್ಸ್ (ITS) ವಿಭಾಗದ ಅಡಿಯಲ್ಲಿ ನಡೆದ “ಬಿಲ್ಡ್ ಇಂಡಿಯಾ ಇನ್‌ಫಾ ಅವಾರ್ಡ್ಸ್ 2026” ಕಾರ್ಯಕ್ರಮದಲ್ಲಿ ಪ್ರತಿಷ್ಠಿತ “ಇನ್ನೊವೇಶನ್ ಇನ್ ವಿಹಿಕಲ್ ಸೇಫ್ಟಿ” ಪ್ರಶಸ್ತಿಯನ್ನು ಡಾನ್ಹಾ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ಬೆಂಗಳೂರು ಸಂಸ್ಥೆಯು ಪಡೆದಿರುವುದಾಗಿ ತಿಳಿಸಲು ಸಂತೋಷಿಸುತ್ತದೆ.
ಈ ಪ್ರಶಸ್ತಿಯನ್ನು 2026ರ ಫೆಬ್ರವರಿ 24ರಂದು, ನವದೆಹಲಿಯಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾರತ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ಸದರಿ ಪ್ರಶಸ್ತಿಯನ್ನು ಡಾನ್ಹಾ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ರಾಜು ದಂಡು ಅವರಿಗೆ ನೀಡಿ ಗೌರವಿಸಿದರು. ಬೆಂಗಳೂರಿನಲ್ಲಿ ಯಶಸ್ವಿಯಾಗಿ ಪ್ರದರ್ಶಿಸಲಾದ V2X ಗ್ರೀನ್ ಕಾರಿಡಾರ್ ಪ್ರಾಜೆಕ್ಟ್ ಫಾರ್ ಪ್ರಾಯಾರಿಟಿ ಅಂಡ್ ಎಮರ್ಜಿನ್ನಿ ಮೊಬಿಲಿಟಿ ಯೋಜನೆಗಾಗಿ ಡಾನ್ನಾ ಸಂಸ್ಥೆಗೆ ಈ ಮಾನ್ಯತೆ ಲಭಿಸಿದೆ.
ಡಾನ್ಸಾ ಸಂಸ್ಥೆಯ ನೆಕ್ಸ್-ಜೆನೆರೇಷನ್ ಸಿಕ್ಯೂರ್ V2X ಪ್ಲಾಟ್‌ಫಾರ್ಮ್ ಹಾಗೂ ವಿಹಿಕಲ್-ಟು-ವಿಹಿಕಲ್ (V2V) ಸಂವಹನ ತಂತ್ರಜ್ಞಾನ ವ್ಯವಸ್ಥೆಯ ಮೂಲಕ ಆಂಬ್ಯುಲೆನ್ಸ್ ಮುಂತಾದ ತುರ್ತು ವಾಹನಗಳಿಗೆ ಟ್ರಾಫಿಕ್ ಜಂಕ್ಷನ್‌ಗಳಲ್ಲಿ ಸಿಗ್ನಲ್ ಆದ್ಯತೆಯನ್ನು ಒದಗಿಸಿ ಆಸ್ಪತ್ರೆಗೆ ವೇಗವಾಗಿ ತಲುಪಲು ಸಹಾಯ ಮಾಡುವ ಹಾಗೂ ಅಮೂಲ್ಯ ಜೀವಗಳನ್ನು ಉಳಿಸಲು ಮಹತ್ವದ ಸಾಧ್ಯತೆಯನ್ನು ಈ ತಂತ್ರಜ್ಞಾನವು ಒದಗಿಸುತ್ತದೆ.
