ಸಂಪಾದಕೀಯ

ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಅರ್ಚಕರಿಂದ ಅಭಿನಂದನೆ ಸಮಾರಂಭ ಬೆಂಗಳೂರು.

ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಅರ್ಚಕರಿಂದ ಅಭಿನಂದನೆ ಸಮಾರಂಭ ಬೆಂಗಳೂರು. ರಾಮಲಿಂಗಾರೆಡ್ಡಿ ಅವರಿಗೆ ಮುಜರಾಯಿ ಅರ್ಚಕರಿಂದ ಅಭಿನಂದನೆ ಸಮಾರಂಭ ಏರ್ಪಡಿಸಲಾಗಿದೆ ಎಂದು ಅರ್ಚಕರ ಸಂಘದವರು ಇಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತಿಳಿಸಿದರು . ಮುಜರಾಯಿ ಖಾತೆಯನ್ನು ವಹಿಸಿಕೊಂಡ ನಂತರ 1947ನೇ ಇಸವಿಯಿಂದ 2023ರ ವರೆಗೆ ಅನೇಕ ಸರ್ಕಾರಗಳು ಬಂದವು ಹೋದವು. ಅನೇಕ ಮಂತ್ರಿಗಳು ಬಂದರು ಹೋದರು, ಆದರೆ ರಾಮಲಿಂಗಾರೆಡ್ಡಿರವರು ಮುಜರಾಯಿ ಖಾತೆ ವಹಿಸಿಕೊಂಡ ನಂತರ ಮನವಿ ನೀಡಿದ ಒಂದೇ ದಿನದಲ್ಲಿ ಹಲವಾರು ಆದೇಶಗಳನ್ನು ಮಾಡಿ ಇತಿಹಾಸ ನಿರ್ಮಿಸಿದ್ದಾರೆ. ರಾಜ್ಯ ಮುಜರಾಯಿ ದೇವಾಲಯಗಳ ವರ್ಗಗಳ ಅನೇಕ ಅರ್ಚಕರು ಸದುಪಯೋಗ ಪಡಿಸಿಕೊಂಡು ಸಂತೃಪ್ತರಾಗಿದ್ದಾರೆ. ಅರ್ಚಕರ ಬೃಹತ್ ಸಮಾವೇಶ ನಡೆಸಿ ಸಾವಿರಾರು ಅರ್ಚಕರನ್ನು ಸೇರಿಸಿ ಸನ್ಮಾನ ಮಾಡಲು
ಆಗಸ್ಟ್ 5, ಬುದವಾರ ರಂದು ಬೆಂಗಳೂರು ವಸಂತ ನಗರದಲ್ಲಿರುವ ಡಾ:ಬಿ.ಆರ್. ಅಂಬಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದೇವೆ. ಇದಕ್ಕೆ ರಾಜ್ಯದ ಜನಪ್ರಿಯ ಮುಖ್ಯ ಮಂತ್ರಿಗಳಾದ ಶ್ರೀಯುತ ಡಿ.ಕೆ. ಶಿವಕುಮಾರ್ ರವರು ಉಪಮುಖ್ಯ ಮಂತ್ರಿಗಳಾದ ಶ್ರೀಯುತ ಡಾ: ಜಿ ಪರಮೇಶ್ವರ ರವರು ಆಗಮಿಸಲಿದ್ದು, ಶ್ರೀಯುತ ರಾಮಲಿಂಗಾರೆಡ್ಡಿಯವರಿಗೆ ಅಭಿನಂದನಾ ಸಮಾರಂಭ ಹಾಗೂ ಬೃಹತ್ ಸಮಾವೇಶವನ್ನು ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀಯುತ ಡಿ.ಕೆ ಶಿವಕುಮಾರ್ ರವರು ತಮ್ಮ ಅಮೃತ ಹಸ್ತದಿಂದ ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು .ಈ ಸಮಾವೇಶಕ್ಕೆ ಅನೇಕ ಗಣ್ಯಾತಿ ಗಣ್ಯರು ರಾಜ್ಯದ ಮೂಲೆ ಮೂಲೆಗಳಿಂದ ಅರ್ಚಕರು ಸಹ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ.ಹಾಗೂ ರಾಜ್ಯದ ಎಲ್ಲಾ ಪತ್ರಿಕಾ ಮತ್ತು ದೃಶ್ಯ ಮಾಧ್ಯಮಗಳ ವರದಿಗಾರರು ಸಹ ಆಗಮಿಸುತ್ತಿದ್ದಾರೆ. ಇದನ್ನು ತಮ್ಮ ಪತ್ರಿಕಾ ಹಾಗೂ ಟಿ.ವಿ. ಮಾಧ್ಯಮಗಳಲ್ಲಿ ವರದಿ ಮಾಡಬೇಕಾಗಿ ತಮ್ಮಲ್ಲಿ ಕಳಕಳಿಯಿಂದ ವಿನಂತಿಸುತ್ತೇವೆ.
