ಸಂಪಾದಕೀಯ
ಬೈಲಕುಂಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಹಲವಾರು ಗ್ರಾಮಗಳಲ್ಲಿ ನಿನ್ನೆ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಬಡವರ ಮನೆಗಳ ಹಾನಿ

ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ಬೈಲಕುಂಟಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಹಲವಾರು ಗ್ರಾಮಗಳಲ್ಲಿ ನಿನ್ನೆ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಬಡವರ ಮನೆಗಳ ಹಾನಿ ಮೇ 21. 2026 ರಂದು ಮುಂಗಾರು ಮಳೆ ರಾತ್ರಿ 11: ಗಂಟೆಗೆ ಗುಡುಗು ಬಿರುಗಾಳಿ ಸಮೇತ ಸುರಿದ ಮಳೆಗೆ ಗ್ರಾಮಗಳಲ್ಲಿ ವಿದ್ಯುತ್ ಕಂಬ ಮರಗಳು ನೆಲಕ್ಕೆ ಬಿದ್ದಿರುವುದರಿಂದ ಹಲವಾರು ಮನೆಗಳಿಗೆ ಹಾನಿಯಾಗಿದ್ದು ಹಾಗೂ ಭಾರಿ ಗಾಳಿಯಿಂದಾಗಿ ಪತ್ರಸಿನ ಮನೆಗಳು ಗಾಳಿಗೆ ಹಾರಿ ಹೋಗಿ ಸುಮಾರು 100 200 ಮೀಟರ್ವರೆಗೆ ಹಾರಿ ಹೋಗಿದ್ದು ಯಾವುದೇ ಜೀವ ಆನಿ ಆಗಿಲ್ಲ ರಾತ್ರಿ ಸಮಯ ಇರುವುದರಿಂದ ಸಣ್ಣ ಪುಟ್ಟ ಗಾಯವಾಗಿದ್ದು ಬೆಳಗಿನ ಜಾವ 10: ಗಂಟೆ ಕಳೆದರೂ ಯಾರೊಬ್ಬರೂ ಗ್ರಾಮ ಪಂಚಾಯತಿ ಅಧಿಕಾರಿಗಳಾಗಲಿ ಸಿಬ್ಬಂದಿಗಳಾಗಲಿ ರಸ್ತೆಗಳಲ್ಲಿ ಬಿದ್ದಿರುವ ವಿದ್ಯುತ್ ಕಂಬಗಳು ಹಾಗೂ ವಾಯರ್ಗಳು ಮರಗಳನ್ನು ತೆರವು ಮಾಡದೆ ಇರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು
ಗುಂಡಪ್ಪ ಜೈ ಬೋಗಿ ಯಾದಗಿರಿ





