ಸಂಪಾದಕೀಯ

ಇಂಡೇನ ಸಿಲಿಂಡರ್ ಗ್ಯಾಸ್ 59ನೇ ಸ್ಥಾಪನಾ ದಿನಾಚರಣೆಹ.ಬೊ.ಹಳ್ಳಿ : 22-10-2024

ಇಂಡೇನ ಸಿಲಿಂಡರ್ ಗ್ಯಾಸ್ 59ನೇ ಸ್ಥಾಪನಾ ದಿನಾಚರಣೆ
ಹ.ಬೊ.ಹಳ್ಳಿ : 22-10-2024
ದಿನಾಂಕ: 22-10-2024 ರಂದು ಹಗರಿಬೊಮ್ಮನಹಳ್ಳಿಯ (ವಿಜಯನಗರ ಜಿಲ್ಲೆ) ಶ್ರೀ ಮಾತಾಗ್ಯಾಸ್ ಸರ್ವೀಸ್ ಏಜೆನ್ಸಿ ವತಿಯಿಂದ 59ನೇ ವರ್ಷದ ಸ್ಥಾಪನಾ ದಿನಾಚರಣೆಯನ್ನು ಹ.ಬೊ.ಹಳ್ಳಿಯ ತಮ್ಮ ಕಛೇರಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಕೇಕ್ ಕತ್ತರಿಸಿ ಪಟಾಕಿ ಸಿಡಿಸಿ ಕೇಕ್ ಮತ್ತು ಸಿಹಿ ಕಾರಗಳನ್ನು ಹಂಚಿ ಸಂಭ್ರಮಾಚರಣೆ ಮಾಡಿದರು. ಸ್ಥಾಪನಾ ದಿನಾಚರಣೆಯ ನೆನಪಿನ ಕಾಣಿಕೆಯಾಗಿ ಗ್ರಾಹಕರಿಗೆ ಸಿಲೆಂಡರ್ ಗ್ಯಾಸ್ ಲೈಟರ್ ಉಚಿತವಾಗಿ ವಿತರಿಸಿದರು.
ಸಂಭ್ರಮಾಚರಣೆಯಲ್ಲಿ ಶ್ರೀ ಮಾತಾ ಗ್ಯಾಸ್ ಏಜೆನ್ಸಿಯ ಮ್ಯಾನೇಜರ್ ಎನ್.ಶೆಕ್ಷಾವಲಿ ಕಾರ್ಯಕ್ರಮದಲ್ಲಿ ಮಾತನಾಡಿ ನಮ್ಮ ಸಂಸ್ಥೆಯು ಗ್ರಾಹಕರಿಗೆ ಪ್ರಾಮಾಣಿಕವಾಗಿ ನಿಗದಿತ ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ಸಿಲೆಂಡರ್ ಒದಗಿಸಿ ಪ್ರಾಮಾಣಿಕ ಸೇವೆಯನ್ನು ಸಲ್ಲಿಸುತ್ತಿದ್ದೇವೆ. ಹಾಗಾಗಿ ನಮ್ಮ ಕಂಪನಿಯು ಜನಸಾಮಾನ್ಯರಿಗೆ ನಂಬಿಕೆಗೆ ಅರ್ಹವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿಬ್ಬಂದಿ ವರ್ಗದವರಾದ ಆರ್.ಎಸ್.ಸ್ವಾಮಿ, ಪಂಪಾಪತಿ ಹಾಗೂ ಇತರರು ಭಾಗವಹಿಸಿದ್ದರು.
ವರದಿ :
ಮಹೇಶ್ ಮಾದೂರು,
ಜಿಲ್ಲಾ ಮುಖ್ಯ ವರದಿಗಾರರು,
ವಿಜಯನಗರ ಜಿಲ್ಲೆ.

Related Articles

Leave a Reply

Your email address will not be published. Required fields are marked *

Back to top button