…. ತಸ್ತೀಕ್ ಪಡೆಯುವ ಅರ್ಚಕರಿಗೆ ಮಾಸಿಕ 10,000 ರೂ.ಗಳ ಗೌರವ ಧನ ನೀಡುವುದು.
65 ವರ್ಷ ದಾಟಿದ ಮುಜರಾಯಿ ದೇವಾಲಯಗಳ ಅರ್ಚಕರಿಗೆ ಮಾಸಿಕ 5,000 ರೂ. ಪಿಂಚಣಿ ನೀಡುವುದು.
ಈ ಬಾರಿಯ ಬಜೆಟ್‌ನಲ್ಲಿ ತಸ್ತೀಕ್ ಮೊತ್ತವನ್ನು 72,000 ರೂ.ಗಳಿಂದ 1,20,000 ರೂ.ಗಳಿಗೆ ಹೆಚ್ಚಿಸುವುದು
ಬಡ ಮುಜರಾಯಿ ದೇವಾಲಯಗಳ ಅರ್ಚಕರ ಮಕ್ಕಳಿಗೆ ನೀಡುತ್ತಿರುವ ವಿದ್ಯಾನಿಧಿಯನ್ನು ಹೆಚ್ಚಿಸುವುದು.
ಸಿ ವರ್ಗಗಳ ಮುಜರಾಯಿ ದೇವಾಲಯಗಳ ಅರ್ಚಕರು ಮರಣ ಹೊಂದಿದ್ದಲ್ಲಿ ನೀಡುತ್ತಿರುವ 2 ಲಕ್ಷ ಪರಿಹಾರ ಹಣವನ್ನು 5 ಲಕ್ಷ ರೂ.ಗಳಿಗೆ ಹೆಚ್ಚಿಸುವುದು.
ಶಿಥಿಲಗೊಂಡಿರುವ ಮುಜರಾಯಿ ದೇವಾಲಯಗಳಿಗೆ ಜೀರ್ಣೋದ್ಧಾರ ಮಾಡಲು ಹೆಚ್ಚು ಅನುದಾನ ನೀಡುವುದು.
ದೇವಾಲಯಗಳ ಆವರಣದಲ್ಲಿರುವ ಖಾಲಿ ಜಾಗದಲ್ಲಿ ಅರ್ಚಕರಿಗೆ ವಸತಿ ಗೃಹಗಳನ್ನು ಸರ್ಕಾರದಿಂದಾಗಲಿ, ಇಲಾಖೆಯ ಸಾಮಾನ್ಯ ಸಂಗ್ರಹಣ ನಿಧಿಯಿಂದ ಉಚಿತವಾಗಿ ಕಟ್ಟಿಸಿಕೊಡುವುದು.
ನೂರಾರು ವರ್ಷಗಳ ಹಿಂದಿನಿಂದಲೂ ದೇವಾಲಯಗಳ ಇನಾಂ ಜಮೀನುಗಳನ್ನು ಅರ್ಚಕರೇ ಉಳುಮೆ ಮಾಡಿದ ಅನುಭವದಲ್ಲಿದ್ದು ದೇವಾಲಯಗಳ ನಿರ್ವಹಣೆ ಮಾಡಿಕೊಂಡು ಬಂದಿರುತ್ತಾರೆ. ಇಂತಹ ಜಮೀನುಗಳನ್ನು ಅರ್ಚಕರ ಹೆಸರಿಗೆ ರೀಗ್ರಾಂಟ್ ಮಾಡಲು ಆದೇಶ ಮಾಡುವುದು.
