ಸುದ್ಧಿ

ಬೇಡ ಏಪ್ರಿಲ್ ಫೂಲ್. ಇರಲಿ ಏಪ್ರಿಲ್ ಕೂಲ್. ಗಿಡ ಮರ ಬೆಳೆಸೊಣ ಬನ್ನಿ.

ಏಪ್ರಿಲ್ ಫೂಲ್ ಬದಲಾಗಿಏಪ್ರಿಲ್ ಕೂಲ್ಮಾಡೋಣ ಅಭಿಯಾನ” ( ಈ ಮೊದಲು ನೆಟ್ಟ ಗಿಡಗಳನ್ನು ನೀರು ಹಾಕಿ ವರ್ಷಪೂರ್ತಿ ಪೋಷಣೆ ಮಾಡುವದು, ಮನೆಯ ಮೇಲ್ಬಾಗದಲ್ಲಿ ಪಕ್ಷಿಗಳಿಗೆ ನೀರು & ಧಾನ್ಯಗಳನ್ನು ಇಡುವುದು & ಈ ಬಾರಿ ತಪ್ಪದೆ ಮತವನ್ನು ಹಾಕುವುದು)

   ಜಾಗತಿಕ ತಾಪಮಾನ ಏರಿಕೆಯನ್ನು ತಡೆಯುವುದು ಅಂತರರಾಷ್ಟ್ರೀಯ ಸಮುದಾಯದ ಮುಂದೆ ಈಗಿರುವ ಅತಿದೊಡ್ಡ ಸವಾಲು. ಅದು ಅನಿವಾರ್ಯವೂ ಹೌದು.

   ಉಷ್ಣತೆ ಒಂದೊಂದು ಡಿಗ್ರಿ ಸೆಲ್ಸಿಯಸ್ ಹೆಚ್ಚಾದರೂ ಅದರಿಂದ ಆಗುವ ಅನಾಹುತಗಳು ಅಪಾರ. ಧ್ರುವಗಳಲ್ಲಿ ಹಿಮ, ನೀರ್ಗಲ್ಲು ಕರಗಿ ಸಮುದ್ರದ ಮಟ್ಟ ಏರಬಹುದು, ಕಡಲ ತಡಿಯ ಜನವಸತಿ ಪ್ರದೇಶಗಳು ಮುಳುಗಬಹುದು, ಆಹಾರ ಉತ್ಪಾದನೆ ಕುಸಿಯಬಹುದು, ಮಳೆ ಏರುಪೇರಾಗಬಹುದು, ಜೀವ ಸಂಕುಲ ತೊಂದರೆಗೆ ಒಳಗಾಗಬಹುದು. 

    ಈ ಎಪ್ರಿಲ್ ಬೇಸಿಗೆಯಲ್ಲಿ 40 - 45 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುತ್ತದೆ. ನೀರಿನ ಕೊರತೆಯಿಂದ ಗಿಡ-ಮರಗಳು ಪಕ್ಷಿಗಳು ಪ್ರಾಣ ಕಳೆದುಕೊಳ್ಳುತ್ತೀವೆ ಅದಕ್ಕಾಗಿ ತಾವು ದಯಮಾಡಿ ಈ ಮೊದಲು ನೆಟ್ಟ ಗಿಡಗಳನ್ನು ನೀರುಹಾಕಿ ವರ್ಷಪೂರ್ತಿ ಪೋಷಣೆ ಮಾಡುವದು, ಹಾಗೂ ನಿಮ್ಮ ಮನೆಯ ಮೇಲ್ಬಾಗದಲ್ಲಿ  ಬಟ್ಟಲುಗಳಲ್ಲಿ  ನೀರು & ಧಾನ್ಯಗಳನ್ನು ಶೇಖರಿಸಿ  ಇಡುವುದರ ಮೂಲಕ ತಾಪಮಾನ &  ಜೀವಿಗಳನ್ನು ಕಾಪಾಡಲು ಕೈಜೋಡಿಸಬೇಕಾಗಿ ವಿನಂತಿ.

   ಈ ಕಾರ್ಯವನ್ನು ಮಾಡಿದ/  ಅಭಿಯಾಣದಲ್ಲಿ ಭಾಗಿಯಾದ ಫೋಟೋಗಳನ್ನು 8050501377 ಈ ನಂಬರ್‌ ವ್ಯಾಟ್ಸಾಪ್ ಗೆ ಕಳಿಹಿಸಿ. ಸಾಧ್ಯವಾದರೆ ಈ ಸಂದೇಶವನ್ನು ಕೆಲವು ಜಾಲ ತಾಣಗಳಲ್ಲಿ ಹಂಚಿ. ಪರಿಸರ & ಪಕ್ಷಿಗಳ ಪ್ರಾಣ ಉಳಿಸುವಲ್ಲಿ ಸಣ್ಣ ಅಳಿಲು ಸೇವೆ ಮಾಡುವ.
             ಮತ್ತು

ಎಪ್ರೀಲ್ 1ಕ್ಕೇ ಫೂಲ್ ಆದ್ರೇ ಒಂದು ದಿನ ಮಾತ್ರ ಫೂಲ್ ಆಗ್ತೀರಾ… ಈ ಬಾರಿ ಮತದಾನ ಮಾಡದೆ ಇದ್ರೆ ಬರೋಬ್ಬರಿ 5 ವರ್ಷ ಫೂಲ್ ಆಗ್ತೀರಾ..

ಆದ್ದರಿಂದ ಕೂಲ್ ಆಗಿ ಯೋಚಿಸಿ. ( ಕೃಪೆ)

Related Articles

Leave a Reply

Your email address will not be published. Required fields are marked *

Back to top button