ಸಂಪಾದಕೀಯ

ಅಭಿಮಾನ್ ಸ್ಟುಡಿಯೋ ಜಾಗವನ್ನು ಸರ್ಕಾರ ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಳ್ಳಬೇಕೆಂದು ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ವತಿಯಿಂದ ಮನವಿ.

ಅಭಿಮಾನ್ ಸ್ಟುಡಿಯೋ ಜಾಗವನ್ನು ಸರ್ಕಾರ ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಳ್ಳಬೇಕೆಂದು ಡಾ।। ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ವತಿಯಿಂದ ಮನವಿ..

ಅಭಿಮಾನ್ ಸ್ಟುಡಿಯೋ ಆವರಣ 10 ಗುಂಟೆ ಜಾಗದಲ್ಲಿ ಡಾ| ವಿಷ್ಣುವರ್ಧನ್ ರವರ ಮಂದಿರ ಸಮಾಧಿಯನ್ನು ಸರ್ಕಾರದ ಆದೇಶವಿಲ್ಲದೆ ದಿನಾಂಕ:-08-08-2025ರಂದು ಧ್ವಂಸ ಮಾಡಿರುತ್ತಾರೆ. ಕೂಡಲೇ ರಾಜ್ಯ ಅರಣ್ಯ ಇಲಾಖೆಯು ಅಭಿಮಾನ್ ಸ್ಟುಡೀಯೋ ಜಾಗವನ್ನು ವಶಪಡಿಸಿಕೊಂಡು ಡಾ| ವಿಷ್ಣುವರ್ಧನ್ ರವರ ಮಂದಿರ ಪುನರ್ ನಿರ್ಮಾಣ ಮಾಡಲು 10 ಗುಂಟೆ ಜಾಗವನ್ನು ನೀಡಬೇಕು.

ಟ್ರಸ್ಟ್ ವತಿಯಿಂದ ಕರ್ನಾಟಕ ರಾಜ್ಯ ಅರಣ್ಯ ಪ್ರದೇಶದಲ್ಲಿ ಹೊಂದುಕೊಂಡಂತೆ 20 ಗುಂಟೆ ಜಾಗವನ್ನು ಕೊಡಲು ಸಿದ್ದರಿದ್ದೆವೆ (ಸರ್ಕಾರದ) ಅರಣ್ಯ ಇಲಾಕೆಯ ಷರತ್ತುಗಳಿಗೆ ಈ ಮೇಲ್ಕಂಡ ಟ್ರಸ್ಟ್ ಒಪ್ಪಿಗೆ ಪತ್ರ ಬರೆದುಕೊಡುತ್ತೇವೆ. ತಾವುಗಳು ಕೂಡಲೇ ಅಭಿಮಾನ್ ಸ್ಟುಡಿಯೋ ಜಾಗವನ್ನು ಸರ್ಕಾರದ ಅರಣ್ಯ ಇಲಾಖೆಯವರು ವಶಪಡಿಸಿಕೊಳ್ಳಬೇಕೆಂದು ಈ ಮೇಲ್ಕಂಡ ಟ್ರಸ್ಟ್ ವತಿಯಿಂದ ಮನವಿ ಹಾಗೂ ನಾಡಿನ ಡಾ|| ವಿಷ್ಣುವರ್ಧನ್ ರವರ ಕೋಟ್ಯಾತರ ಅಭಿಮಾಗಳ ಬೇಡಿಕೆ ಎಂದು ವಿಷ್ಣು ಸೇನಾ ಅಧ್ಯಕ್ಷ ರಾಜುಗೌಡ ತಿಳಿಸಿದ್ದಾರೆ

2003/2004ರಲ್ಲಿ 10 ಎಕ್ಕರೆ ಜಾಗವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಅಭಿಮಾನ್ ಸ್ಟುಡಿಯೋ ಅಭಿವೃದ್ಧಿ ಪಡಿಸಿಲ್ಲ. ದಿನಾಂಕ: 16-07-2003ರ ಸರ್ಕಾರದ ಅದೇಶವನ್ನು ಉಲ್ಲಂಘನೆ ಮಾಡಿದ್ದಾರೆ.

ಅಭಿಮಾನ್ ಸ್ಟುಡೀಯೋ ಮಾಲೀಕರು ದಿನಾಂಕ:- 16-08-2021ರಂದು 1 ಎಕ್ಕರೆ ಜಾಗವನ್ನು ರೂ. 14,37,15,000/- ರೂಗಳಿಗೆ ರಾಘವೇಂದ್ರ ಬಿ ಕೆ ಮ್ಯಾನೇಜಿಂಗ್ ಡೈರೆಕ್ಟರ್ ಪವಾನಿ ಟೆವೆಲಪರ್ಸ್ ರವರಿಗೆ ಮಾರಾಟ ಮಾಡಿ ಶುದ್ಧ ಕ್ರಯದ ಕರಾರು ಪತ್ರವನ್ನು ಮಾಡಿ ಮುಂಗಡ ಹಣವಾಗಿ ರೂ. 3,00,00,000/- ರೂಪಾಯಿಗಳನ್ನು ಪಡೆದಿರುತ್ತಾರೆ ಇಲ್ಲು ಸರ್ಕಾರದ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ತಿಳಿಸಿದರು.!
ಸರ್ಕಾರದ ಕಂದಾಯ ಇಲಾಖೆಯ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ, ಮುಖ್ಯ ಪ್ರಧಾನ ಕಾರ್ಯದರ್ಶಿಗಳು ಕಂದಾಯ ಇಲಾಖೆ ಬಹುಮಹಡಿಗಳ ಕಟ್ಟಡ, ಕಂದಾಯ ಇಲಾಖೆ ಸಚಿವರಿಗೆ, ಹಾಗು ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರಕ್ಕೆ,, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ,ಅರಣ್ಯ ಸಚಿವರಿಗೆ, ಅರಣ್ಯಭವನ ಮುಖ್ಯಸ್ಥರು IFC ರಾಜ್ಯ ಅರಣ್ಯ ಇಲಾಖೆ, ಮುಖ್ಯ ಪ್ರಧಾನ ಕಾರ್ಯದರ್ಶಿಗಳು ಅರಣ್ಯ ಇಲಾಖೆ ಬಹು ಮಹಡಿಗಳ ಕಟ್ಟಡ,ಹಾಗು ಉಪ ಸಂರಕ್ಷಣಾಧಿಕಾರಿಗಳು, ಎಸ್ಐಟಿ ರಾಜ್ಯ ಘಟಕ ಬೆಂಗಳೂರು-15 ಈಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳು ಈಗಾಗಲೇ ಎಲ್ಲಾ ದಾಖಲೆಗಳೊಂದಿಗೆ ರಾಜುಗೌಡರು ಮನವಿ ಕೊಟ್ಟಿದ್ದಾರೆ, ಅಭಿಮಾನ್ ಸ್ಟುಡಿಯೋ ಜಾಗವನ್ನು ಅರಣ್ಯ ಇಲಾಖೆ ವಶಕ್ಕೆ ತೆಗೆದುಕೊಳ್ಳಲು ಎರಡು ಎರಡು ಸಾರಿ ಮನವಿ,ಕೋರಿಕೆ,ಬೇಡಿಕೆ, ಒತ್ತಡ,,,, ಮಾಡಿದ್ದೀನಿ ಎಂದು ರಾಜುಗೌಡ್ರು ತಿಳಿಸಿದರು. ವರದಿ. ಮಂಜುಳಾ ರೆಡ್ಡಿ..

Related Articles

Leave a Reply

Your email address will not be published. Required fields are marked *

Back to top button