ಡಾನಾ ಸಂಸ್ಥೆಯ ಈ ತಂತ್ರಜ್ಞಾನ ವ್ಯವಸ್ಥೆಯನ್ನು ಸಾರ್ವಜನಿಕ ಸಾರಿಗೆ ವಾಹನಗಳಿಗೂ ಬಳಸಬಹುದು, ಇದರಿಂದ ಟ್ರಾಫಿಕ್ ತುಂಬಿರುವ ಪ್ರದೇಶಗಳಲ್ಲಿ ಸಂಚಾರ ಸುಗಮವಾಗುತ್ತದೆ. ಸುತ್ತಮುತ್ತಲಿನ ವಾಹನಗಳು, ರಸ್ತೆ ಮೂಲಸೌಕರ್ಯಗಳು ಹಾಗೂ ಟ್ರಾಫಿಕ್ ವ್ಯವಸ್ಥೆಗಳೊಂದಿಗೆ ಸಂವಹನ ನಡೆಸುವಂತೆ ಮಾಡಿ ರಸ್ತೆ ಸುರಕ್ಷತೆ, ಸಂಚಾರ ಕಾರ್ಯಕ್ರಮತೆ ಮತ್ತು ಸಾರಿಗೆ ನಿರ್ವಹಣೆಯನ್ನು ಬುದ್ಧಿವಂತಿಕೆಯಿಂದ ಸುಧಾರಿಸುತ್ತದೆ.
ಕೇಂದ್ರ ಸಚಿವರಾದ ಶ್ರೀ ನಿತಿನ್ ಗಡ್ಕರಿ ಅವರು ರಸ್ತೆ ಸುರಕ್ಷತಾ ತಂತ್ರಜ್ಞಾನಗಳ ಭವಿಷ್ಯದ ಕುರಿತು ಮಾತನಾಡುತ್ತಾ, ಡಾನ್ನಾ ಸಂಸ್ಥೆಯ ನೆಕ್ಸ್-ಜೆನೆರೇಷನ್ ಸಿಕ್ಯೂರ್ V2X ಪ್ಲಾಟ್‌ಫಾರ್ಮ್ ಹಾಗೂ ವಿಹಿಕಲ್-ಟು-ವಿಹಿಕಲ್ (V2V) ಸಂವಹನ ತಂತ್ರಜ್ಞಾನ ವ್ಯವಸ್ಥೆಯ ಮಹತ್ವವನ್ನು ಉಲ್ಲೇಖಿಸಿ, ಮುಂದಿನ ವರ್ಷಗಳಲ್ಲಿ ಇಂತಹ ವ್ಯವಸ್ಥೆಗಳನ್ನು ವಾಹನಗಳಲ್ಲಿ ಪರಿಚಯಿಸುವ ದಿಶೆಯಲ್ಲಿ ಭಾರತ ಸರ್ಕಾರ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಡಾನ್ಹಾ ಗ್ರೂಪ್‌ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ರಾಜು ದಂಡು ಅವರ ಹೇಳಿಕೆ
ನಿತಿನ್ ಗಡ್ಕರಿ ಅವರಿಂದ ಈ ಗೌರವವನ್ನು ಸ್ವೀಕರಿಸುವುದು ನಮಗೆ ಅತ್ಯಂತ ಗೌರವದ ವಿಷಯವಾಗಿದೆ. ಸಂಪರ್ಕಿತ ವಾಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಡಾನಾ ಸಂಸ್ಥೆಯ ಹಲವು ತಂಡಗಳು ಹಲವಾರು ದಶಕಗಳಿಂದ ನಡೆಸುತ್ತಿರುವ ಆವಿಷ್ಕಾರಗಳಿಗೆ ಸಂದ ಪ್ರತಿಫಲವೇ ಈ ಪ್ರಶಸ್ತಿಯಾಗಿರುತ್ತದೆ. V2X ಮುಂತಾದ ಪರಿಹಾರಗಳು ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಬುದ್ಧಿವಂತ ಸಾರಿಗೆ ವ್ಯವಸ್ಥೆಗಳ ಅಭಿವೃದ್ಧಿಗೆ ಮಹತ್ವದ ಪಾತ್ರವಹಿಸುತ್ತವೆ.”
ಡಾನ್ಹಾ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ಕುರಿತು:
