ಆನೆಗೊಂದಿ ಉತ್ಸವ : ಮಾರ್ಚ 9, 10ರಂದು ವಿವಿಧ ಕ್ರೀಡಾ ಸ್ಪರ್ಧೆಗಳು

ಆನೆಗೊಂದಿ ಉತ್ಸವ : ಮಾರ್ಚ 9, 10ರಂದು ವಿವಿಧ ಕ್ರೀಡಾ ಸ್ಪರ್ಧೆಗಳು
ಆನೆಗೊಂದಿ ಎಲ್ಲಿ ಉತ್ಸವ ಅಂಗವಾಗಿ, ಮಾರ್ಚ 11 ಮತ್ತು ಮಾರ್ಚ 12ರಂದು ನಡೆಯಲಿರುವ ಪ್ರಸಿದ್ಧ ಆನೆಗೊಂದಿ ಉತ್ಸವದ ನಿಮಿತ್ತ ಮಾರ್ಚ 9 ಮತ್ತು ಮಾರ್ಚ 10ರಂದು ವಿವಿಧ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ.
ಮಾರ್ಚ 9ರ ಬೆಳಿಗ್ಗೆ 10 ಗಂಟೆಗೆ ಪ್ರೌಢಶಾಲೆ ಆನೆಗೊಂದಿಯಲ್ಲಿ ಪುರುಷರ ಮುಕ್ತ ಬಾಲ್‌ಬ್ಯಾಡ್ಮಿಂಟನ್ ಸ್ಪರ್ಧೆ ನಡೆಯಲಿದೆ. ಅದೇ ಸಮಯಕ್ಕೆ ಬೆಳಗ್ಗೆ 10 ಗಂಟೆಗೆ ಪ್ರಾಥಮಿಕ ಶಾಲೆ ಆನೆಗೊಂದಿಯಲ್ಲಿ ಪುರುಷರ ಮುಕ್ತ ಹಗ್ಗ-ಜಗ್ಗಾಟ ಸ್ಪರ್ಧೆಗಳು ನಡೆಯಲಿವೆ. ಸಂಜೆ 5 ಗಂಟೆಗೆ ಪ್ರಾಥಮಿಕ ಶಾಲೆ ಆನೆಗೊಂದಿಯಲ್ಲಿ ಪುರುಷರ ಮುಕ್ತ ವಿಶೇಷಚೇತನರ ಕಬಡ್ಡಿ ಸ್ಪರ್ಧೆ ನಡೆಯಲಿವೆ. ಸಂಜೆ 5.30ಕ್ಕೆ ಪ್ರಾಥಮಿಕ ಶಾಲೆ ಆನೆಗೊಂದಿಯಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಕಬಡ್ಡಿ ಸ್ಪರ್ಧೆಗಳು ನಡೆಯಲಿವೆ.
ಮಾರ್ಚ 10ರ ಬೆಳಗ್ಗೆ 6.30ಕ್ಕೆ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಮ್ಯಾರಥಾನ್ ಸ್ಪರ್ಧೆ, ಬೆಳಗ್ಗೆ 8 ಗಂಟೆಗೆ ಆನೆಗೊಂದಿ ಗ್ರಾಮದ ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಪ್ರಾಥಮಿಕ ಶಾಲೆ ಆನೆಗೊಂದಿಯಲ್ಲಿ ಬೆಳಿಗ್ಗೆ 10.00 ಗಂಟೆಗೆ ಪುರುಷರ ಮುಕ್ತ ಹ್ಯಾಂಡಬಾಲ್ ಸ್ಪರ್ಧೆ, ಪ್ರೌಢಶಾಲೆ ಆನೆಗೊಂದಿಯಲ್ಲಿ ಮಧ್ಯಾಹ್ನ 12 ಗಂಟೆಗೆ ಪುರುಷ ಮತ್ತು ಮಹಿಳೆಯರಿಗೆ ಕುಸ್ತಿ ಪಂದ್ಯಾವಳಿ ನಡೆಯಲಿವೆ ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಠ್ಠಲ್ ಜಾಬಗೌಡರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೌತಮ್ ಯಾದವ್ ಪ್ರಜಾ ಶ್ರೀ ಪತ್ರಿಕೆ ಕೊಪ್ಪಳ ಜಿಲ್ಲಾ ವರದಿಗಾರ