ಇತ್ತೀಚೆಗೆ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಮುಜರಾಯಿ ದೇವಾಲಯಗಳಿ ಪೂಜೆ ಮಾಡುತ್ತಿರುವ ಅರ್ಚಕರ ಮೇಲೆ ದೌರ್ಜನ್ಯ ನಡೆಯುತ್ತಿದ್ದು ಹೆಚ್ಚಾಗಿರುತ್ತದೆ. ಇದನ್ನು ತಡೆಗಟ್ಟಲು ಸೂಕ್ತ ಕಾನೂನು ತಂದು ಅರ್ಚಕರಿಗೆ ರಕ್ಷಣೆ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ, ಪೋಲಿಸ್ ಇಲಾಖೆಗಳಿಗೆ ಸೂಕ್ತ ನಿರ್ದೇಶನ ನೀಡಿ ಆದೇಶಿಸುವುದು.
ರಾಜ್ಯದ ಎ ಮತ್ತು ಬಿ ವರ್ಗಗಳ ದೇವಾಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ರೂಲ್ 8ರ ನೌಕರರಿಗೆ 5 ಮತ್ತು 6ನೇ ವೇತನ ನೀಡಲು ಆದೇಶಿಸುವ ಬಗ್ಗೆ.
. ರಾಜ್ಯದಲ್ಲಿ 37,000 ದೇವಾಲಯಗಳಿರುತ್ತವೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ವಿಧಾನ ಪರಿಷತ್‌ ಸದಸ್ಯರನ್ನು ನೇಮಕ ಮಾಡುವಂತೆ ಮುಜರಾಯಿ ಧಾರ್ಮಿಕ ಕ್ಷೇತ್ರದಲ್ಲೂ ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡಲು ಮನವಿ. ನಮ್ಮ ಸಂಘವು ಸತತವಾಗಿ 55 ವರ್ಷಗಳಿಂದ ಮುಜರಾಯಿ ದೇವಾಲಯಗಳ ಪರವಾಗಿ ಅರ್ಚಗರ ಸಮಸ್ಯೆಗಳಿಗೆ ಇಲಾಖೆ ಮಟ್ಟದಲ್ಲಿ, ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡುತ್ತಾ ಬಂದಿರುತ್ತದೆ. ದೂರದ ಜಿಲ್ಲೆ ಮತ್ತು ತಾಲ್ಲೂಕುಗಳಿಂದ ವಿವಿಧ ಕಾರ್ಯಗಳಿಗೆ ಬೆಂಗಳೂರಿನ ಆಯುಕ್ತರ ಕಛೇರಿ, ವಿಧಾನಸೌಧ, ವಿಕಾಸಸೌಧ, ಬಹುಮಹಡಿಗಳ ಕಟ್ಟಡ, ಇಲ್ಲಿನ ಕಛೇರಿಗಳಿಗೆ ಬರುವ ಅರ್ಚಕರಿಗೆ ಉಳಿದುಕೊಳ್ಳಲಿ, ಸ್ನಾನ-ಸಂಧ್ಯಾವಂದನೆಗಳು ಮಾಡಲು ಸ್ಥಳಾವಕಾಶವಿರುವುದಿಲ್ಲ. ಬಡ ಅರ್ಚಕರ ಮಕ್ಕಳಿಗೆ ವಿವಿಧ ಆಗಮಗಳ ರೀತಿ ಪಾಠಶಾಲೆ ಮಾಡಲು ನಮ್ಮ ಸಂಘಕ್ಕೆ ಯಾವುದೇ ಕಟ್ಟಡ, ಕಛೇರಿಗಳಿಗೆ ಜಾಗ ಇಲ್ಲದಿರುವುದರಿಂದ ಜಾಗವನ್ನಾಗಲಿ, ಕಟ್ಟಡವನ್ನಾಗಲೀ ನೀಡಬೇಕೆಂದು ಮಾನ್ಯ ಮುಖ್ಯಮಂತ್ರಿಗಳಲ್ಲೂ, ಮುಜರಾಯಿ ಸಚಿವರಲ್ಲೂ ಮತ್ತು ಎಲ್ಲಾ ಸಚಿವರಲ್ಲು ಮನವಿ ಮಾಡಿದರು. ಶ್ರೀ ವಾಚಾ ಕೆ.ಎಸ್. ಮೂರ್ತಿ, ಅನಂತ ಮೂರ್ತಿ , ಮುಂತಾದವರು ಉಪಸ್ಥಿತರಿದ್ದರು . ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button