ಡಾನಾ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ಭಾರತದಲ್ಲಿ 26 ವರ್ಷಕ್ಕೂ ಹೆಚ್ಚು ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸೇವೆಗಳ ಅನುಭವ ಹೊಂದಿರುವ ಕನಕೈಡ್ ವಿಹಿಕಲ್ ಟೆಕ್ನಾಲಜೀಸ್ ಕ್ಷೇತ್ರದ ಮುಂಚೂಣಿಯ ಸಂಸ್ಥೆಯಾಗಿದೆ. ಕಂಪನಿಯು ಆಟೋಮೋಟಿವ್ ಗ್ರಾಹಕರಿಗಾಗಿ ಟೆಲಿಮ್ಯಾಟಿಕ್ಸ್, ವಿಹಿಕಲ್-ಟು-ಎವಿಥಿಂಗ್ (V2X) ಕಮ್ಯುನಿಕೇಶನ್, ವಿಹಿಕಲ್ ಎಲೆಕ್ಟ್ರಾನಿಕ್ಸ್ ಹಾಗೂ ಇಂಟೆಲಿಜೆಂಟ್ ಮೊಬಿಲಿಟಿ ಸಿಸ್ಟಮ್ಸ್ ಕ್ಷೇತ್ರಗಳಲ್ಲಿ ಸುಧಾರಿತ ಪರಿಹಾರಗಳನ್ನು ಅಭಿವೃದ್ಧಿಪಡಿಸುತ್ತದೆ.
ಡಾನ್ಹಾ ಸಂಸ್ಥೆ ಭಾರತದ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಗರಗಳಲ್ಲಿ ಇಂಜಿನಿಯರಿಂಗ್ ಕೇಂದ್ರಗಳನ್ನು ನಡೆಸುತ್ತಿದ್ದು ಗೋವಾ ರಾಜ್ಯದಲ್ಲಿ ಉತ್ಪಾದನಾ ಘಟಕವನ್ನು ಹೊಂದಿದೆ. ಸಂಶೋಧನೆ, ಇಂಜಿನಿಯರಿಂಗ್ ಶ್ರೇಷ್ಠತೆ ಮತ್ತು ಭವಿಷ್ಯದ ತಲೆಮಾರಿನ ಮೊಬೈಲಿಟಿ ತಂತ್ರಜ್ಞಾನಗಳಲ್ಲಿ ಹೂಡಿಕೆ ಮಾಡುವ ಮೂಲಕ, ಜಾಗತಿಕ ಸಂಪರ್ಕಿತ ಮೊಬೈಲಿಟಿ ಪರಿಸರ ವ್ಯವಸ್ಥೆಯಲ್ಲಿ ಬೆಳೆಯುತ್ತಿರುವ ಭಾರತಕ್ಕೆ, ಡಾನ್ನಾ ಟೆಕ್ನಾಲಜೀಸ್ ಇಂಡಿಯಾ ಲಿಮಿಟೆಡ್ ಸಂಸ್ಥೆಯು ತನ್ನ ಮಹತ್ವದ ಕೊಡುಗೆಯನ್ನು ನೀಡುತ್ತಿದೆ.
Regd. ಕಚೇರಿ ಘಟಕ ಸಂಖ್ಯೆ. 201, 202 & 203, ಗೌರಾ ಫೌಂಟೇನ್‌ಹೆಡ್, ಹುಡಾ ಟೆಕ್ನೋ ಎನ್‌ಕ್ಲೇವ್, ಪತ್ರಿಕಾನಗರ, ಮಾದಾಪುರ,

danlawtech.com ಬಗ್ಗೆ ಮಾಹಿತಿ. ವೆಬ್‌ಸೈಟ್ www.danlawtechnologies.com ವರದಿ. ಮಂಜುಳಾ ರೆಡ್ಡಿ

Related Articles

Leave a Reply

Your email address will not be published. Required fields are marked *

Back to top button