ಇವರು ಶಾಲಾ ಶಿಕ್ಷಕರಾ? ಅಥವಾ ಬಾಣಸೀಗರಾ? ವಿಜಯಲಕ್ಷ್ಮಿ ಧಾರವಾಡಕರ್.
ಮೊದಲು ಶಿಕ್ಷಕರೆಂದರೆ ಶಾಲೆಯಲ್ಲಿ ಪಾಠ ಮಾಡುವವರು.ಎಂದುಕೊಂಡಿದ್ದರು .
ಈಗ ಹಾಗಿಲ್ಲ.
ನಿತ್ಯ ಮೊಟ್ಟೆ ತರಕಾರಿ,ದಿನಸಿ ತರುವವರು.
ಸಾಲದೆಂಬಂತೆ ಮೊಟ್ಟೆಯನ್ನು ತೂಕ ಮಾಡಿ ನಿಗದಿತ ತೂಕದ ಮೊಟ್ಟೆ ಮಾತ್ರ ಕೊಡಬೇಕಂತೆ.
ದಿನಾ ಮೊಟ್ಟೆ ಇಳಿಸಿದ ತಕ್ಷಣ ಒಂದೊಂದೇ ಮೊಟ್ಟೆ ತೂಕ ಮಾಡಿ ಕಡಿಮೆ ತೂಕದ ಮೊಟ್ಟೆ ವಾಪಸ್ ಮಾಡಬೇಕಾ? ಅಲ್ಲಿಯತನಕ ಮೊಟ್ಟೆ ಇಳಿಸುವವನು ಕಾಯುತ್ತಾ ಕೂರುತ್ತಾನಾ?
ಇನ್ನು ಅಂಗಡಿಯಿಂದ ತರೋಣ ಅಂದು ಕೊಳ್ಳಿ. ಅಂಗಡಿಯವರು ಒಂದು ಸಲಕ್ಕೆ 300-400 ಮೊಟ್ಟೆ ತೂಕ ಮಾಡುತ್ತಾ ಕೂರುತ್ತಾರಾ?
ಸರಿ ಅವರು ತೂಕ ಮಾಡಿ ಕೊಟ್ಟರು ಎಂದಿಟ್ಟುಕೊಳ್ಳೋಣ.ಇಷ್ಟು ಮೊಟ್ಟೆಯನ್ನು ಶಾಲೆತನಕ ಕೊಂಡೊಯ್ಯೋದು ಹೇಗೆ.ಮಲೆನಾಡಿನಲ್ಲಿ ಪಾಳುಬಿದ್ದ ರಸ್ತೆ,ಬಸ್ ಸಂಪರ್ಕವೂ ಇಲ್ಲದ ಅದೆಷ್ಟೋ ಶಾಲೆಗಳಿವೆ.ಬೈಕ್ ನಲ್ಲಿ ಇಷ್ಟೊಂದು ಮೊಟ್ಟೆ ಕೊಂಡ್ಡೊಯ್ಯೋದು ಹೇಗೆ? ದಾರಿಮಧ್ಯೆ ಕೆಲ ಮೊಟ್ಟೆ ಒಡೆದು ಹೋಗ್ತವೇ. ಇವರು ಒಂದು ಮೊಟ್ಟೆಗೆ 5.20 ಕೊಡ್ತಾರೆ. ಮಾರ್ಕೆಟ್ ನಲ್ಲಿ 7.00 ₹ 6.00₹ ಬೆಲೆ ಇದೆ.ಪ್ರತಿದಿನ ಈ ಹೆಚ್ಚುವರಿ ಹಣವನ್ನ ಶಿಕ್ಷಕರೇ ಹಾಕಬೇಕು.ಜೊತೆಗೆ ಒಡೆದ ಮೊಟ್ಟೆಗೆ ದಂಡ ಇವರದ್ದೇ.
ಅದು ಸಾಲದೆಂಬಂತೆ ಸರ್ಕಾರಿ ಮೊಟ್ಟೆ ಲೆಕ್ಕ,ಅಜೀಂ ಪ್ರೇಂಜಿ ಮೊಟ್ಟೆ ಲೆಕ್ಕ ಅಂಥಾ ಹತ್ತಾರು ಕಾಲಂಗಳಲ್ಲಿ ದಿನಂಪ್ರತಿ ಲೆಕ್ಕ ಬರೆದಿಡಬೇಕು.ತಿಂಗಳಾದ ತಕ್ಷಣ ಇಲಾಖೆಗೆ ಮಾಹಿತಿ ಕೊಡಬೇಕು. ಚೂರೂ ವ್ಯತ್ಯಾಸ ಆಗದಂತೆ.
ಈಗಿರೋ ರೆಕಾರ್ಡ್ ಮೈನ್ಟೈನ್ ಮಾಡೋದೇ ಅರ್ಧ ದಿನದ ಕೆಲಸ ಒಬ್ಬ ಶಿಕ್ಷಕರಿಗೆ.ಇದರ ಜೊತೆ ದಿನ ಮೊಟ್ಟೆ ಕೊಟ್ಟು ಅದನ್ನ ತೂಗಿ ಬರೆದು…..
ಇಶ್ಟೆಲ್ಲಾ ಮಾಡುವಾಗ ಒಬ್ಬರು ಇಬ್ಬರು /ಮೂವರು ಶಿಕ್ಷಕರು ಇರುವ ಶಾಲೆಯಲ್ಲಿ ಪಾಠ ಮಾಡಲು ಸಾದ್ಯವೇ?
ಇದರ ನಡುವೆ ಹಾಲು ಕೊಡಬೇಕು. ತರಕಾರಿ ಬೆಲೆ ವಿಪರೀತ ಏರಿದೆ.ಇವ್ರು ಕೊಡುವ ಹಣದಲ್ಲಿಮಕ್ಕಳಿಗೆ ಪೌಷ್ಟಿಕಾಂಶ ಇರುವ ತರಕಾರಿ ಆಹಾರ ಪೂರೈಸುವುದು ಹೇಗೆ?
ಎಷ್ಟು ಅಂಥಾ ನಮ್ಮ ಸಂಬಳದ ಹಣವನ್ನೇ ಬಳಸುವುದು ಎನ್ನುವುದು ಶಿಕ್ಷಕರ ಪ್ರಶ್ನೆ.ಇದಕ್ಕೆ ಉತ್ತರ ಮಾತ್ರ ಇಲ್ಲ.ಪಾಪ ಅವರಿಗೂ ಸಂಸಾರ ಎನ್ನುವುದು ಇರ್ತದಲ್ಲಾ!



