ಸಂಪಾದಕೀಯ

ಬೆಂಗಳೂರು ನಗರದಲ್ಲಿ ಶ್ರೀ ಶ್ರೀ ರಾಮಾಂಡಚಾರ್ಯ ನರೇಂದ್ರಾಚಾರ್ಯ ಮಾರ್ಗದರ್ಶನ ಹಾಗೂ ದರ್ಶನ ಕಾರ್ಯಕ್ರಮ – ಬಾಳಾಸಾಹೇಬ್ ಪೊಳ್.

ಬೆಂಗಳೂರು ನಗರದಲ್ಲಿ ಶ್ರೀ ಶ್ರೀ ರಾಮಾಂಡಚಾರ್ಯ ನರೇಂದ್ರಾಚಾರ್ಯ ಮಾರ್ಗದರ್ಶನ ಹಾಗೂ ದರ್ಶನ ಕಾರ್ಯಕ್ರಮ – ಬಾಳಾಸಾಹೇಬ್ ಪೊಳ್

ಬೆಂಗಳೂರು: 21 ಮಾರ್ಚ್
ಜಗದ್ಗುರು ರಾಮಾನಂದಾಚಾರ್ಯ ನರೇಂದ್ರಾಚಾರ್ಯ, ದಕ್ಷಿಣಪೀಠ, ನಾಣಿಜಧಾಮ, (ರತ್ನಾಗಿರಿ) ಇವರ ದಿವ್ಯ ಉಪಸ್ಥಿತಿಯಲ್ಲಿ ನಗರದಲ್ಲಿ ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಶಂಕರಪುರಂನ ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಸಮೀಪವಿರುವ ‘ಶ್ರೀ ಚಂದ್ರಶೇಖರ ಭಾರತೀ ಕಲ್ಯಾಣ ಮಂಟಪ’ದಲ್ಲಿ ಬೆಳಿಗ್ಗೆ 9 ಗಂಟೆಯಿಂದ ಸಮಸ್ಯೆ ಮಾರ್ಗದರ್ಶನ ಹಾಗೂ ದರ್ಶನ ಕಾರ್ಯಕ್ರಮ’ ನಡೆಯಲಿದೆ.
ನೀವು ಬಾಳಿರಿ, ಇತರರನ್ನು ಬಾಳಿಸಿರಿ” ಎಂಬ ಸಂದೇಶದೊಂದಿಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಭಕ್ತರ ಸಮಸ್ಯೆಗಳಿಗೆ ಗುರುಗಳು ಮಾರ್ಗದರ್ಶನ ನೀಡಲಿದ್ದಾರೆ.
ಸಂಸ್ಥೆಯು ಅನೇಕ ಸಾಮಾಜಿಕ ಚಟುವಟಿಕೆಗಳನ್ನು ನಡೆಸುತ್ತದೆ. ಗ್ರಾಮ ಸ್ವಚ್ಛತಾ ಅಭಿಯಾನ, ಶೈಕ್ಷಣಿಕ ಚಟುವಟಿಕೆಗಳ ಅಡಿಯಲ್ಲಿ ಉಚಿತ ಇಂಗ್ಲಿಷ್ ಮಾಧ್ಯಮ ಶಾಲೆ, ಉಚಿತ ವೇದಪಾಠ ಶಾಲೆ, ರಕ್ತದಾನ ಶಿಬಿರಗಳು, ವೈದ್ಯಕೀಯ ಚಟುವಟಿಕೆಗಳ ಅಡಿಯಲ್ಲಿ ಉಚಿತ ಚಿಕಿತ್ಸಾಲಯಗಳು, 185 ಮರಣೋತ್ತರ ದೇಹದಾನಗಳು ಹಾಗೂ 143 ಅಂಗಾಂಗ ದಾನಅನ್ನು ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಿಗೆ ವಿತರಿಸಲಾಗಿದೆ, ರಾಷ್ಟ್ರೀಯ ಹೆದ್ದಾರಿಯಲ್ಲಿ 53 ಆಂಬ್ಯುಲೆನ್ಸ್‌ ಗಳು,24 ಗಂಟೆ ಅಪಘಾತದ ಸಂತ್ರಸ್ತರಿಗೆ ನಿರಂತರವಾಗಿ ಸೇವೆಗಳನ್ನು ಒದಗಿಸುತ್ತಿವೆ.

ಆರ್ಥಿಕವಾಗಿ ದುರ್ಬಲ ವರ್ಗಗಳ ಪುನರ್ವಸತಿ, ಮಹಿಳಾ ಸಬಲೀಕರಣದ ಅಡಿಯಲ್ಲಿ ಉಚಿತ ಹೊಲಿಗೆ ಯಂತ್ರಗಳ ವಿತರಣೆ, ತುರ್ತು ಸಹಾಯ ಚಟುವಟಿಕೆಗಳು, ಕಾನೂನು ಸಾಕ್ಷರತಾ ಶಿಬಿರಗಳು, ಈ ವರ್ಷದ ಜನವರಿಯಲ್ಲಿ ನಡೆಸಲಾದ ರಕ್ತದಾನ ಶಿಬಿರಗಳು, ಕೇವಲ 15 ದಿನಗಳಲ್ಲಿ 1,71,150 ರಕ್ತದ ಬಾಟಲಿಗಳನ್ನು ಸರ್ಕಾರಿ ವೈದ್ಯಕೀಯ ಆಸ್ಪತ್ರೆಗಳಿಗೆ ವಿತರಿಸಲಾಗಿದೆ, ಬ್ಲಡ್ ಇನ್ ನೀಡ್, ‘ಏಕ್ ಪೆಡ್ ಮಾ ಕೆ ನಾಮ್’ ಮರ ನೆಡುವ ಉಪಕ್ರಮದ ಅಡಿಯಲ್ಲಿ 1,11,426 ಮರಗಳನ್ನು ನೆಡಲಾಗಿದೆ.
ಈ ಕಾರ್ಯಕ್ರಮಕ್ಕೆ ಬರುವ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ.ಎಲ್ಲರೂ ತಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಹಾಜರಿದ್ದು, ರಾಮಾನಂದಾಚಾರ್ಯ ನರೇಂದ್ರಾಚಾರ್ಯರ ಧರ್ಮೋಪದೇಶ ಮತ್ತು ಸಮಸ್ಯೆ ಮಾರ್ಗದರ್ಶನದ ಪ್ರಯೋಜನ ಪಡೆಯಬೇಕೆಂದು, ಬೆಂಗಳೂರು ಪೀಠ ಪ್ರಮುಖರಾದ ಅಭಿಜಿತ್ ಅವಸರೆ, ಮಹೇಂದ್ರ ನಿಕಮ್, ಯೋಗೇಶ್ ಗೌಡ, ಬಾಳಾಸಾಹೇಬ್ ಪೊಳ್, ಜಗದೀಶ್ ಭೋಜೇ ಹಾಗೂ ಎಲ್ಲಾ ಸದಸ್ಯರು ಮನವಿ ಮಾಡಿದ್ದಾರೆ.
ವರದಿ. ಮಂಜುಳಾ ರೆಡ್ಡಿ.

Related Articles

Leave a Reply

Your email address will not be published. Required fields are marked *

Back to top button