ಪುಸ್ತಕಗಳು ಭೌದ್ಧಿಕ ಜ್ಞಾನ ಭಂಡಾರ: ಬಜರಂಗ ಬಲಿ.

ಪುಸ್ತಕಗಳು ಭೌದ್ಧಿಕ ಜ್ಞಾನ ಭಂಡಾರ: ಬಜರಂಗ ಬಲಿ
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳ ಶಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡ
ಆಂತರಿಕ ಗುಣಮಟ್ಟ ಭರವಸೆ ಕೋಶ ಅಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕ ಪ್ರದರ್ಶನ ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶಪಾಲರಾದ ಬಜರಂಗ ಬಲಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ದೆಸೆಯಲ್ಲಿಯೇ ಕಠಿಣ ಪರಿಶ್ರಮ ಪಟ್ಟು ವಿದ್ಯಾರ್ಥಿಗಳಾದ ತಾವು ಉನ್ನತ ಹುದ್ದೆಗಳು ಹೊಂದಬೇಕು ಎಂದರು. ಪುಸ್ತಕಗಳ ಹೃದಯ ಭಾಗವೇ ಗ್ರಂಥಾಲಯ, ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ಹಂತದಲ್ಲೂ ಕೂಡ ಹೊಸ ಕಲಿಕೆ ಅವಶ್ಯಕ ಸತತ ಪರಿಶ್ರಮ ಅಗತ್ಯ, ಇಂದಿನಿಂದ ಎಲ್ಲಾ ವಿದ್ಯಾರ್ಥಿಗಳು ಐ. ಎ.ಎಸ್. ಕೆ.ಎ.ಎಸ್ ಬ್ಯಾಂಕಿಂಗ್ ಕ್ಷೇತ್ರ, ಹೀಗೆ ನಾನಾ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಭ್ಯಾಸ ಮಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿವಿಧ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು. ನಂತರ ವಿದ್ಯಾರ್ಥಿಗಳಿಗೆ ಪುಸ್ತಕ ಪ್ರದರ್ಶನ ಮಾಡಲಾಯಿತು. ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಲಲಿತಾ ಎನ್ ಕೆ, ವೀರೇಶ್, ಕೆಂಗಲ್, ಮರ್ವಿನ್ ಡಿಸೋಜ, ಅಶಿಕಾ ಎಚ್.ಸಿ., ಉಪನ್ಯಾಸಕರಾದ ಗೋಪಾಲ್, ರವಿಕುಮಾರ್, ಸೈಯದ್ ಖಲಿಲುಲ್ಲಾ ಖಾದ್ರಿ, ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ




